ತೆಂಗಿನ ಗೊನೆ ಮೈ ಮೇಲೆ ಬಿದ್ದು 16 ವರ್ಷದ ಬಾಲಕ ಸಾವು

Malenadu Today

KARNATAKA NEWS/ ONLINE / Malenadu today/ Jun 23, 2023 SHIVAMOGGA NEWS  

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಬಿ.ಚೋಳೇನಹಳ್ಳಿಯಲ್ಲಿ ತೆಂಗಿನ ಕಾಯಿ ಗೊನೆ ಬಿದ್ದು 16 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬಗ್ಗೆ ವರದಿಯಾಗಿದೆ.  ಶ್ರವಣಬೆಳಗೊಳದ ಹೊರವಲಯದ ಉತ್ತೇನಹಳ್ಳಿ ಗ್ರಾಮದ ರವಿ ಮತ್ತು ಅನಸೂಯ ದಂಪತಿ ಬಿ.ಚೋಳೇನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದರು. 

ಇಲ್ಲಿಂದಲೇ ದಂಪತಿಯ ಪುತ್ರ ಪ್ರಜ್ವಲ್ ಪ್ರತಿನಿತ್ಯ ತೋಟದ ಕೆಲಸ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದ. ನಿನ್ನೆ ಭಾರಿ ಮಳೆ, ಗಾಳಿಯಿಂದ ಮರದಿಂದ ತೆಂಗಿನಕಾಯಿಗಳು ಬಿದ್ದಿದ್ದವು. ಬಿದ್ದಿದ್ದ ತೆಂಗಿನಕಾಯಿಗಳನ್ನು ಒಂದೆಡೆ ಸಂಗ್ರಹಿಸುತ್ತಿದ್ದ ವೇಳೆ ಏಕಾಏಕಿ ತೆಂಗಿನಮರದಿಂದ ಬಾಲಕನ ಮೇಲೆ  ತೆಂಗಿನಕಾಯಿ ಗೊನೆ ಬಿದ್ದಿದೆ. ಪರಿಣಾಮ ಬಾಲಕ  ಸಾವನ್ನಪ್ಪಿದ್ಧಾನೆ. ಘಟನೆ ನೋಡಿದ ಕುಟುಂಬಸ್ಥರು ತಕ್ಷಣವೇ ಪ್ರಜ್ವಲ್​ನನ್ನ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದಾರಿ ಮಧ್ಯೆ ಜೀವ ಹೋಗಿದೆ. ಫಸ್ಟ್ ಪಿಯುಸಿ ಓದುತ್ತಿದ್ದ ಬಾಲಕ, ವಿಧಿಯ ಕೃತ್ಯಕ್ಕೆ ಬಲಿಯಾಗಿದ್ದನ್ನ ನೆನೆದು ಪೋಷಕರು ಕಣ್ಣೀರಿಡುತ್ತಿದ್ಧಾರೆ. ಇನ್ನೂ ಈ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಸ್ಟೇಷನ್​ನಲ್ಲಿ ಪ್ರಕರಣ ದಾಖಲಾಗಿದೆ. 


ತೀರ್ಥಹಳ್ಳಿ ಹೆದ್ದಾರಿಯಲ್ಲಿ ಉರುಳಿ ಬಿದ್ದ ಕರೆಂಟ್ ಕಂಬ! ವಾಹನ ಸವಾರರೇ ಹುಷಾರ್! ಮೆಸ್ಕಾಂ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ

ತೀರ್ಥಹಳ್ಳಿ ತಾಲ್ಲೂಕಿನ ಗಬಡಿ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಕರೆಂಟ್ ಕಂಬವೊಂದು ಉರುಳಿ ಬಿದ್ದಿದೆ. ಆದರೆ ಇದುವರೆಗೂ ಅದನ್ನು ತೆರುವುಗೊಳಿಸಲು ಮೆಸ್ಕಾಂ ಮುಂದಾಗಿಲ್ಲ. ಹಾಗಾಗಿ ಈ ದಾರಿಯಲ್ಲಿ ಓಡಾಡುವ ವಾಹನಗಳು ಆಕ್ಸಿಡೆಂಟ್ ಅಪಾಯ ಎದುರಾಗಿದೆ.ಈ ಬಗ್ಗೆ ಸ್ಥಳೀಯರು ದೂರು ಹೇಳಿದ್ದು, ನಿನ್ನೆ ಬಿದ್ದ ಕಂಬವನ್ನು ಇದುವರೆಗೂ ಏಕೆ ತೆಗೆದಿಲ್ಲ ಎಂದು ಪ್ರಶ್ನಿಸಿದ್ದಾರೆ. ಯಾರದ್ದಾದರೂ ಜೀವಕ್ಕೆ ಹಾನಿಯಾದರೇ ನೋಡುವವರು ಯಾರು ಎಂದು ಸ್ಥಳಿಯರು ಆಕ್ರೋಶ ಹೊರಹಾಕಿದ್ಧಾರೆ. ಗಬಡಿಯ ಬಳಿಯಲ್ಲಿ ಮರವೊಂದು ಬಿದ್ದ ಪರಿಣಾಮ, ಅಲ್ಲಿಯೇ ಇದ್ದ ಕರೆಂಟ್ ಕಂಬ ಕೂಡ, ಮರದ ಕೊಂಬೆ ಬಡಿದು ಮುರಿದು ಬಿದ್ದಿದೆ. ಅದೃಷ್ಟಕ್ಕೆ ಕಂಬ ಬೀಳುತ್ತಲೇ ಕರೆಂಟ್ ಲೈನ್ ಕಟ್ ಆಗಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಹೀಗಾಗಿ ಯಾವುದೇ ಅಪಾಯ ಸಂಭವಿಸಲಿಲ್ಲ.   ಇದುವರೆಗೂ ಕಂಬ ತೆರವುಗೊಳಿಸಿ, ದುರಸ್ಥಿ ಮಾಡದೇ ಮೆಸ್ಕಾಂ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಲಾಗಿದೆ.  

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ದುಡ್ಡನ್ನ ಲಪಟಾಯಿಸಿ ಎಸ್ಕೇಪ್ ಆದ ಸಿಬ್ಬಂದಿ! ಏನಿದು ಪ್ರಕರಣ! ನಡೆದಿದ್ದೆಲ್ಲಿ


ಫಿಕ್ಸ್​ ಆಗ್ತಿದ್ಯಾ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ! ಶಿವಣ್ಣ ದಂಪತಿಯ ಪ್ರತಿಕ್ರಿಯೆ ಏನು ಗೊತ್ತಾ?

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಖಾಡದಲ್ಲಿ ಸಂಸದ ಬಿ.ವೈ.ರಾಘವೇಂದ್ರರವರ ಎದುರಾಳಿ ಯಾರು? ಈ ಪ್ರಶ್ನೆಗೆ ಕಾಂಗ್ರೆಸ್ ಉತ್ತರ ಹುಡುಕುತ್ತಿದೆ. ಒಂದು ಕಡೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಮ್ಮ ಸಹೋದರಿ ಗೀತಾ ಶಿವರಾಜ್​ ಕುಮಾರ್​ ರನ್ನ ಅಭ್ಯರ್ಥಿಯನ್ನಾಗಿಸಲು ಪ್ರಯತ್ನ ನಡೆಸ್ತಿರುವುದು ರಾಜಕೀಯ ಅಖಾಡದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ನಿಟ್ಟಿನಲ್ಲಿ ಶಿವರಾಜ್​ ಕುಮಾರ್​ ಹಾಗೂ ಗೀತಾ ಶಿವರಾಜ್​ ಕುಮಾರ್​, ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ರವರನ್ನ ಭೇಟಿಯಾಗಿದ್ದಾರೆ. 

ಶಿರಾಳಕೊಪ್ಪದ ಸಾಮಿಲ್​ನಲ್ಲಿದ್ದ ಒಂಟೆಯನ್ನು ರಕ್ಷಿಸಿದ ದೆಹಲಿಯಿಂದ ಬಂದ ಇಮೇಲ್! 3-4 ರಾಜ್ಯ ದಾಟಿ ಬಂದ ಕಥೆ!

ಈ ಎರಡು ಭೇಟಿಗಳು ಕೇವಲ ಕ್ಯಾಶ್ಯುವಲ್ ವಿಸಿಟ್ ಎಂದು ಹೇಳುತ್ತಿದ್ದರೂ ಸಹ ದಂಪತಿಗಳ ಭೇಟಿ ಹಾಗೂ ಮಾತುಕತೆ ಕುತೂಹಲ ಕೆರಳಿಸುತ್ತಿದೆ. ಇದರ ನಡುವೆ ಡಿಕೆ ಶಿವಕುಮಾರ್​ ರವರ ಭೇಟಿಯ ಬಳಿಕ ಮಾತನಾಡಿದ ಗೀತಾ ಶಿವರಾಜ್​ ಕುಮಾರ್​​ರಿಗೆ ಮಾದ್ಯಮದ ಕಡೆಯಿಂದ ಇದು ಲೋಕಸಭಾ ಚುನಾವಣೆಯ ಸಿದ್ದತೆಯೇ ಎಂಬ ಪ್ರಶ್ನೆ ಎದುರಾಗಿತ್ತು. ಪ್ರಶ್ನೆಗೆ ಉತ್ತರಿಸಿದ ಗೀತಾ ಶಿವರಾಜ್​ ಕುಮಾರ್  ಸಿದ್ದತೆ ಅಂತೇನೂ ಇಲ್ಲ. ಆದರೆ ಈ ಬಗ್ಗೆ ತಮ್ಮ ತಮ್ಮ ಹಾಗೂ ಅವರು(ಶಿವರಾಜ್ ಕುಮಾರ್​) ಹಾಗೂ ಪಕ್ಷ ಪ್ರಾಪರ್​ ತೀರ್ಮಾನವನ್ನು ಕೈಗೊಳ್ಳುತ್ತದೆ ಎಂದು ಹೇಳಿದ್ರು. ಇದೇ ಮೊದಲ ಸಲ ಇಂತಹದ್ದೊಂದು ಪ್ರತಿಕ್ರಿಯೆಯನ್ನ ಗೀತಾ ಶಿವರಾಜ್ ಕುಮಾರ್, ನೀಡಿದ್ಧಾರೆ. ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರರವರು ಅದಾಗಲೇ ತಮ್ಮ ತಂದೆಯ ನೆರಳಿನಿಂದ ಹೊರಬಂದು ತಮ್ಮದೆ ಆದ ವೇದಿಕೆಯಲ್ಲಿ ಅಭಿವೃದ್ಧಿ ಕೆಲಸಗಳ ಉದ್ಘಾಟನೆಯ ದಿನಾಂಕವನ್ನು ಸರತಿ ಸಾಲಿನಲ್ಲಿ ಘೋಷಿಸುತ್ತಿದ್ಧಾರೆ. ಅವರ ಎದುರು  ಕಾಂಗ್ರೆಸ್​ ಪಕ್ಷ ಗೀತಾ ಶಿವರಾಜ್​ ಕುಮಾರ್​ರನ್ನ ಕಣಕ್ಕಿಳಿಸುತ್ತಾ? ಅಥವಾ ಸ್ವತಃ ಶಿವರಾಜ್​ ಕುಮಾರ್​ರವರನ್ನೆ ರಾಜಕಾರಣಕ್ಕೆ ಕರೆತಂದು ಸ್ಪರ್ದೆಗೆ ಶ್ರೀಕಾರ ಹಾಕಿಸುತ್ತಾ? ಅಥವಾ ಸದ್ಯ ಚರ್ಚೆಯಲ್ಲಿರುವಂತೆ ಕಿಮ್ಮನೆ ರತ್ನಾಕರ್​ರವರ ಹೆಸರು ಮುನ್ನೆಲೆಗೆ ಬರುತ್ತಾ? ಇದೆಲ್ಲದರ ಆಚೆಗೆ ಅಚ್ಚರಿ ಅಭ್ಯರ್ಥಿ ಆಯ್ಕೆಯಾಗುತ್ತಾರಾ? ಅಭಯಹಸ್ತದಲ್ಲಿನ ಭವಿಷ್ಯದಲ್ಲಿ ಉತ್ತರ ಸಿಗಲಿದೆ.  

ಪೇಟೆಯಲ್ಲಿಯೇ ವೇಶ್ಯಾವಾಟಿಕೆ! ಮೂವರು ಮಹಿಳೆಯರ ರಕ್ಷಣೆ ! ಇಬ್ಬರ ಅರೆಸ್ಟ್ ! ಪೊಲೀಸ್ ಕಾರ್ಯಾಚರಣೆಯ ಇನ್ನಷ್ಟು ಡಿಟೇಲ್ಸ್ ಇಲ್ಲಿದೆ ಓದಿ


 

Share This Article