ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪ KSRTC ಬಸ್ ಆಕ್ಸಿಡೆಂಟ್! ಹೊಂಡಕ್ಕೆ ಬಿದ್ದ ವಾಹನ!
The KSRTC bus met with an accident near Talaguppa in Sagar taluk of Shivamogga district. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪ KSRTC ಬಸ್ ಆಕ್ಸಿಡೆಂಟ್ ಆಗಿದೆ.
KARNATAKA NEWS/ ONLINE / Malenadu today/ Aug 1, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತಾಳಗುಪ್ಪದ ಬಳಿಯ ಬಲೇಗಾರುವಿನಲ್ಲಿ ನಿನ್ನೆ KSRTC ಬಸ್ವೊಂದು ರಸ್ತೆ ಬದಿಯ ಹೊಂಡಕ್ಕೆ ಜಾರಿ ಅಪಘಾತವಾದ ಘಟನೆ ಸಂಭವಿಸಿದೆ.
ನಡೆದಿದ್ದೇನು?
ಬಲೇಗಾರು ಸಮೀಪ ಶಿರಸಿ-ಸಾಗರ ಕೆಎಸ್ಆರ್ಟಿಸಿ ಬಸ್ ಸಾಗುತ್ತಿತ್ತು. ಈ ವೇಳೆ ಕಾರೊಂದು ಸ್ಪೀಡಾಗಿ ಬಂದಿದೆ. ಆತ ಬಸ್ಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇದ್ದಿದ್ದರಿಂದ ತಕ್ಷಣವೇ ಬಸ್ ಚಾಲಕ ವಾಹನವನ್ನು ಕಂಟ್ರೋಲ್ಗೆ ತೆಗೆದುಕೊಂಡು ರಸ್ತೆಯಿಂದ ಕೆಳಕ್ಕೆ ಇಳಿಸಿದ್ದಾರೆ. ಈ ವೇಳೇ ಬಸ್ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಹೊಂಡಕ್ಕೆ ಉರುಳಿದೆ. ಘಟನೆಯಲ್ಲಿ ಬಸ್ ಹೊಂಡದಲ್ಲಿ ಒಂದು ಬದಿ ವಾಲಿಕೊಂಡು ಬಿದ್ದಿದೆ. ಅದೃಷ್ಟಕ್ಕೆ ಬಸ್ ನಲ್ಲಿದ್ದವರಿಗೆ ಹೆಚ್ಚು ಅಪಾಯವಾಗಲಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಬಚಾವ್ ಆಗಿದ್ದಾರೆ.
ಲೀಟರ್ಗೆ ₹3 ಓಕೆ! ಅರ್ಧ ಲೀಟರ್ ₹2 ರೂಪಾಯಿ ಜಾಸ್ತಿ ಏಕೆ? ಹಾಫ್ ಲೀಟರ್ ನಲ್ಲಿ ಹೆಚ್ಚು ಬರುತ್ತಾ ನಂದಿನಿ ಹಾಲು! ಇಷ್ಟಕ್ಕೂ ಯಾವ ಹಾಲಿಗೆಷ್ಟು ರೇಟು?
ಬೆಲೆ ಏರಿಕೆ ಕಾಲ, ಜನಸಾಮಾನ್ಯರನ್ನ ಸುಡುತ್ತಿದೆ. ಇವತ್ತಿನಿಂದ ಶಿವಮೊಗ್ಗ ಜಿಲ್ಲೆ ಸೇರಿದಂತೆ, ದಾವಣಗೆರೆ ,ಚಿತ್ರದುರ್ಗದಲ್ಲಿ ಹಾಲಿನ ದರ 3 ರೂಪಾಯಿ ಏರಿಕೆ ಕಾಣಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಈಗಾಗಲೇ ನಿರ್ಧಾರ ಪ್ರಕಟಿಸಿತ್ತು. ಅದರಂತೆ ಪ್ರತಿ ಲೀಟರ್ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ₹3 ಏರಿಕೆ ಮಾಡಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಶಿಮುಲ್) ಇವತ್ತಿನಿಂದ ದರ ಏರಿಕೆಯನ್ನ ಜಾರಿಗೆ ತಂದಿದೆ.
ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಖರೀದಿಸುವ ಹಾಲಿನ ಖರೀದಿ ದರ ₹ 3ಕ್ಕೆ ಪರಿಷ್ಕರಿಸಲಾಗಿದ್ದು, ದರ ಏರಿಕೆಯ ₹ 3 ರೂಪಾಯಿ ರೈತರಿಗೆ ದೊರೆಯಲಿದೆ ಎಂದು ಶಿಮುಲ್ ಅಧ್ಯಕ್ಷ ಎನ್.ಹೆಚ್ ಶ್ರೀಪಾದ್ ರಾವ್ ತಿಳಿಸಿದ್ದಾರೆ.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ. ದರ ಹೆಚ್ಚಳದ ನಂತರ ಒಕ್ಕೂಟದಿಂದ ಸಂಘಗಳಿಗೆ ಹಾಲಿ ನೀಡುತ್ತಿರುವ ದರ ₹33.71ರಿಂದ ₹36.83 ಹೆಚ್ಚಳವಾಗಲಿದೆ. ಸಂಘದಿಂದ ಉತ್ಪಾದಕರಿಗೆ ಹಾಲಿ ನೀಡುತ್ತಿರುವ ದರ ₹31.85 ರಿಂದ ₹ 34.97ಕ್ಕೆ ಹೆಚ್ಚಳವಾಗಲಿದೆ ಎಂದು ತಿಳಿಸಿದರು.
ಯಾವ ಹಾಲಿಗೆ ಎಷ್ಟು ರೇಟು?
-
ಟೋನ್ಡ್ ಮಿಲ್ಕ್ ಲೀಟರ್ಗೆ ₹ 39–42 ಅರ್ಧ ಲೀ.ಗೆ ₹ 20-22
-
ಶುಭಂ ಸ್ಟಾಂಡರ್ಡ್ ಲೀ.ಗೆ ₹ 45-48 ಅರ್ಧ ಲೀ.ಗೆ ₹ 23-25
-
ಹೋಮೋಜೀನೈಜ್ಡ್ 1 ಲೀ.ಗೆ ₹ 46-49 ಅರ್ಧ ಲೀ.ಗೆ ₹ 23-25 200 ಮಿ.ಲೀ.ಗೆ ₹ 11-12
-
ಮೊಸರು ಅರ್ಧ ಲೀ.ಗೆ ₹ 24-26 200 ಮಿಲೀ.ಗೆ ₹ 11-12
-
ಮಜ್ಜಿಗೆ 200 ಮಿ.ಲೀ.ಗೆ ₹ 8-9
-
ಸ್ವೀಟ್ ಲಸ್ಸೀ 200 ಮಿ.ಲೀ.ಗೆ ₹12ರಿಂದ ₹13 .
10 ಎಂ ಎಲ್ ಹಾಲು ಹೆಚ್ಚಳ
ಇನ್ನೂ ಪ್ರತಿ ಲೀಟರ್ ಹಾಲಿಗೆ ಮೂರು ರೂಪಾಯಿ ಎಂದರೆ, ಅರ್ಧ ಲೀಟರ್ಗೆ ₹1.50 ಏರಿಕೆಯಾಗಬೇಕು. ಆದರೆ ಇದರಿಂದ ಚಿಲ್ಲರೆ ಸಮಸ್ಯೆಯಾಗುತ್ತೆ ಎಂಬ ಕಾರಣಕ್ಕೆ 10 ಎಂಎಲ್ ಹೆಚ್ಚುವರಿ ಹಾಲನ್ನು ಅರ್ಧ ಲೀಟರ್ನಲ್ಲಿ ಸೇರಿಸಲಾಗುತ್ತಿದೆ. ಅಲ್ಲದೆ ಅರ್ಧ ಲೀಟರ್ಗೆ ಒಂದು ವರೆ ರೂಪಾಯಿ ಬದಲು 2 ರೂಪಾಯಿಯನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಶ್ರೀಪಾದರಾವ್ ಮಾಹಿತಿ ನೀಡಿದರು.