ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

Shimoga Cyber Crime Police Case ಶಿವಮೊಗ್ಗ ಸೈಬರ್​ ಕ್ರೈಂ ಪೊಲೀಸ್ ಪ್ರಕರಣ , ತಮಗೆ ಬಂದ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿ, ಅದರಲ್ಲಿರುವ ವಿವರ ತುಂಬಿ, 10 ರೂಪಾಯಿ ಪೋನ್​ ಪೇ ಮಾಡಿದ್ದಾರೆ

ಆಸ್ಪತ್ರೆ Appointment  ಗಾಗಿ 10 ರೂಪಾಯಿ Pay  ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

KARNATAKA NEWS/ ONLINE / Malenadu today/ Oct 25, 2023 SHIVAMOGGA NEWS

ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು  appointment ಪಡೆಯಲು ಗೂಗಲ್​ನಲ್ಲಿ ಸರ್ಚ್​ ಮಾಡಿ, ನಂಬರ್ ತೆಗೆದುಕೊಂಡು ಕರೆ ಮಾಡಿದ ವ್ಯಕ್ತಿಗೆ ಬರೋಬ್ಬರಿ 85 ಸಾವಿರ ರೂಪಾಯಿ ಮೋಸ ಮಾಡಿದ ಘಟನೆ ಬಗ್ಗೆ ಶಿವಮೊಗ್ಗ CEN ಕ್ರೈಂ ಪೊಲೀಸ್ ಸ್ಟೆಷನ್​ನಲ್ಲಿ ದಾಖಲಾಗಿದೆ. 

ಏನಿದು ಪ್ರಕರಣ? 

ಶಿವಮೊಗ್ಗ ನಾರಾಯಣ ಹೃದಯಾಲಯದಲ್ಲಿ (Narayana Hrudayalaya Hospitals)ಚಿಕಿತ್ಸೆ ಪಡೆಯುವ ಸಲುವಾಗಿ ಶಿವಮೊಗ್ಗದ ವ್ಯಕ್ತಿಯೊಬ್ಬರು, ಅಪಾಯಿಂಟ್​ಮೆಂಟ್ ಪಡೆಯಲು ಮುಂದಾಗಿದ್ದಾರೆ. ಇದಕ್ಕಾಗಿ ಗೂಗಲ್​ನಲ್ಲಿ ಸರ್ಚ್​​ ಯಾವುದೋ ನಂಬರ್​ ಪಡೆದು ಕರೆ ಮಾಡಿದ್ದಾರೆ. ಇನ್ನೊಂದೆಡೆ ಕರೆ ಸ್ವೀಕರಿಸಿದ ವ್ಯಕ್ತಿ , ಅಪಾಯಿಂಟ್​ಮೆಂಟ್​ಗಾಗಿ ಲಿಂಕ್ ಕಳುಹಿಸುತ್ತೇವೆ. ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿರುವ ವಿವರಗಳನ್ನು ತುಂಬಿ ಎಂದಿದ್ದಾರೆ. ಅದರಂತೆ ದೂರುದಾರ ವ್ಯಕ್ತಿಯ ವಾಟ್ಸ್ಯಾಪ್​ಗೆ ಲಿಂಕ್ ಒಂದು ಸೆಂಡ್ ಆಗಿದೆ. 

ತಮಗೆ ಬಂದ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿ, ಅದರಲ್ಲಿರುವ ವಿವರ ತುಂಬಿ, 10 ರೂಪಾಯಿ ಪೋನ್​ ಪೇ ಮಾಡಿದ್ದಾರೆ.ನಡೆದಿದ್ದು ಇಷ್ಟೆ.. ಇದಾದ ಕೆಲವು ಹೊತ್ತಿನಲ್ಲಿಯೇ, ದೂರುದಾರರಿಗೆ ತಿಳಿಯದೇ ಅವರ Canara Bank ಖಾತೆಯಿಂದ 5000/- ರೂ ಹಣ ಹಾಗೂ ದಿನಾಂಕ: 16-10-2023 ರಂದು 70,500/- ರೂ ಹಣ ಕಟ್ ಆಗಿದ್ದ ಲದೇ SBI Bank ಖಾತೆಯಿಂದ 9,999/- ರೂ ಮತ್ತು 500/- ರೂ ಹಣ ಕಟ್ ಆಗಿದೆ. ಇದರ ಮೆಸೇಜ್​ಗಳನ್ನ ನೋಡಿದ ಸಂತ್ರಸ್ತರು ತಮಗೆ ನ್ಯಾಯಕೊಡಿಸುವಂತೆ ಸಿಇಎನ್ ಪೊಲೀಸ್ ಸ್ಟೇಷನ್​ ಮೆಟ್ಟಿಲೇರಿದ್ದಾರೆ. 

ಇನ್ನಷ್ಟು ಸುದ್ದಿಗಳು 

ದುರ್ಗಾಷ್ಟಮಿಯ ದಿನದಂತೆ 3 ಕಡೆಗಳಲ್ಲಿ ಕಳ್ಳತನ | ಎರಡು ದೇಗುಲದ ಭೀಗ ಮುಗಿದ ಕಳ್ಳರು

ರಾಗಿಗುಡ್ಡ ಕೇಸ್​ |DYSP ಯಿಂದಲೇ ದೂರು | ದಾಖಲಾಯ್ತು 150 ಮಂದಿ ವಿರುದ್ಧ ಕೇಸ್​ !

ಭದ್ರಾವತಿ ಕೇಸ್ | ಕೊಲೆಯಾದ ಟಿಪ್ಪು ನಗರ ನಿವಾಸಿ ಬಗ್ಗೆ SP ಮಿಥುನ್ ಕುಮಾರ್ ಹೇಳಿದ್ದೇನು?