ಶಿವಮೊಗ್ಗದಲ್ಲಿ ಹುಲಿ ಚರ್ಮದ ಚರ್ಚೆ ತಾರಕಕ್ಕೆ!? ಏನಿದು ವಿನಯ್ ಗುರೂಜಿ ವಿಚಾರ!?

Tiger claw, tiger skin and Vinay Guruji ಹುಲಿ ಉಗುರು, ಹುಲಿ ಚರ್ಮ ಮತ್ತು ವಿನಯ್ ಗುರೂಜಿ ವಿಚಾರ

ಶಿವಮೊಗ್ಗದಲ್ಲಿ ಹುಲಿ ಚರ್ಮದ ಚರ್ಚೆ ತಾರಕಕ್ಕೆ!?   ಏನಿದು ವಿನಯ್ ಗುರೂಜಿ ವಿಚಾರ!?

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS

ಸದ್ಯ ಎಲ್ಲೆಡೆ ಹುಲಿ ಉಗುರಿನ ಚರ್ಚೆ ನಡೆಯುತ್ತಿದೆ. ಇದರ ನಡುವೆ ಗೌರಿಗದ್ದೆ ಆಶ್ರಮ ವಿನಯ್ ಗುರೂಜಿ ಬಳಸುತ್ತಿದ್ದರು ಎನ್ನಲಾಗದ ಹುಲಿ ಚರ್ಮದ ವಿವಾದ ಶಿವಮೊಗ್ಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೆ ಕೆಲವೊಂದು ಸ್ಪಷ್ಟನೆ ಕೂಡ ಲಭ್ಯವಾಗಿದೆ. 

 

READ : ಶಿವಮೊಗ್ಗದಲ್ಲಿಯು ನಡೆಯಲಿದೆ ಶಿವದೂತ ಗುಳಿಗ ಪ್ರದರ್ಶನ! ಏನಿದು ವಿಶೇಷ ಗೊತ್ತಾ?.

ಹುಲಿಚರ್ಮದ ವಿಚಾರವಾಗಿ ಅದನ್ನು ವಿನಯ್​ ಗುರೂಜಿ ನೀಡಿದವರು ಎನ್ನಲಾದ ಅಮರೇಂದ್ರ ಕಿರೀಟಿಯವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಕೆಲವೊಂದು ದಾಖಲೆಗಳನ್ನು ಸಹ ನೀಡಿದ್ದಾರೆ.ತಮ್ಮ ಬಳಿ 80 ವರ್ಷದ ಹಿಂದಿನ ಹುಲಿ ಚರ್ಮ ಇತ್ತು. ತಮ್ಮ  ತಾತನ ಕಾಲದಿಂದ ಮನೆಯಲ್ಲಿ  ಹುಲಿ ಚರ್ಮವಿತ್ತು, ಅದಕ್ಕೆ ಸಂಬಂಧಿಸಿದಂತೆ  1975 ರಲ್ಲಿ ಅರಣ್ಯ  ಇಲಾಖೆಯಿಂದ  ಚರ್ಮ ಬಳಕೆಗೆ ಅನುಮತಿ ಪಡೆದಿದ್ದೇವೆ. ಈ ಕುರಿತಾದ  ಎಲ್ಲ ದಾಖಲೆ ನಮ್ಮ ಬಳಿ ಇದೆ ಎಂದಿದ್ದಾರೆ. 

ಅಲ್ಲದೆ  2019ರಲ್ಲಿ  ಈ ಹುಲಿ  ಚರ್ಮ ವನ್ನು ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿಯವರಿಗೆ ನೀಡಿದ್ದೆ. ಆನಂತರ ಅವರು ಹುಲಿ ಚರ್ಮದ ಮೇಲೆ ಕುಳಿತ ವಿಡಿಯೋ ವೈರಲ್ ಆಗಿತ್ತು. ಅದಾದ ಬಳಿಕ ಅವರು ಚರ್ಮವನ್ನು ವಾಪಸ್ ನೀಡಿದ್ದರು. ಆನಂತರ ಹುಲಿ ಚರ್ಮವನ್ನು  ವಾಪಸ್  ಅರಣ್ಯ ಇಲಾಖೆಗೆ ನೀಡಿರುವೆ ಎಂದು ತಿಳಿಸಿದ್ದಾರೆ. 

ವನ್ಯಜೀವಿ ಡಿಎಫ್‌ಓ ಚಂದ್ರಶೇಖರ್‌ ಅವರಿಂದ ಅನುಮತಿ  ಪಡೆದು ಹುಲಿ ಚರ್ಮಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನ ಕೈಗೊಳ್ಳಲಾಗಿತ್ತು. ಆನಂತರ ಅರಣ್ಯ ಅಧಿಕಾರಿಗಳ ಸಲಹೆಯಂತೆ,  2022ರ ಲ್ಲಿ ಈ ಹುಲಿಚರ್ಮನ್ನು ಗುರೂಜಿ ಅವರಿಂದ ವಾಪಸ್ ಪಡೆದು ಇಲಾಖೆಗೆಯವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. 

ಇಷ್ಟೆಲ್ಲ ಆದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಚರ್ಮವನ್ನು ನಾಶಪಡಿಸಿದ್ದರು. ಈಗ ಹುಲಿಚರ್ಮ ನನ್ನ ಬಳಿಯಾಗಲಿ, ವಿನಯ್ ಗುರೂಜಿ ಅವರ ಬಳಿಯಾಗಲಿ ಇಲ್ಲ ಸ್ಪಷ್ಟಪಡಿಸಿದ್ದಾರೆ.  


ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!