ಶಿವಮೊಗ್ಗದಲ್ಲಿಯು ನಡೆಯಲಿದೆ ಶಿವದೂತ ಗುಳಿಗ ಪ್ರದರ್ಶನ! ಏನಿದು ವಿಶೇಷ ಗೊತ್ತಾ?

ಶಿವಮೊಗ್ಗದಲ್ಲಿಯು ನಡೆಯಲಿದೆ ಶಿವದೂತ ಗುಳಿಗ ನಾಟಕ ಪ್ರದರ್ಶನ , Shivduta Guliga drama show will be held in Shimoga

ಶಿವಮೊಗ್ಗದಲ್ಲಿಯು ನಡೆಯಲಿದೆ ಶಿವದೂತ ಗುಳಿಗ ಪ್ರದರ್ಶನ! ಏನಿದು ವಿಶೇಷ ಗೊತ್ತಾ?

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS

ತೀರ್ಥಹಳ್ಳಿ, ಹೊಸನಗರ ತಾಲ್ಲೂಕುಗಳಲ್ಲಿ ಸದ್ದು ಮಾಡುತ್ತಿದ್ದ ಶಿವದೂತ ಗುಳಿಗ ನಾಟಕ ಇದೀಗ ಶಿವಮೊಗ್ಗದಲ್ಲಿಯು ನಡೆಯಲಿದೆ. ರಂಗಪ್ರದರ್ಶನದಲ್ಲಿ ವಿಶೇಷ ಹೆಸರು ಪಡೆದುಕೊಳ್ತಿರುವ ನಾಟಕ ಇದೀಗ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಅ.28ರಂದು ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ. 

ರಂಗಭೂಮಿಯಲ್ಲಿ ದಾಖಲೆ ಸೃಷ್ಟಿಸಿದ ದೇಶ, ವಿದೇಶಗಳಲ್ಲಿ ಮೆಚ್ಚುಗೆ ಪಡೆದ ಕನ್ನಡ ನಾಟಕ ಶಿವ ದೂತ ಗುಳಿಗ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಚಾಲಕ ಜಾದುಗಾರ್‌ವಿಕ್ರಮ್ ಶೆಟ್ಟಿ ಹೇಳಿದರು.  ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿದ ಅವರು, 

ಈ ನಾಟಕ ಅದ್ಭುತ ಹಾಗೂ ವಿಸ್ಮಯವಾಗಿದೆ. ದೈವವನ್ನೇ ಮುಖ್ಯವಾಗಿಟ್ಟುಕೊಂಡು ವಿಭಿನ್ನ ಶೈಲಿಯಲ್ಲಿ ನಾಟಕ ಮೂಡಲಿದೆ. ಈ ಶಿವದೂತ ಗುಳಿಗ ಅ.28ರ ರಾತ್ರಿ ಕಾಣಿಸುತ್ತಾನೆ ಎಂದರು. ಈಗಾಗಲೇ ಭಾರತದ ಅನೇಕ ಜಾಗದಲ್ಲಿ ಕಾಣಿಸಿ ಕೊಂಡಿರುವ ಈ ಗುಳಿಗ ನಂಬಿದ ಭಕ್ತರ ಉದ್ಧಾರಕ್ಕಾಗಿ ಶಿವಮೊಗ್ಗದ ಕುವೆಂಪು ಹೆಸರಿನ ನೆಲದಲ್ಲಿ ಆಶೀರ್ವಾದ ನೀಡಲು ತಯಾರಾಗಿ ನಿಂತಿದ್ದಾನೆ.



ದೈವ ಮತ್ತು ದೇವರನ್ನು ಒಂದೇ ಎಂದು ನಂಬಿದ ನಮಗೆ ಕಣ್ಣಿಗೆ ಕಾಣಿಸಿಕೊಳ್ಳುವ ದೇವರೇ ನಮ್ಮ ಹತ್ತಿರದ ದೈವವಾಗಿದೆ. ಈ ಎಲ್ಲ ದೈವಗಳು ನಮ್ಮ ನಮ್ಮ ಮನೆತನಗಳ ಪೂರ್ವಿಕರೇ ಆಗಿವೆ. ನಮ್ಮ ಕಷ್ಟ ಪರಂಪರೆಯನ್ನು ತೊಲಗಿಸಲು ಆಗಾಗ ಆಗಮಿಸುತ್ತಲೇ ಇರುತ್ತವೆ. ಇಂಥ ಮಹಾನ್ ದೈವಗಳಲ್ಲಿ ಒಂದಾದ ಜಗತ್ತಿನ ಲಯಕರ್ತ ಶಿವನ ರುಂಡಮಾಲೆಯಲ್ಲಿ ಅಡಗಿದ್ದ ದುಷ್ಟರನ್ನು ನಾಶ ಮಾಡುವ, ಶಿಷ್ಟರ ರಕ್ಷಿಸುವ ಉದ್ದೇಶದಿಂದ ಆಗಾಗ ಭೂಮಿಯಲ್ಲಿ ಅವತರಿಸುತ್ತಾನೆ. ಎಂದು ಮಾಹಿತಿ ನೀಡಿದರು.

ರಂಗಪ್ರೇಮಿ ಕೆ.ಜಿ. ವೆಂಕಟೇಶ್ ಮಾತನಾಡಿ, ಪ್ರಮುಖ ನಿರ್ದೇಶಕರಲ್ಲಿ ಒಬ್ಬರಾಗಿರುವ ವಿಜಯ ಕುಮಾರ್‌ ಕೊಡಿಯಾಲ್‌ಬೈಲ್ ಅವರು ಶಿವದೂತ ಗುಳಿಗ ನಾಟಕದ ನಿರ್ದೇಶನ ಮಾಡಿದ್ದಾರೆ. ಎ.ಕೆ. ವಿಜಯ್ ಸಂಗೀತ ನೀಡಿದ್ದಾರೆ. 

ನಾಟಕಕ್ಕೆ ಗೌರವ ಪ್ರವೇಶವಿದ್ದು,, ಟಿಕೆಟ್ ಬೆಲೆ‘ ₹500 ಮತ್ತು ₹1000 ಇರುತ್ತದೆ. ಟಿಕೆಟ್ ಮತ್ತು ವಿವರಗಳಿಗೆ ಮೊ: 94481- 08222 ಮತ್ತು 80735-79575 ಇಲ್ಲಿಗೆ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. 

ಮಂಗಳೂರಿನ ಪುರಭವನದಲ್ಲಿ ಆರಂಭವಾದ ಶಿವದೂತ ಗುಳಿಗ ನಾಟಕ ಇದುವರೆಗೂ 517ನೇ ಪ್ರದರ್ಶನ ಕಂಡಿದೆ. ಒಟ್ಟಾರೆ. 37 ಕಲಾವಿದರು ಇದರಲ್ಲಿ ನಟಿಸುತ್ತಿದ್ದಾರೆ. ಪ್ರಥಮ ಪ್ರದರ್ಶನದಿಂದಲೇ ಈ ನಾಟಕ ಜನರನ್ನು ತನ್ನತ್ತ ಸೆಳೆಯುತ್ತಿದೆ . ಕಲಾ ಸಂಗಮ ತಂಡದ ಕಲಾವಿದರು ನಾಟಕದ ದೃಶ್ಯಾವಳಿಗಳಿಗೆ ಜೀವ ತುಂಬಿದ್ದಾರೆ. ಪರಮಾನಂದ ವಿ. ಸಾಲ್ಯಾನ್ ಅವರ ಸಂಭಾಷಣೆ ಗುರುದೇವ ಆರ್ಟ್ಸ್ ಬಂಟ್ವಾಳ, ಶರತ್ ಪೂಜಾರಿ ಮಾಲೆಮಾರ್‌ ವಸ್ತ್ರವಿನ್ಯಾಸ, ಹರೀಶ್ ಆಚಾರ್ಯ, ಚಂದ್ರಶೇಖರ ಶಿರ್ವ ಮಟ್ಟಾ‌ ರಂಗವಿನ್ಯಾಸವನ್ನು ಮಾಡಿದ್ದಾರೆ. 

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ತೆಲಿಕದ ಬೊಳ್ಳಿ ದೇವದಾಸ್ ಕಾಪಿಕಾಡ್, ಡಾ.ವೈಷ್ಣವಿ, ರವೀಂದ್ರ ಪ್ರಭು, ನರಸಿಂಹ ಕಿಣಿ, ವಿಶಾಲ್ ರಾಜ್ ಕೋಕಿಲ ಇವರ ಹಿನ್ನೆಲೆ ಸಂಗೀತವಿದ್ದು ಎ.ಕೆ. ವಿಜಯ್ ಸಂಗೀತ ನಿರ್ದೇಶನ ಮಾಡಿದ್ದಾರೆ . ಗುಳಿಗನ ಪಾತ್ರವನ್ನು ಕಾಂತಾರದ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ ಮಾಡಿದ್ದಾರೆ. ನಿತೇಶ್ ಕಿನ್ನಿಗೋಳಿ, ವಿನೋದ್‌ರಾಜ್ ಕೋಕಿಲ, ರಮೇಶ್ ಕಲಡ್ಕ, ಕೀತ್ ಪುರ್ತಾಡೋ, ಧನು ಕುಲಾಲ್ ಬೊಳಂತೂರು, ಜಯರಾಮ ಆಚಾರ್ಯ ಮಂಜೇಶ್ವರ, ರಜತ್ ಕದ್ರಿ, ಶರಣ್ ಶೆಟ್ಟಿ ವೇಣೂರು, ಸಾಗರ ಮಡಂತ್ಯಾರ್, ರಕ್ಷಿತ ರಾವ್, ಕಾಜಲ್ ಬಂಗೇರ ನಾಟಕದಲ್ಲಿ ಅಭಿನಯಿಸಿದ್ದಾರೆ  


ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!


 




TAGS : shivduta guliga drama, shiva duta guliga nataka, shiva duta gulliga, shivadoothe guliga, shivadoothe gulige, shivadootha guliga, ಶಿವದೂತ ಗುಳಿಗೆ, ಶಿವದೂತೆ ಗುಳಿಗೆ, shivadoothe gulige dubai, shivadoothe gulige in dubai,