KARNATAKA NEWS/ ONLINE / Malenadu today/ Aug 2, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಖಾಸಗಿ ಬಸ್ ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕರೆಂಟ್ ವಯರ್ ಬಸ್ ಮೇಲೆ ಮುರಿದು ಬಿದ್ದಿದ್ದಾರೆ. ಈ ವೇಳೇ ಇಬ್ಬರು ವಿದ್ಯಾರ್ಥಿಗಳಿಗೆ ಕರೆಂಟ್ ಶಾಕ್ ಹೊಡೆದ ಘಟನೆ ನಡೆದಿದೆ. ಸಾಗರ ತಾಲ್ಲೂಕಿನ ಗೆಣಿಸಿನ ಕುಣಿಯ ಬಳಿಯಲ್ಲಿ ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದೆ.
ಸಾಗರ ಕಡೆಗೆ ಬರುತ್ತಿದ್ದ ಗೆಣಿಸಿನ ಕುಣಿಯ ಬಳಿಯಲ್ಲಿ ಖಾಸಗಿ ಬಸ್ ಅಪಘಾತವಾಗಿದೆ. ಅಪಘಾತಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಆದರೆ ಬಸ್ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಕಂಬ ಮುರಿದು ವಿದ್ಯುತ್ ವಯರ್ ಬಸ್ ಮೇಲೆ ಬಿದ್ದಿದೆ. ಈ ವೇಳೆ ಬಸ್ನಲ್ಲಿದ್ದವರಿಗೆ ವಿದ್ಯುತ್ ಶಾಕ್ ಹೊಡೆದ ಅನುಭವ ಆಗಿದೆ. ಈ ಪೈಕಿ ಇಬ್ಬರು ವಿದ್ಯಾರ್ಥಿಗಳು ವಿದ್ಯುತ್ ಶಾಕ್ನಿಂದ ಪ್ರಜ್ಞೆ ತಪ್ಪಿದ್ದಾರೆ. ಅವರನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಅಲ್ಲಿಯ ವೈದ್ಯರ ಸಲಹೆ ಮೇರೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನಷ್ಟು ಸುದ್ದಿಗಳು
