ಎಸ್‌ಎಸ್‌ಎಲ್‌ಸಿ ಫಲಿತಾಂಶ | ಮಕ್ಕಳ ಸಾಧನೆ ಮೂಲಕ ಶಿವಮೊಗ್ಗ ಬರೆದ ದಾಖಲೆ ಏನು ಗೊತ್ತಾ?

SSLC Result | Do you know what is the record written by Shimoga through children's achievement?

ಎಸ್‌ಎಸ್‌ಎಲ್‌ಸಿ ಫಲಿತಾಂಶ | ಮಕ್ಕಳ ಸಾಧನೆ ಮೂಲಕ ಶಿವಮೊಗ್ಗ ಬರೆದ ದಾಖಲೆ ಏನು ಗೊತ್ತಾ?
SSLC Result Shimoga

SHIVAMOGGA | MALENADUTODAY NEWS | May 10, 2024  

ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಶಿವಮೊಗ್ಗದ ಪಾಲಿಗೆ ಉತ್ತಮವಾಗಿದೆ. ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 84.06ರಷ್ಟು ಫಲಿತಾಂಶ ಲಭಿಸಿತ್ತು. ಪರಿಣಾಮ ಶಿವಮೊಗ್ಗ ಜಿಲ್ಲಾವಾರು ಪಟ್ಟಿಯಲ್ಲಿ  28ನೇ ಸ್ಥಾನ ಪಡೆದಿತ್ತು. ಈ ಸಲ ರಾಜ್ಯದಲ್ಲಿ 3ನೇ ಸ್ಥಾನ ಪಡೆದಕೊಂಡಿದೆ. ಪರೀಕ್ಷೆ ಎದುರಿಸಿದ್ದ  ಒಟ್ಟು 23,028 ವಿದ್ಯಾರ್ಥಿಗಳು ಪೈಕಿ  20,420 ಮಕ್ಕಳು ಪಾಸಾಗಿದ್ದು ಶೇ. 88.67 ಪರ್ಸೆಂಟ್‌ ಈ ಸಲ ಜಿಲ್ಲೆಯಲ್ಲಿ ಬಂದಿದೆ. 

ಇನ್ನೂ ಇದರಲ್ಲಿ ಭದ್ರಾವತಿಯ ಪೂರ್ಣಪ್ರಜ್ಞ ಶಾಲೆಯ ಮೋಹಿತ್ ಜಿ ಎಸ್ 625 ಅಂಕಗಳಿಗೆ 620 ಅಂಕಗಳಿಸಿ ಭದ್ರಾವತಿ 1st place, ಶಿವಮೊಗ್ಗಕ್ಕೆ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶಿವಮೊಗ್ಗದ ರವಿಶಂಕರ ವಿದ್ಯಾಮಂದಿರ ಪ್ರೌಢಶಾಲೆಯ ಗುರುಚರಣ ಶೆಟ್ಟಿ, ಸೊರಬದ ಸಂತ ಥಾಮಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಚಿನ್ಮಯಿ, ಅಲ್ಲಿನ ಸ್ವಾಮಿ ವಿವೇಕಾನಂದ ಇಎಂಎಚ್‌ಎಸ್‌ ಶಾಲೆಯ ಬಿಂದುಗೌಡ, ಹಳೆ ಸೊರಬದ ಸರ್ಕಾರಿ ಪ್ರೌಢಶಾಲೆಯ ರಕ್ಷಾಶ್ರೀ ಶೇ. 99.52 ಅಂಕ ಪಡೆದಿದ್ದಾರೆ. ಈ ಮಕ್ಕಳ ಸಾಧನೆ ಪೋಷಕರಲ್ಲಿ ಹೆಮ್ಮೆ ಮೂಡಿಸಿದ್ದಷ್ಟೆ ಅಲ್ಲದೆ ಜಿಲ್ಲೆಯ ಜನರಿಗೆ ವಿಶೇಷ ಗರಿಮೆ ಮೂಡಿಸಿದೆ.