2 ದಿನ ಶಿವಮೊಗ್ಗಕ್ಕೆ ಮಧು ಬಂಗಾರಪ್ಪ ಭೇಟಿ! ಯಾವೆಲ್ಲಾ ಕಾರ್ಯಕ್ರಮಗಳಿವೆ! ಇಲ್ಲಿದೆ ವಿವರ

Here is the details of Shivamogga district in-charge minister Madhu Bangarappa's district tour ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರ ಜಿಲ್ಲಾ ಪ್ರವಾಸದ ವಿವರ ಇಲ್ಲಿದೆ

2 ದಿನ ಶಿವಮೊಗ್ಗಕ್ಕೆ ಮಧು ಬಂಗಾರಪ್ಪ ಭೇಟಿ! ಯಾವೆಲ್ಲಾ ಕಾರ್ಯಕ್ರಮಗಳಿವೆ! ಇಲ್ಲಿದೆ ವಿವರ

KARNATAKA NEWS/ ONLINE / Malenadu today/ Aug 1, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವರು ಹಾಗೂ  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ  ಸಚಿವರಾದ ಎಸ್. ಮಧು ಬಂಗಾರಪ್ಪರವರು ಇದೇ ಆಗಸ್ಟ್ 05 ಮತ್ತು 06  ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಎರಡು ದಿನ ಅವರ ಕಾರ್ಯಕ್ರಮಗಳ ವಿವರಗಳನ್ನು ನೋಡುವುದಾದರೆ, ಸಚಿವರು  ಆಗಸ್ಟ್​  05 ರ ಬೆಳಿಗ್ಗೆ 9 ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸುವರು. ಬೆಳಿಗ್ಗೆ 9.30ಕ್ಕೆ ಯಡೆಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡುವರು.

ಬೆ-10.00ಕ್ಕೆ ಶಿವಮೊಗ್ಗ ಪಕ್ಷದ ಕಚೇರಿ ಭೇಟಿ, ಬೆ-11.00ಕ್ಕೆ ಎನ್.ಎಸ್.ಯು ಸಮಾವೇಶ, 

ಮ: 12.00 ಕ್ಕೆ ಸಂತೇಕಡೂರು ಗ್ರಾಮ ಪಂಚಾಯತ್ ಕಟ್ಟಡ ಉದ್ಘಾಟನಾ ಕಾರ್ಯಕ್ರಮ

ಮ.-01ಕ್ಕೆ ಶಾಂತಿನಗರದ ಮೌಲಾನ ಆಜಾದ್ ವಸತಿಗೃಹದಲ್ಲಿ ಅಲ್ಪಸಂಖ್ಯಾತರ ವಸತಿ ಶಾಲಾ ಕಟ್ಟಡದ ಉದ್ಘಾಟನೆ

ಮ.-04ಕ್ಕೆ ಸೊರಬಾ ಪುರಸಭೆ ಅಧಿಕಾರಿಗಳ ಜೊತೆ ಸಭೆ, ಸಂ.-05ಕ್ಕೆ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಸೊರಬದಲ್ಲಿ ವಾಸ್ತವ್ಯ.  

ಆಗಸ್ಟ್​ 06 ರಂದು ಬೆಳಿಗ್ಗೆ 10.00 ಕ್ಕೆ ತಲಗಡ್ಡೆ ಗ್ರಾಮ ಪಂಚಾಯತ್ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ ಹಾಗೂ ಕೊಡಿಕೊಪ್ಪ ಪ್ರಾಥಮಿಕ ಶಾಲಾ ಕೊಠಡಿ ಉದ್ಘಾಟನೆ

ಬೆ.-11.30ಕ್ಕೆ ಸಾಗರದ ಆಪ್ಕೋಸ್ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 1.00ಕ್ಕೆ ತಾಳಗುಪ್ಪದಲ್ಲಿ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆ

ಮ.-3.00ಕ್ಕೆ ಹೊಳೆಬಾಗಿಲು ಸೇತುವೆ ಕಾಮಗಾರಿ ಪರೀಶೀಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 


ಶಿವಮೊಗ್ಗದಲ್ಲಿ ಒಂದೇ ದಿನ ಆರು ಪೊಲೀಸ್ ಅಧಿಕಾರಿಗಳ ನಿವೃತ್ತಿ!

ಶಿವಮೊಗ್ಗ ಜಿಲ್ಲೆಯಲ್ಲಿ ವಿವಿದೆಡೆ ಸೇವೆ ಸಲ್ಲಿಸುತ್ತಿದ್ದ ನಾಲ್ವರು ಎಎಸ್​ಐ ಹಾಗೂ ಇಬ್ಬರು ಆರ್​ಎಸ್​ಐಗಳನು ನಿನ್ನೆ ನಿವೃತ್ತಿಯಾಗಿದ್ದಾರೆ. ಅವರುಗಳನ್ನ ಶಿವಮೊಗ್ಗ ಜಿಲ್ಲಾ ಪೊಲೀಸ್​ ಇಲಾಖೇ ಸನ್ಮಾನ ಮಾಡಿ ನಿವೃತ್ತಿ ಜೀವನಕ್ಕೆ ಶುಭಕೋರಿ ಬೀಳ್ಕೊಟ್ಟಿದೆ ಎಸ್​ಪಿ ಕಚೇರಿಗೆ ನಿವೃತ್ತಿಯಾಗುತ್ತಿರುವ ಸಿಬ್ಬಂದಿಗಳನ್ನು ಬರಮಾಡಿಕೊಂಡ ಎಸ್​ಪಿ ಮಿಥುನ್ ಕುಮಾರ್,  ನೆನಪಿನ ಕಾಣಿಕೆಯನ್ನು ನೀಡಿ  ಸನ್ಮಾನಿಸಿ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಬಿಳ್ಕೊಟ್ಟರು

1) ಗಂಗಾಧರಪ್ಪ, ಆರ್.ಎಸ್.ಐ ಡಿಎಆರ್ ಶಿವಮೊಗ್ಗ, 

2) ಹಸ್ನರ್, ಆರ್.ಎಸ್.ಐ ಡಿಎಆರ್ ಶಿವಮೊಗ್ಗ, 

3) ಮಲ್ಲಿಕಾರ್ಜುನಪ್ಪ, ಎಎಸ್ಐ ತುಂಗಾನಗರ ಪೊಲೀಸ್ ಠಾಣೆ, 

4) ಬಿ ಎಂ ಮಂಜಪ್ಪ, ಎಎಸ್ಐ ಮಾಳೂರು, ಪೊಲೀಸ್ ಠಾಣೆ, 

5) ವಿಠಲ, ಎಎಸ್ಐ, ಭದ್ರಾವತಿ ಸಂಚಾರಿ ಪೊಲೀಸ್ ಠಾಣೆ 

6) ಫೈರಾಜ್ ಭಾಷಾ, ಎಎಸ್ಐ, ಹೊಸನಗರ ಪೊಲೀಸ್ ಠಾಣೆ


ಡಿ ದರ್ಜೆ ನೌಕರನಿಗೆ ಎಸಿ ಆದರು ಅಸಿಸ್ಟೆಂಟ್! ಮನೆಯವರಿಗೆ ಬಿಟ್ಟು ಥ್ಯಾಂಕ್ಸ್​ ಹೇಳಿದ ಉಪವಿಭಾಗೀಯ ಅಧಿಕಾರಿ! ಏಕೆ ಗೊತ್ತಾ?

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ನಿನ್ನೆ ಅಪರೂಪದ ಘಟನೆಗೆ ಸರ್ಕಾರಿ ಅಧಿಕಾರಿಗಳು ಸಾಕ್ಷಿಯಾದರು. ಇಲ್ಲಿನ ಎಸಿ ಕಚೇರಿ ಗುಮಾಸ್ತರಾಗಿದ್ದ ಕೃಷ್ಣಪ್ಪಣ್ಣ ನಿವೃತ್ತಿಯಾಗಿದ್ದರು. ಅವರಿಗೆ ಹೃದಯಸ್ಪರ್ಶಿ ಬಿಳ್ಕೊಡುಗೆ ನೀಡಲು ಇಡೀ ಕಚೇರಿಯ ಸಿಬ್ಬಂದಿ ಸಿದ್ದತೆ ಮಾಡಿಕೊಂಡಿದ್ದರು, ಸ್ವತಃ ಎಸಿ ಪಲ್ಲವಿ ಸಹ ತಮ್ಮೆಲ್ಲ ಕೆಲಸ ಬದಿಗಿಟ್ಟು ತಮ್ಮ ಕಚೇರಿ ಹಿರಿಯ ಸಿಬ್ಬಂದಿಯ ಸನ್ಮಾನಿಸಲು ಅಣಿಯಾದರು. ಸಾಗರ  ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಹಲವು ವರ್ಷಗಳಿಂದ ಕೃಷ್ಣಪ್ಪಎಂಬವರು ಕೆಲಸ ನಿರ್ವಹಿಸುತ್ತಿದ್ದಾರೆ. ನಿನ್ನೆ ಸೋಮವಾರ  ವಯೋನಿವೃತ್ತಿ ಹೊಂದಿದ್ದಾರೆ. ವೃತ್ತಿಜೀವನದ ಕೊನೆ ದಿನದ ಕೆಲಸಕ್ಕೆ ಹಾಜರಾಗಿದ್ದ ಅವರಿಗೆ ಕಚೇರಿ ಸಿಬ್ಬಂದಿ ವಿಶೇಷವಾಗಿ ಬಿಳ್ಕೊಡುಗೆ ನೀಡಿದ್ದಾರೆ. 

ಕಾದಿತ್ತು ಸರ್​ಪ್ರೈಸ್​

ಕಚೇರಿ ಸಿಬ್ಬಂದಿಗಳು ಕೃಷ್ಣಪ್ಪರವರನ್ನ ಹೋಗಿಬನ್ನಿ ನಿವೃತ್ತಿ ಜೀವನ ಚೆನ್ನಾಗಿರಲಿ ಎಂದು ಹಾರೈಸಿದರೆ, ಕೃಷ್ಣಪ್ಪರವರ ಮುಂದೆ ಬಂದು ನಿಂತ ಎಸಿ ಪಲ್ಲವಿಯವರು, ಕೃಷ್ಣಪ್ಪರವರನ್ನ ತಮ್ಮ ಸರ್ಕಾರಿ ಕಾರಿನಲ್ಲಿ ಕೂರುವಂತೆ ತಿಳಿಸಿದ್ರು. ಇದಕ್ಕೆ ಕೃಷ್ಣಪ್ಪರವರು ಉತ್ತರಿಸುವ ಮೊದಲೇ ಪಲ್ಲವಿಯವರು ತಮ್ಮ ಕಾರಿನಲ್ಲಿ ತಾವು ಕೂರುತ್ತಿದ್ದ ಪ್ರಂಟ್ ಸೀಟ್​ನಲ್ಲಿ ಕೃಷ್ಣಪ್ಪರವರನ್ನ ಕುಳ್ಳಿರಿಸಿದ್ರು. ಅಲ್ಲದೆ ಎಸಿ ಕಾರಿನಲ್ಲಿ ಕೃಷ್ಣಪ್ಪರವರನ್ನ ಮನೆಯವರೆಗೂ ಬಿಟ್ಟು, ಅಲ್ಲಿದ್ದ ಕೃಷ್ಣಪ್ಪರವರ ಕುಟುಂಬಸ್ಥರಿಗೆ ವಿಶ್ ಮಾಡಿ ವಾಪಸ್ ಆದರು. ಅಧಿಕಾರ ವರ್ಗದಲ್ಲಿ ಬೇರೂರುತ್ತಿರುವ ಅಧಿಕಾರದ ತಾತ್ಸಾರಗಳ ನಡುವೆ ಸಾಗರದಲ್ಲಿ ನಡೆದ ನಿನ್ನೆ ಘಟನೆ ಅಲ್ಲಿದ್ದವರಿಗೆ ಸೈ ಎನಿಸಿತ್ತು. 


ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪ KSRTC ಬಸ್​ ಆಕ್ಸಿಡೆಂಟ್! ಹೊಂಡಕ್ಕೆ ಬಿದ್ದ ವಾಹನ!

ಲೀಟರ್​ಗೆ ₹3 ಓಕೆ! ಅರ್ಧ ಲೀಟರ್​ ₹2 ರೂಪಾಯಿ ಜಾಸ್ತಿ ಏಕೆ? ಹಾಫ್ ಲೀಟರ್​ ನಲ್ಲಿ ಹೆಚ್ಚು ಬರುತ್ತಾ ನಂದಿನಿ ಹಾಲು! ಇಷ್ಟಕ್ಕೂ ಯಾವ ಹಾಲಿಗೆಷ್ಟು ರೇಟು?



 ​