ಡಿ ದರ್ಜೆ ನೌಕರನಿಗೆ ಎಸಿ ಆದರು ಅಸಿಸ್ಟೆಂಟ್! ಮನೆಯವರಿಗೆ ಬಿಟ್ಟು ಥ್ಯಾಂಕ್ಸ್​ ಹೇಳಿದ ಉಪವಿಭಾಗೀಯ ಅಧಿಕಾರಿ! ಏಕೆ ಗೊತ್ತಾ?

Sagar AC Pallavi thanked the retired office clerk for his service, leaving him in an AC car till his home. ನಿವೃತ್ತಿ ಹೊಂದಿದ ಡಿ ದರ್ಜೆ ನೌಕರನನ್ನ ಅವರ ಮನೆಯವರೆಗೆ ಎಸಿ ಕಾರಿನಲ್ಲಿಯೇ ಬಿಟ್ಟು , ಅವರ ಸೇವೆಗೆ ಸಾಗರ ಎಸಿ ಪಲ್ಲವಿಯವರು ಧನ್ಯವಾದ ತಿಳಿಸಿದ್ಧಾರೆ.

ಡಿ ದರ್ಜೆ ನೌಕರನಿಗೆ  ಎಸಿ ಆದರು ಅಸಿಸ್ಟೆಂಟ್!  ಮನೆಯವರಿಗೆ ಬಿಟ್ಟು ಥ್ಯಾಂಕ್ಸ್​ ಹೇಳಿದ ಉಪವಿಭಾಗೀಯ ಅಧಿಕಾರಿ! ಏಕೆ ಗೊತ್ತಾ?

KARNATAKA NEWS/ ONLINE / Malenadu today/ Aug 1, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ನಿನ್ನೆ ಅಪರೂಪದ ಘಟನೆಗೆ ಸರ್ಕಾರಿ ಅಧಿಕಾರಿಗಳು ಸಾಕ್ಷಿಯಾದರು. ಇಲ್ಲಿನ ಎಸಿ ಕಚೇರಿ ಡಿ ದರ್ಜೆ ನೌಕರರಾಗಿದ್ದ ಕೃಷ್ಣಪ್ಪಣ್ಣ ನಿವೃತ್ತಿಯಾಗಿದ್ದರು. ಅವರಿಗೆ ಹೃದಯಸ್ಪರ್ಶಿ ಬಿಳ್ಕೊಡುಗೆ ನೀಡಲು ಇಡೀ ಕಚೇರಿಯ ಸಿಬ್ಬಂದಿ ಸಿದ್ದತೆ ಮಾಡಿಕೊಂಡಿದ್ದರು, ಸ್ವತಃ ಎಸಿ ಪಲ್ಲವಿ ಸಹ ತಮ್ಮೆಲ್ಲ ಕೆಲಸ ಬದಿಗಿಟ್ಟು ತಮ್ಮ ಕಚೇರಿ ಹಿರಿಯ ಸಿಬ್ಬಂದಿಯ ಸನ್ಮಾನಿಸಲು ಅಣಿಯಾದರು. 

ಸಾಗರ  ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಹಲವು ವರ್ಷಗಳಿಂದ ಕೃಷ್ಣಪ್ಪಎಂಬವರು ಕೆಲಸ ನಿರ್ವಹಿಸುತ್ತಿದ್ದಾರೆ. ನಿನ್ನೆ ಸೋಮವಾರ  ವಯೋನಿವೃತ್ತಿ ಹೊಂದಿದ್ದಾರೆ. ವೃತ್ತಿಜೀವನದ ಕೊನೆ ದಿನದ ಕೆಲಸಕ್ಕೆ ಹಾಜರಾಗಿದ್ದ ಅವರಿಗೆ ಕಚೇರಿ ಸಿಬ್ಬಂದಿ ವಿಶೇಷವಾಗಿ ಬಿಳ್ಕೊಡುಗೆ ನೀಡಿದ್ದಾರೆ. 

ಕಾದಿತ್ತು ಸರ್​ಪ್ರೈಸ್​

ಕಚೇರಿ ಸಿಬ್ಬಂದಿಗಳು ಕೃಷ್ಣಪ್ಪರವರನ್ನ ಹೋಗಿಬನ್ನಿ ನಿವೃತ್ತಿ ಜೀವನ ಚೆನ್ನಾಗಿರಲಿ ಎಂದು ಹಾರೈಸಿದರೆ, ಕೃಷ್ಣಪ್ಪರವರ ಮುಂದೆ ಬಂದು ನಿಂತ ಎಸಿ ಪಲ್ಲವಿಯವರು, ಕೃಷ್ಣಪ್ಪರವರನ್ನ ತಮ್ಮ ಸರ್ಕಾರಿ ಕಾರಿನಲ್ಲಿ ಕೂರುವಂತೆ ತಿಳಿಸಿದ್ರು. ಇದಕ್ಕೆ ಕೃಷ್ಣಪ್ಪರವರು ಉತ್ತರಿಸುವ ಮೊದಲೇ ಪಲ್ಲವಿಯವರು ತಮ್ಮ ಕಾರಿನಲ್ಲಿ ತಾವು ಕೂರುತ್ತಿದ್ದ ಪ್ರಂಟ್ ಸೀಟ್​ನಲ್ಲಿ ಕೃಷ್ಣಪ್ಪರವರನ್ನ ಕುಳ್ಳಿರಿಸಿದ್ರು. ಅಲ್ಲದೆ ಎಸಿ ಕಾರಿನಲ್ಲಿ ಕೃಷ್ಣಪ್ಪರವರನ್ನ ಮನೆಯವರೆಗೂ ಬಿಟ್ಟು, ಅಲ್ಲಿದ್ದ ಕೃಷ್ಣಪ್ಪರವರ ಕುಟುಂಬಸ್ಥರಿಗೆ ವಿಶ್ ಮಾಡಿ ವಾಪಸ್ ಆದರು. ಅಧಿಕಾರ ವರ್ಗದಲ್ಲಿ ಬೇರೂರುತ್ತಿರುವ ಅಧಿಕಾರದ ತಾತ್ಸಾರಗಳ ನಡುವೆ ಸಾಗರದಲ್ಲಿ ನಡೆದ ನಿನ್ನೆ ಘಟನೆ ಅಲ್ಲಿದ್ದವರಿಗೆ ಸೈ ಎನಿಸಿತ್ತು. 


ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪ KSRTC ಬಸ್​ ಆಕ್ಸಿಡೆಂಟ್! ಹೊಂಡಕ್ಕೆ ಬಿದ್ದ ವಾಹನ!



ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು  ತಾಳಗುಪ್ಪದ ಬಳಿಯ ಬಲೇಗಾರುವಿನಲ್ಲಿ ನಿನ್ನೆ  KSRTC ಬಸ್​ವೊಂದು ರಸ್ತೆ ಬದಿಯ ಹೊಂಡಕ್ಕೆ ಜಾರಿ ಅಪಘಾತವಾದ ಘಟನೆ ಸಂಭವಿಸಿದೆ. 

ನಡೆದಿದ್ದೇನು?

ಬಲೇಗಾರು ಸಮೀಪ ಶಿರಸಿ-ಸಾಗರ ಕೆಎಸ್​ಆರ್​ಟಿಸಿ ಬಸ್ ಸಾಗುತ್ತಿತ್ತು. ಈ ವೇಳೆ ಕಾರೊಂದು ಸ್ಪೀಡಾಗಿ ಬಂದಿದೆ. ಆತ ಬಸ್​ಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇದ್ದಿದ್ದರಿಂದ ತಕ್ಷಣವೇ ಬಸ್ ಚಾಲಕ ವಾಹನವನ್ನು ಕಂಟ್ರೋಲ್​ಗೆ ತೆಗೆದುಕೊಂಡು ರಸ್ತೆಯಿಂದ ಕೆಳಕ್ಕೆ ಇಳಿಸಿದ್ದಾರೆ. ಈ ವೇಳೇ ಬಸ್​ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಹೊಂಡಕ್ಕೆ ಉರುಳಿದೆ. ಘಟನೆಯಲ್ಲಿ ಬಸ್​  ಹೊಂಡದಲ್ಲಿ ಒಂದು ಬದಿ ವಾಲಿಕೊಂಡು ಬಿದ್ದಿದೆ. ಅದೃಷ್ಟಕ್ಕೆ ಬಸ್​ ನಲ್ಲಿದ್ದವರಿಗೆ ಹೆಚ್ಚು ಅಪಾಯವಾಗಲಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಬಚಾವ್ ಆಗಿದ್ದಾರೆ.  


ಲೀಟರ್​ಗೆ ₹3 ಓಕೆ! ಅರ್ಧ ಲೀಟರ್​ ₹2 ರೂಪಾಯಿ ಜಾಸ್ತಿ ಏಕೆ? ಹಾಫ್ ಲೀಟರ್​ ನಲ್ಲಿ ಹೆಚ್ಚು ಬರುತ್ತಾ ನಂದಿನಿ ಹಾಲು! ಇಷ್ಟಕ್ಕೂ ಯಾವ ಹಾಲಿಗೆಷ್ಟು ರೇಟು?

ಬೆಲೆ ಏರಿಕೆ ಕಾಲ, ಜನಸಾಮಾನ್ಯರನ್ನ ಸುಡುತ್ತಿದೆ. ಇವತ್ತಿನಿಂದ ಶಿವಮೊಗ್ಗ ಜಿಲ್ಲೆ ಸೇರಿದಂತೆ, ದಾವಣಗೆರೆ ,ಚಿತ್ರದುರ್ಗದಲ್ಲಿ ಹಾಲಿನ ದರ 3 ರೂಪಾಯಿ ಏರಿಕೆ ಕಾಣಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಈಗಾಗಲೇ ನಿರ್ಧಾರ ಪ್ರಕಟಿಸಿತ್ತು. ಅದರಂತೆ  ಪ್ರತಿ ಲೀಟರ್ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ₹3 ಏರಿಕೆ ಮಾಡಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಶಿಮುಲ್) ಇವತ್ತಿನಿಂದ ದರ ಏರಿಕೆಯನ್ನ ಜಾರಿಗೆ ತಂದಿದೆ. 

ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಖರೀದಿಸುವ ಹಾಲಿನ ಖರೀದಿ ದರ ₹ 3ಕ್ಕೆ ಪರಿಷ್ಕರಿಸಲಾಗಿದ್ದು,  ದರ ಏರಿಕೆಯ ₹ 3 ರೂಪಾಯಿ ರೈತರಿಗೆ ದೊರೆಯಲಿದೆ ಎಂದು  ಶಿಮುಲ್ ಅಧ್ಯಕ್ಷ ಎನ್​.ಹೆಚ್ ಶ್ರೀಪಾದ್​ ರಾವ್ ತಿಳಿಸಿದ್ದಾರೆ. 

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ. ದರ ಹೆಚ್ಚಳದ ನಂತರ ಒಕ್ಕೂಟದಿಂದ ಸಂಘಗಳಿಗೆ ಹಾಲಿ ನೀಡುತ್ತಿರುವ ದರ ₹33.71ರಿಂದ ₹36.83 ಹೆಚ್ಚಳವಾಗಲಿದೆ. ಸಂಘದಿಂದ ಉತ್ಪಾದಕರಿಗೆ ಹಾಲಿ ನೀಡುತ್ತಿರುವ ದರ ₹31.85 ರಿಂದ ₹ 34.97ಕ್ಕೆ ಹೆಚ್ಚಳವಾಗಲಿದೆ ಎಂದು ತಿಳಿಸಿದರು.

 

ಯಾವ ಹಾಲಿಗೆ ಎಷ್ಟು ರೇಟು?

  • ಟೋನ್ಡ್ ಮಿಲ್ಕ್ ಲೀಟರ್‌ಗೆ ₹ 39–42 ಅರ್ಧ ಲೀ.ಗೆ ₹ 20-22 

  • ಶುಭಂ ಸ್ಟಾಂಡರ್ಡ್ ಲೀ.ಗೆ ₹ 45-48 ಅರ್ಧ ಲೀ.ಗೆ ₹ 23-25 

  • ಹೋಮೋಜೀನೈಜ್ಡ್ 1 ಲೀ.ಗೆ ₹ 46-49 ಅರ್ಧ ಲೀ.ಗೆ ₹ 23-25 200 ಮಿ.ಲೀ.ಗೆ ₹ 11-12 

  • ಮೊಸರು ಅರ್ಧ ಲೀ.ಗೆ ₹ 24-26 200 ಮಿಲೀ.ಗೆ ₹ 11-12 

  • ಮಜ್ಜಿಗೆ 200 ಮಿ.ಲೀ.ಗೆ ₹ 8-9 

  • ಸ್ವೀಟ್ ಲಸ್ಸೀ 200 ಮಿ.ಲೀ.ಗೆ ₹12ರಿಂದ ₹13 .  

10 ಎಂ ಎಲ್ ಹಾಲು ಹೆಚ್ಚಳ

ಇನ್ನೂ  ಪ್ರತಿ ಲೀಟರ್​ ಹಾಲಿಗೆ ಮೂರು ರೂಪಾಯಿ ಎಂದರೆ, ಅರ್ಧ  ಲೀಟರ್‌ಗೆ ₹1.50 ಏರಿಕೆಯಾಗಬೇಕು. ಆದರೆ ಇದರಿಂದ ಚಿಲ್ಲರೆ ಸಮಸ್ಯೆಯಾಗುತ್ತೆ ಎಂಬ ಕಾರಣಕ್ಕೆ 10 ಎಂಎಲ್ ಹೆಚ್ಚುವರಿ ಹಾಲನ್ನು ಅರ್ಧ ಲೀಟರ್​ನಲ್ಲಿ ಸೇರಿಸಲಾಗುತ್ತಿದೆ. ಅಲ್ಲದೆ ಅರ್ಧ ಲೀಟರ್​ಗೆ  ಒಂದು ವರೆ ರೂಪಾಯಿ ಬದಲು 2 ರೂಪಾಯಿಯನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಶ್ರೀಪಾದರಾವ್ ಮಾಹಿತಿ ನೀಡಿದರು.








 ​