ರಾಗಿಗುಡ್ಡ ಕೇಸ್​ |DYSP ಯಿಂದಲೇ ದೂರು | ದಾಖಲಾಯ್ತು 150 ಮಂದಿ ವಿರುದ್ಧ ಕೇಸ್​ !

Another FIR has been registered in the case of Ragigudda in Shimoga ಶಿವಮೊಗ್ಗದ ರಾಗಿಗುಡ್ಡದ ವಿಚಾರದಲ್ಲಿ ಮತ್ತೊಂದು ಎಫ್​ಐಆರ್ ದಾಖಲಾಗಿದೆ

ರಾಗಿಗುಡ್ಡ ಕೇಸ್​ |DYSP  ಯಿಂದಲೇ ದೂರು | ದಾಖಲಾಯ್ತು 150 ಮಂದಿ ವಿರುದ್ಧ ಕೇಸ್​ !

KARNATAKA NEWS/ ONLINE / Malenadu today/ Oct 22, 2023 SHIVAMOGGA NEWS

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ ಇನ್ನೂ ಕೂಡ ಸದ್ದು ಮಾಡುತ್ತಿದೆ. ಈ ಸಂಬಂಧ ಕಠಿಣ ಕ್ರಮ ಕೈಗೊಂಡಿರುವ ಶಿವಮೊಗ್ಗ ಪೊಲೀಸ್ ಇಲಾಖೆ ಅಪವಾದಗಳನ್ನು ಎದುರಿಸುತ್ತಿದ್ದರೂ ಯಾವುದೇ ಅನಗತ್ಯ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ. 

ರಾಗಿಗುಡ್ಡದ ಘಟನೆ ಬಗ್ಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಮ್ ಹೇಳಿದ್ದೇನು? ಅಧಿಕಾರಿಗಳಿಗೆ ನಾಲ್ಕು ಸೂಚನೆ

ರಾಜಕಾರಣದ ಭೇಟಿ ಹಾಗೂ ಮಾತುಗಳಿಗೆ ತಿಳುವಳಿಕೆ ನೋಟಿಸ್​ಗಳ ಮೂಲಕವೇ ನಿರ್ಬಂಧ ಹಾಕಿರುವ ಪೊಲೀಸ್ ಇಲಾಖೆ, ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ 100 ರಿಂದ 150 ಮಂದಿ ವಿರುದ್ಧ ಸ್ವತಃ ಶಿವಮೊಗ್ಗ ಬಿ ವಿಭಾಗದ ಡಿವೈಎಸ್​ಪಿ ನೀಡಿದ ದೂರಿನನ್ವಯ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ (shivamogga rural police station shivamogga ) Su moto  ಕೇಸ್ ದಾಖಲಾಗಿದೆ. 

ಶಿವಮೊಗ್ಗದ ಟಿಪ್ಪುನಗರದ ರಾಜೀಕ್​​, ಭದ್ರಾವತಿ ಗ್ರೌಡಳ್ಳಿ ತೋಟದಲ್ಲಿ ಕೊಲೆಯಾಗೋದಕ್ಕೆ ಕಾರಣವೇನು? EXCLUSIVE



ಈಗಾಗಲೇ ರಾಗಿಗುಡ್ಡದ ವಿಚಾರವಾಗಿ 24 ಕ್ಕೂ ಹೆಚ್ಚು ಎಫ್ಐಆರ್​ಗಳು ದಾಖಲಾಗಿವೆ. ಅಲ್ಲದೆ ಹಲವು ಮುಖಂಡರಿಗೆ ತಿಳುವಳಿಕೆ ನೋಟಿಸ್ ನೀಡಲಾಗಿದೆ. ಅಲ್ಲದೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್​ರನ್ನ ಮಾಸ್ತಿಕಟ್ಟೆಯಲ್ಲಿಯೇ ತಡೆದು ಶಿವಮೊಗ್ಗ ಪ್ರವೇಶಕ್ಕೆ ಅವಕಾಶವನ್ನ ನೀಡದಂತೆ ತಡೆಯಲಾಗಿತ್ತು. 

ಇವೆಲ್ಲದರ ಜೊತೆಯಲ್ಲಿ ಕಳೆದ 16 ನೇ ತಾರೀಖು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಪೊಲೀಸ್ ಇನ್​ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್​ ಕರ್ತವ್ಯ ನಿರ್ವಹಿಸ್ತಿದ್ದ ಸ್ಥಳದಲ್ಲಿ ಗುರುತಿಸಿದ  9 ಮಂದಿ ಹಾಗೂ 100-150 ಮಂದಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದಷ್ಟೆ ಅಲ್ಲದೆ ಗುಂಪಿನ ಕ್ರಿಮಿನಲ್ ಬಲ ತೋರಿಸಿ, ಅವಾಚ್ಯವಾಗಿ ನಿಂದಿಸಿದ ಸಂಬಂಧ ಸುಮುಟೋ ಕೇಸ್​ ದಾಖಲಾಗಿದೆ. ಈ ವೇಳೆ ಕರ್ತವ್ಯದಲ್ಲಿದ್ದ ಡಿವೈಎಸ್​ಪಿ ಸುರೇಶ್ ಎಂ ಕಂಪ್ಲೆಂಟ್ ನೀಡಿದ್ದು, : IPC 1860 (U/s-504, 143,147,149,353) ಅಡಿಯಲ್ಲಿ ಕೇಸ್​ ದಾಖಲಾಗಿದೆ. 

ಪ್ರಮೋದ್ ಮುತಾಲಿಕ್ ಗೆ ಶಿವಮೊಗ್ಗ ಪ್ರವೇಶ ನಿರ್ಬಂಧ | ಜಿಲ್ಲಾಡಳಿತದ ನೋಟಿಸ್​ ನಲ್ಲಿ ಏನಿದೆ ಗೊತ್ತಾ| 30 ಪ್ರಕರಣಗಳು ಮತ್ತು ರಾಗಿಗುಡ್ಡ ಘಟನೆ

ಇನ್ನೂ ದೂರು ತಡವಾಗಿ ನೀಡಲು ಬಂದೋಬಸ್ತ್ ಹಾಗೂ ವಿವಿಧ ಪ್ರಕರಣಗಳಲ್ಲಿನ ಆರೋಪಿಗಳ ಪತ್ತೆಗೆ ವಿಳಂಬವಾದ ಹಿನ್ನೆಲೆಯಲ್ಲಿ ದೂರು ತಡವಾಗಿ ನೀಡಲಾಗಿದೆ ಎಂದು ಹೇಳಲಾಗಿದೆ. 


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ