ಶಿವಮೊಗ್ಗದಲ್ಲಿ ಒಂದೇ ದಿನ ಆರು ಪೊಲೀಸ್ ಅಧಿಕಾರಿಗಳ ನಿವೃತ್ತಿ!

Six police officers retire in Shivamogga in a single day ಶಿವಮೊಗ್ಗದಲ್ಲಿ ಒಂದೇ ದಿನ ಆರು ಪೊಲೀಸ್ ಅಧಿಕಾರಿಗಳ ನಿವೃತ್ತಿ!

ಶಿವಮೊಗ್ಗದಲ್ಲಿ ಒಂದೇ ದಿನ  ಆರು ಪೊಲೀಸ್ ಅಧಿಕಾರಿಗಳ ನಿವೃತ್ತಿ!

KARNATAKA NEWS/ ONLINE / Malenadu today/ Aug 1, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆಯಲ್ಲಿ ವಿವಿದೆಡೆ ಸೇವೆ ಸಲ್ಲಿಸುತ್ತಿದ್ದ ನಾಲ್ವರು ಎಎಸ್​ಐ ಹಾಗೂ ಇಬ್ಬರು ಆರ್​ಎಸ್​ಐಗಳನು ನಿನ್ನೆ ನಿವೃತ್ತಿಯಾಗಿದ್ದಾರೆ. ಅವರುಗಳನ್ನ ಶಿವಮೊಗ್ಗ ಜಿಲ್ಲಾ ಪೊಲೀಸ್​ ಇಲಾಖೇ ಸನ್ಮಾನ ಮಾಡಿ ನಿವೃತ್ತಿ ಜೀವನಕ್ಕೆ ಶುಭಕೋರಿ ಬೀಳ್ಕೊಟ್ಟಿದೆ ಎಸ್​ಪಿ ಕಚೇರಿಗೆ ನಿವೃತ್ತಿಯಾಗುತ್ತಿರುವ ಸಿಬ್ಬಂದಿಗಳನ್ನು ಬರಮಾಡಿಕೊಂಡ ಎಸ್​ಪಿ ಮಿಥುನ್ ಕುಮಾರ್,  ನೆನಪಿನ ಕಾಣಿಕೆಯನ್ನು ನೀಡಿ  ಸನ್ಮಾನಿಸಿ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಬಿಳ್ಕೊಟ್ಟರು

ನಿವೃತ್ತರಾದವರ ವಿವರ

1) ಗಂಗಾಧರಪ್ಪ, ಆರ್.ಎಸ್.ಐ ಡಿಎಆರ್ ಶಿವಮೊಗ್ಗ, 

2) ಹಸ್ನರ್, ಆರ್.ಎಸ್.ಐ ಡಿಎಆರ್ ಶಿವಮೊಗ್ಗ, 

3) ಮಲ್ಲಿಕಾರ್ಜುನಪ್ಪ, ಎಎಸ್ಐ ತುಂಗಾನಗರ ಪೊಲೀಸ್ ಠಾಣೆ, 

4) ಬಿ ಎಂ ಮಂಜಪ್ಪ, ಎಎಸ್ಐ ಮಾಳೂರು, ಪೊಲೀಸ್ ಠಾಣೆ, 

5) ವಿಠಲ, ಎಎಸ್ಐ, ಭದ್ರಾವತಿ ಸಂಚಾರಿ ಪೊಲೀಸ್ ಠಾಣೆ 

6) ಫೈರಾಜ್ ಭಾಷಾ, ಎಎಸ್ಐ, ಹೊಸನಗರ ಪೊಲೀಸ್ ಠಾಣೆ


ಡಿ ದರ್ಜೆ ನೌಕರನಿಗೆ ಎಸಿ ಆದರು ಅಸಿಸ್ಟೆಂಟ್! ಮನೆಯವರಿಗೆ ಬಿಟ್ಟು ಥ್ಯಾಂಕ್ಸ್​ ಹೇಳಿದ ಉಪವಿಭಾಗೀಯ ಅಧಿಕಾರಿ! ಏಕೆ ಗೊತ್ತಾ?

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ನಿನ್ನೆ ಅಪರೂಪದ ಘಟನೆಗೆ ಸರ್ಕಾರಿ ಅಧಿಕಾರಿಗಳು ಸಾಕ್ಷಿಯಾದರು. ಇಲ್ಲಿನ ಎಸಿ ಕಚೇರಿ ಗುಮಾಸ್ತರಾಗಿದ್ದ ಕೃಷ್ಣಪ್ಪಣ್ಣ ನಿವೃತ್ತಿಯಾಗಿದ್ದರು. ಅವರಿಗೆ ಹೃದಯಸ್ಪರ್ಶಿ ಬಿಳ್ಕೊಡುಗೆ ನೀಡಲು ಇಡೀ ಕಚೇರಿಯ ಸಿಬ್ಬಂದಿ ಸಿದ್ದತೆ ಮಾಡಿಕೊಂಡಿದ್ದರು, ಸ್ವತಃ ಎಸಿ ಪಲ್ಲವಿ ಸಹ ತಮ್ಮೆಲ್ಲ ಕೆಲಸ ಬದಿಗಿಟ್ಟು ತಮ್ಮ ಕಚೇರಿ ಹಿರಿಯ ಸಿಬ್ಬಂದಿಯ ಸನ್ಮಾನಿಸಲು ಅಣಿಯಾದರು. ಸಾಗರ  ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಹಲವು ವರ್ಷಗಳಿಂದ ಕೃಷ್ಣಪ್ಪಎಂಬವರು ಕೆಲಸ ನಿರ್ವಹಿಸುತ್ತಿದ್ದಾರೆ. ನಿನ್ನೆ ಸೋಮವಾರ  ವಯೋನಿವೃತ್ತಿ ಹೊಂದಿದ್ದಾರೆ. ವೃತ್ತಿಜೀವನದ ಕೊನೆ ದಿನದ ಕೆಲಸಕ್ಕೆ ಹಾಜರಾಗಿದ್ದ ಅವರಿಗೆ ಕಚೇರಿ ಸಿಬ್ಬಂದಿ ವಿಶೇಷವಾಗಿ ಬಿಳ್ಕೊಡುಗೆ ನೀಡಿದ್ದಾರೆ. 

ಕಾದಿತ್ತು ಸರ್​ಪ್ರೈಸ್​

ಕಚೇರಿ ಸಿಬ್ಬಂದಿಗಳು ಕೃಷ್ಣಪ್ಪರವರನ್ನ ಹೋಗಿಬನ್ನಿ ನಿವೃತ್ತಿ ಜೀವನ ಚೆನ್ನಾಗಿರಲಿ ಎಂದು ಹಾರೈಸಿದರೆ, ಕೃಷ್ಣಪ್ಪರವರ ಮುಂದೆ ಬಂದು ನಿಂತ ಎಸಿ ಪಲ್ಲವಿಯವರು, ಕೃಷ್ಣಪ್ಪರವರನ್ನ ತಮ್ಮ ಸರ್ಕಾರಿ ಕಾರಿನಲ್ಲಿ ಕೂರುವಂತೆ ತಿಳಿಸಿದ್ರು. ಇದಕ್ಕೆ ಕೃಷ್ಣಪ್ಪರವರು ಉತ್ತರಿಸುವ ಮೊದಲೇ ಪಲ್ಲವಿಯವರು ತಮ್ಮ ಕಾರಿನಲ್ಲಿ ತಾವು ಕೂರುತ್ತಿದ್ದ ಪ್ರಂಟ್ ಸೀಟ್​ನಲ್ಲಿ ಕೃಷ್ಣಪ್ಪರವರನ್ನ ಕುಳ್ಳಿರಿಸಿದ್ರು. ಅಲ್ಲದೆ ಎಸಿ ಕಾರಿನಲ್ಲಿ ಕೃಷ್ಣಪ್ಪರವರನ್ನ ಮನೆಯವರೆಗೂ ಬಿಟ್ಟು, ಅಲ್ಲಿದ್ದ ಕೃಷ್ಣಪ್ಪರವರ ಕುಟುಂಬಸ್ಥರಿಗೆ ವಿಶ್ ಮಾಡಿ ವಾಪಸ್ ಆದರು. 

ಅಧಿಕಾರ ವರ್ಗದಲ್ಲಿ ಬೇರೂರುತ್ತಿರುವ ಅಧಿಕಾರದ ತಾತ್ಸಾರಗಳ ನಡುವೆ ಸಾಗರದಲ್ಲಿ ನಡೆದ ನಿನ್ನೆ ಘಟನೆ ಅಲ್ಲಿದ್ದವರಿಗೆ ಸೈ ಎನಿಸಿತ್ತು. 


ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪ KSRTC ಬಸ್​ ಆಕ್ಸಿಡೆಂಟ್! ಹೊಂಡಕ್ಕೆ ಬಿದ್ದ ವಾಹನ!

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು  ತಾಳಗುಪ್ಪದ ಬಳಿಯ ಬಲೇಗಾರುವಿನಲ್ಲಿ ನಿನ್ನೆ  KSRTC ಬಸ್​ವೊಂದು ರಸ್ತೆ ಬದಿಯ ಹೊಂಡಕ್ಕೆ ಜಾರಿ ಅಪಘಾತವಾದ ಘಟನೆ ಸಂಭವಿಸಿದೆ. ಬಲೇಗಾರು ಸಮೀಪ ಶಿರಸಿ-ಸಾಗರ ಕೆಎಸ್​ಆರ್​ಟಿಸಿ ಬಸ್ ಸಾಗುತ್ತಿತ್ತು. ಈ ವೇಳೆ ಕಾರೊಂದು ಸ್ಪೀಡಾಗಿ ಬಂದಿದೆ. ಆತ ಬಸ್​ಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇದ್ದಿದ್ದರಿಂದ ತಕ್ಷಣವೇ ಬಸ್ ಚಾಲಕ ವಾಹನವನ್ನು ಕಂಟ್ರೋಲ್​ಗೆ ತೆಗೆದುಕೊಂಡು ರಸ್ತೆಯಿಂದ ಕೆಳಕ್ಕೆ ಇಳಿಸಿದ್ದಾರೆ. ಈ ವೇಳೇ ಬಸ್​ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಹೊಂಡಕ್ಕೆ ಉರುಳಿದೆ. ಘಟನೆಯಲ್ಲಿ ಬಸ್​  ಹೊಂಡದಲ್ಲಿ ಒಂದು ಬದಿ ವಾಲಿಕೊಂಡು ಬಿದ್ದಿದೆ. ಅದೃಷ್ಟಕ್ಕೆ ಬಸ್​ ನಲ್ಲಿದ್ದವರಿಗೆ ಹೆಚ್ಚು ಅಪಾಯವಾಗಲಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಬಚಾವ್ ಆಗಿದ್ದಾರೆ.  


ಲೀಟರ್​ಗೆ ₹3 ಓಕೆ! ಅರ್ಧ ಲೀಟರ್​ ₹2 ರೂಪಾಯಿ ಜಾಸ್ತಿ ಏಕೆ? ಹಾಫ್ ಲೀಟರ್​ ನಲ್ಲಿ ಹೆಚ್ಚು ಬರುತ್ತಾ ನಂದಿನಿ ಹಾಲು! ಇಷ್ಟಕ್ಕೂ ಯಾವ ಹಾಲಿಗೆಷ್ಟು ರೇಟು?



 ​