ಭದ್ರಾ ಜಲಾನಯನ ಪ್ರದೇಶಗಳ ಜನರಿಗೆ ಶುಭಸುದ್ದಿ | ಜಲಾಶಯಕ್ಕೆ ಹೆಚ್ಚಿದ ಒಳಹರಿವು

bhadra dam water level today

ಭದ್ರಾ ಜಲಾನಯನ ಪ್ರದೇಶಗಳ ಜನರಿಗೆ ಶುಭಸುದ್ದಿ | ಜಲಾಶಯಕ್ಕೆ ಹೆಚ್ಚಿದ ಒಳಹರಿವು
bhadra dam water level today

SHIVAMOGGA | MALENADUTODAY NEWS | Jun 26, 2024  ಮಲೆನಾಡು ಟುಡೆ  

ಶಿವಮೊಗ್ಗ ಸೇರಿದಂತೆ ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಜಿಟಿಮಳೆಯ ಸಂಭ್ರಮ ಒಂದು ಕಡೆಯಾದರೆ, ಇನ್ನೊಂದೆಡೆ ಜಲಾಶಯಗಳಿಗೆ ಉತ್ತಮ ನೀರಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯ ಒಳ್ಳೆಯ ಒಳಹರಿವನ್ನ ಕಾಣುತ್ತಿದೆ. 

ಕೆಎಸ್‌ಎನ್‌ಡಿಎಂಸಿಯ (KSNDMC ) ವರದಿ ಪ್ರಕಾರ, ಭದ್ರಾ ಡ್ಯಾಂಗೆ ಕಳೆದ 24 ಗಂಟೆ ಅವಧಿಯಲ್ಲಿ ಬರೋಬ್ಬರಿ 2276 ಕ್ಯೂಸೆಕ್ಸ್‌ ನೀರು ಹರಿದುಬಂದಿದೆ. ಒಟ್ಟಾರೆ ಜೂನ್‌ ಒಂದರಿಂದ ಇಲ್ಲಿವರೆಗೂ ಡ್ಯಾಂ 1.98 ಟಿಎಂಸಿ ನೀರು ಹರಿದು ಬಂದಿದೆ. ಇವತ್ತಿನ ಜಲಾಶಯದ ಮಟ್ಟ 631.61 ಅಡಿಯಷ್ಟಿದೆ ರಷ್ಟಿದೆ, ಕಳೆದ ವರ್ಷ 642.80 ರಷ್ಟಿತ್ತು. ಇನ್ನೂ ಜುಲೈ ಆಗಸ್ಟ್‌ನ ಮಳೆಯಿಂದಾಗಿ ಜಲಾಶಯದಲ್ಲಿ ಮತ್ತಷ್ಟು ನೀರು ಭದ್ರವಾಗುವ ಸೂಚನೆ ಸಿಕ್ಕಿದೆ.