ಶಿವಮೊಗ್ಗ ಕೋರ್ಟ್‌ | ಪಂಚಾಯಿತಿ ಎಲೆಕ್ಷನ್‌ ಟೈಂನಲ್ಲಿ ಕೊ...!| ಆರೋಪಿಗೆ ಜೀವಾವಧಿ ಶಿಕ್ಷೆ

A Shivamogga court has sentenced a man to life imprisonment for a murder that took place during the panchayat elections.  Shivamogga Rural Circle,   Judge Pallavi B.R. 

ಶಿವಮೊಗ್ಗ ಕೋರ್ಟ್‌ | ಪಂಚಾಯಿತಿ ಎಲೆಕ್ಷನ್‌ ಟೈಂನಲ್ಲಿ ಕೊ...!| ಆರೋಪಿಗೆ ಜೀವಾವಧಿ ಶಿಕ್ಷೆ

SHIVAMOGGA | MALENADUTODAY NEWS | Jun 15, 2024  ಮಲೆನಾಡು ಟುಡೆ 

ಪಂಚಾಯಿತಿ ಎಲೆಕ್ಷನ್‌ ಟೈಂನಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಆರೋಪಿಯೊಬ್ಬನಿಗೆ ಶಿವಮೊಗ್ಗ ಕೋರ್ಟ್‌ ಜೀವಾವಧಿ ಶಿಕ್ಷೆ ನೀಡಿದೆ. ಪ್ರಕರಣ ವಿವರ ಹೀಗಿದೆ. ಹೊಳೆಬೆನವಳ್ಳಿ ದೊಡ್ಡ ತಾಂಡಾದ  ಮಹೇಶ್ ನಾಯ್ಕ, 40 ವರ್ಷ ಎಂಬವರನ್ನ ಪಂಚಾಯತಿ ಚುನಾವಣೆಗೆ ಸಹಾಯ ಮಾಡಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಲಾಗಿತ್ತು.  ಕುಮಾರ ನಾಯ್ಕ್ ಹಾಗೂ ಇತರರು ಸೇರಿ ದಿನಾಂಕಃ 05-05-2017  ರಂದು ಹೊಳೆಬೆನವಳ್ಳಿ ಗ್ರಾಮದ ಚಾನೆಲ್ ನ ಹತ್ತಿರ ಮಹೇಶ್ ನಾಯ್ಕ ರವರನ್ನು ಅಡ್ಡಗಟ್ಟಿ ಅವರ ಕುತ್ತಿಗೆ ಮತ್ತು ಮೈ ಕೈಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಈ ಸಂಬಂಧ  ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಾಗಿತ್ತು. ಈ ಸಂಬಂಧ  ಲೋಕೇಶ್ ಸಿಪಿಐ ಶಿವಮೊಗ್ಗ ಗ್ರಾಮಾಂತರ ವೃತ್ತ ಚಾರ್ಜ್‌ ಶೀಟ್‌ ಸಲ್ಲಿಸಿದ್ದರು. 

ಕೇಸ್‌ಸಂಬಂಧ ಸರ್ಕಾರದ ಪರವಾಗಿ ಪುಷ್ಪಾವತಿ, ಸರ್ಕಾರಿ ಅಭಿಯೋಜಕರು, ಪ್ರಕರಣದ ವಾದ ಮಂಡಿಸಿದ್ದು, ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಇದೀಗ ವಿಚಾರಣೆ ಮುಗಿದು ತೀರ್ಪು ಹೊರಬಿದ್ದಿದ್ದು ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ,  ನ್ಯಾಯಾಧಿಶರಾದ ಪಲ್ಲವಿ ಬಿ. ಆರ್ ರವರು ಆರೋಪಿ ಕುಮಾರ ನಾಯ್ಕ, 43  ವರ್ಷ, ಹೊಳೆಬೆನವಳ್ಳಿ ದೊಡ್ಡ ತಾಂಡಾ, ಶಿವಮೊಗ್ಗ ಈತನಿಗೆ ಜೀವಾವಧಿ ಶಿಕ್ಷೆ ಮತ್ತು ರೂ 23,500/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 3 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.

A Shivamogga court has sentenced a man to life imprisonment for a murder that took place during the panchayat elections.  Shivamogga Rural Circle,   Judge Pallavi B.R.