ಸಾಗರದ ಬೆಳಂದೂರಲ್ಲಿ ಉಡ ಬೇಟೆ | ಕಂಟ್ರಿ ಮೇಡ್‌ ರೈಫಲ್‌ ಜೊತೆ ಇಬ್ಬರು ಅರೆಸ್ಟ್‌ |

The Bengal monitor hunt in Bellandur, Sagar | Two arrested with country-made rifle | Ambligol Forest Range, Shivamogga News, Sagar News, Shikaripura Report,

ಸಾಗರದ ಬೆಳಂದೂರಲ್ಲಿ ಉಡ ಬೇಟೆ | ಕಂಟ್ರಿ ಮೇಡ್‌ ರೈಫಲ್‌ ಜೊತೆ ಇಬ್ಬರು ಅರೆಸ್ಟ್‌ |
The Bengal monitor hunt,Sagar , Ambligol Forest Range, Shivamogga News, Sagar News, Shikaripura Report,

SHIVAMOGGA | MALENADUTODAY NEWS | May 20, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಅಂಬ್ಲಿಗೋಳ ವಲಯದಲ್ಲಿ ಉಡವನ್ನ ಬೇಟೆಯಾಡಿದ ಆರೋಪದ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ. ಸಾಗರ ತಾಲೂಕು ಬೆಳಂದೂರು ರಾಜ್ಯ ಅರಣ್ಯ ವ್ಯಾಪ್ತಿಯ ಬೈರಾಪುರದಲ್ಲಿ ಈ ಘಟನೆ ಬಗ್ಗೆ ವರದಿಯಾಗಿದೆ. ಶಿಕಾರಿಪುರ ತಾಲೂಕು ಮಂಜಪ್ಪ(60), ಈಶ್ವರಪ್ಪ (38) ಬಂಧಿತರು.ಪ್ರಕರಣದಲ್ಲಿ ಬೇಕಾಗಿದ್ದು ಇನ್ನು ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಆರೋಪಿಗಳಿಂದ ಅಕ್ರಮ ಕಂಟ್ರಿ ಮೇಡ್ ರೈಫಲ್, ಬೇಟೆಯಾಡಿದ 3.220 ಕೆಜಿ ಉಡದ ಮೃತದೇಹ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇನ್ನೂ ಈ ಕಾರ್ಯಾಚರಣೆಯಲ್ಲಿ ಅಂಬ್ಲಿಗೊಳ ವಲಯ ವ್ಯಾಪ್ತಿ ಒಳಗೊಂಡ ಡಿಎಫ್‌ಒ ಸಂತೋಷ್‌ ಕುಮಾರ್‌, ಎಸಿಎಫ್‌ ಸುರೇಶ್‌ ಬಿ, ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯ್ಲಲಿ, ಆರ್‌ಎಫ್‌ಒ ಮಾಧವ ದೊಡ್ಡಬಾಡಗಿ,   ಡಿಆರ್‌ಎಫ್‌ಒ ಪ್ರಕಾಶ್ ದೊಡ್ಡಮನಿ ನೇತೃತ್ವದ ಚಂದ್ರಪ್ಪ ಲಮಾಣಿ, ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದೆ.