KARNATAKA NEWS/ ONLINE / Malenadu today/ Oct 21, 2023 SHIVAMOGGA NEWS
ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿರುವ ಕೊಲೆ ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಮಲೆನಾಡು ಟುಡೆಗೆ ಎಕ್ಸ್ಕ್ಲ್ಯೂಸಿವ್ ಆಗಿ ಲಭ್ಯವಾಗಿದೆ.
ಮೂಲತಃ ಶಿವಮೊಗ್ಗದ ಟಿಪ್ಪು ನಗರ ನಿವಾಸಿಯಾದ ಸೈಯ್ಯದ್ ರಾಜೀಕ್ಕೊಲೆಯಾದ ವ್ಯಕ್ತಿ, ರೌಡಿಶೀಟರ್ ಕೂಡ ಆಗಿರುವ ಈತನನ್ನು ಈತನ ಸಂಬಂಧಿಕರೇ ಹೊಡೆದುಕೊಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರೌಡಿಶೀಟರ್ ಸೈಯ್ಯದ್ ರಾಜೀಕ್ನ ಕುಟುಂಬಸ್ಥರು ಈ ಸಂಬಂಧ ದೂರು ನೀಡಿದ್ದಾರೆ.
BREAKING NEWS | ಭದ್ರಾವತಿ ಗ್ರಾಮಾಂತರದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ | ಓರ್ವನ ಕೊಲೆ!
ರಾಜೀಕ್ಹಾಗೂ ಭದ್ರಾವತಿ ತಿಪ್ಲಾಪುರ ಕ್ಯಾಂಪ್ನ ಸಮೀರ್ ಎಂಬಾತನ ನಡುವೆ ಕಳೆದ ನಾಲ್ಕು ವರ್ಷಗಳಿಂದಲೂ ಹಣಕಾಸಿನ ವಿಚಾರದಲ್ಲಿ ವೈಮನಸ್ಯವಿತ್ತು. ಮೇಲಾಗಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಜೀಕ್ ಸಮೀರ್ಗೆ ಜೀವ ಬೆದರಿಕೆ ಹಾಕುತ್ತಿದ್ದ. ಸಂಬಂಧಿಯಾಗಿದ್ದರೂ ಜೀವ ಬೆದರಿಕೆ ಹಾಕಿದ ರಾಜೀಕ್ಬಗ್ಗೆ ಸಮೀರ್ ಆತಂಕದಲ್ಲಿದ್ದ ಎನ್ನಲಾಗಿದೆ. ಹೀಗಾಗಿ ಆತನಿಗೆ ಮಾತುಕತೆ ನಡೆಸೋಣ, ತೀರ್ಮಾನಕ್ಕೆ ಬರೋಣ ಎಂದು ಗೌಡ್ರಳ್ಳಿ ಬಳಿಯ ಅಡಿಕೆ ತೋಟವೊಂದಕ್ಕೆ ಕರೆಸಿಕೊಂಡಿದ್ದಾರೆ. ಅಲ್ಲಿ ಸಮೀರ್ ಮತ್ತವನ ಜೊತೆಗಾರರು ರಾಜೀಕ್ನನ್ನ ಮಾರಕಾಸ್ತ್ರಗಳಿಂದ ಹೊಡೆದು ಕೊಂದಿದ್ದಾರೆ ಎಂಬುದು ಆರೋಪ..
ಅಡಿಕೆ ತೋಟದಲ್ಲಿ ವಿಪರೀತ ಗಾಯಗಳಿಂದ ಸಾವನ್ನಪ್ಪಿದ್ದ ರಾಜೀಕ್ ಮರಣೋತ್ಸರ ಪರೀಕ್ಷೆ ಇನ್ನಷ್ಟೆ ನಡೆಯಬೇಕಿದೆ. ಈ ಸಂಬಂಧ ಪೊಲೀಸರು ಸ್ಥಳ ಮಹಜರ್ ನಡೆಸಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸರು ಕೇಸ್ ದಾಖಲಿಸಿದ್ದು, ಆರೋಪಿಗಳಿಗಾಗಿ ಬಲೆಬೀಸಿದ್ದಾರೆ.
ಇನ್ನಷ್ಟು ಸುದ್ದಿಗಳು
ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL
ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ