ಶಿವಮೊಗ್ಗ | ಏರಿಯಾಗಳಲ್ಲಿ ಲಾಟಿ, ಬೂಟಿನ ಸದ್ದು | ರಾತ್ರಿ ಬೆಳಗಾಗುವಷ್ಟರಲ್ಲಿ 62 ಪಿಟ್ಟಿ ಕೇಸ್‌ |

Shivamogga police register 65 cases against foot patrolling, area domination and public nuances

ಶಿವಮೊಗ್ಗ | ಏರಿಯಾಗಳಲ್ಲಿ ಲಾಟಿ, ಬೂಟಿನ ಸದ್ದು | ರಾತ್ರಿ ಬೆಳಗಾಗುವಷ್ಟರಲ್ಲಿ  62 ಪಿಟ್ಟಿ ಕೇಸ್‌ |
Shivamogga police register 65 cases,foot patrolling, area domination, public nuances

SHIVAMOGGA | MALENADUTODAY NEWS | May 20, 2024  ಮಲೆನಾಡು ಟುಡೆ 

ಶಿವಮೊಗ್ಗ ಪೊಲೀಸರು ವಿಶೇಷ ಕಾಲ್ನಡಿಗೆ ಗಸ್ತು ಹಾಗೂ ಏರಿಯಾ ಡಾಮಿನೇಷನ್‌ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಚುನಾವಣೆ ಬಳಿಕ ಮೊದಲ ದಿನ ನಡೆದ ಕಾರ್ಯಾಚರಣೆಯಲ್ಲಿ 70 ಕ್ಕೂ ಹೆಚ್ಚು ಕೇಸ್‌ ದಾಖಲಿಸಿದ್ದ ಪೊಲೀಸರು ನಿನ್ನೆ ಅಂದರೆ ದಿನಾಂಕಃ 19-05-2024  ರಂದು ಸಂಜೆ 62 ಪಿಟ್ಟಿಕೇಸ್‌ಗಳನ್ನು ದಾಖಲಿಸಿದ್ದಾರೆ. 

ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಬೈ ಪಾಸ್ ರಸ್ತೆ, ನ್ಯೂ ಮಂಡ್ಲಿ, ಎಂ.ಕೆ.ಕೆ ರಸ್ತೆ, ಹಳೆ ಮಂಡ್ಲಿ, ಸಿ ಎಲ್ ರಾಮಣ್ಣ ರಸ್ತೆ, ಗೋಪಾಳ, ಕೆಳಗಿನ ತುಂಗಾನಗರ, ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಎ ಎ ಕಾಲೋನಿ, ಆರ್ ಟಿ ಓ ರಸ್ತೆ, ಚೌಡೇಶ್ವರಿ ಕಾಲೋನಿ, ಬೊಮ್ಮನಕಟ್ಟೆ, ಸೋಮಿನಕೊಪ್ಪ, ರಾಗಿಗುಡ್ಡ, ಕುಂಸಿಯ ಕನಕ ನಗರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. 

ಅತ್ತ ಶಿಕಾರಿಪುರ  ಉಪ ವಿಭಾಗ ವ್ಯಾಪ್ತಿಯ ಶಿಕಾರಿಪುರ ಟೌನ್ ಕೋರ್ಟ್ ವೃತ್ತ, ಅಂಬರಗೊಪ್ಪ, ಆನವಟ್ಟಿಯ ಬಸ್ ನಿಲ್ದಾಣ ಹಾಗೂ ಸೊರಬ ವೃತ್ತ ಸಾಗರ ಉಪ ವಿಭಾಗ ವ್ಯಾಪ್ತಿಯ ಸಾಗರ ಟೌನ್ ನ ಇಂಡಸ್ಟ್ರಿಯಲ್ ಏರಿಯಾ, ಜಂಬಗಾರು, ಕಾರ್ಗಲ್ ನ ಭಟ್ಕಳ ವೃತ್ತ, ಕಾರ್ಗಲ್ ಬಜಾರ್, ಆನಂದಪುರದ ಬಸ್ ನಿಲ್ದಾಣ, ತಾಳಗುಪ್ಪದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. 

ಇತ್ತ ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ಬಾಳೆ ಬೈಲಿನಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು  (Foot Patrolling) ಮತ್ತು ಠಾಣಾ ವ್ಯಾಪ್ತಿಗಳ ಹೊರ ವಲಯಗಳಲ್ಲಿ Area Domination ವಿಶೇಷ ಗಸ್ತು ಮಾಡಿದ್ದಾರೆ. 

ಈ ವೇಳೆ  Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟಾರೆ 62 ಲಘು ಪ್ರಕರಣಗಳನ್ನು ದಾಖಲಿಸಿದ್ದಾರೆ ಅಂತಾ ಪೊಲೀಸ್‌ ಪ್ರಕಟಣೆ ತಿಳಿಸಿದೆ.