ಶುಂಠಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಲಿಗೆ ಬಿತ್ತು ಗುಂಡು! ಸಾಗರದಲ್ಲಿ ನಡೆದಿದ್ದೇನು?

A man working in a ginger field was shot in the leg in Sagar

ಶುಂಠಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಲಿಗೆ ಬಿತ್ತು ಗುಂಡು! ಸಾಗರದಲ್ಲಿ ನಡೆದಿದ್ದೇನು?
A man working in a ginger field was shot in the leg in Sagar

SHIVAMOGGA |  Jan 13, 2024  |   ಶಿವಮೊಗ್ಗ  ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಗುಂಡಿನ ಸದ್ದಿನ ವಿಚಾರವೊಂದು ಕೇಸ್​ ರೂಪದಲ್ಲಿ ಬೆಳಕಿಗೆ ಬಂದಿದೆ. ಶುಂಠಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ  ಸಂದರ್ಭದಲ್ಲಿ ಗುಂಡಿನ ಸದ್ದು ಕೇಳಿಬಂದಿದ್ದು, ಓರ್ವನ ಕಾಲಿಗೆ ಗುಂಡು ತಗುಲಿದೆ. 

ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್

ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಮಾಲ್ವೆ ಎಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಶುಂಠಿ ಬೆಳೆಗೆ ನೀರು ಬಿಡುವ ಸಲುವಾಗಿ ಇಬ್ಬರು ಹೊಲಕ್ಕೆ ಬಂದಿದ್ದಾರೆ. ಈ ವೇಳೆ ಒಬ್ಬರು ನೀರು ಬಿಡಲು ಪೈಪ್​ ಅಳವಡಿಸುವ ಕೆಲಸ ಮಾಡುತ್ತಿದ್ದರು. ಇನ್ನೊಬ್ಬರು ಅಲ್ಲಿಯೇ ಇದ್ದ ಜೋಪಡಿಯೊಂದರ ಬಳಿ ನಿಂತಿದ್ದರು. 

ಈ ವೇಳೆ ಇದ್ದಕ್ಕಿದ್ದಂತೆ ಫೈರ್ ಆದ ಸದ್ದು ಕೇಳಿದೆ. ಅದರ ಬೆನ್ನಲ್ಲೆ ರವಿ ಎಂಬವರು ಕುಸಿದು ಬಿದ್ದಿದ್ದಾರೆ. ಅವರ ತೊಡೆ ಭಾಗಕ್ಕೆ ಗುಂಡು ಬಿದ್ದಿತ್ತು. ತಕ್ಷಣವೇ ಅವರನ್ನ  ಸಾಗರ ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. 

ಇನ್ನೂ ಗುಂಡು ಎಲ್ಲಿಂದ ಫೈರ್ ಆಗಿದೆ ಎಂಬುದು ನಿಗೂಢವಾದರೂ, ಕಾಡಿನಲ್ಲಿ ಶಿಕಾರಿ ಗೆ ಹೋದವರು ಫೈರ್ ಮಾಡಿದ ಗುಂಡು ತಗುಲಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ.