ಶಿವಮೊಗ್ಗಕ್ಕೆ ಬಿ.ಎಸ್​. ಯಡಿಯೂರಪ್ಪ ದಿಢೀರ್​ ಭೇಟಿ! ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹೇಳಿದ್ದೇನು?

B.S.Yediyurappa's sudden visit to shimoga What was said at Shivamogga airport?

ಶಿವಮೊಗ್ಗಕ್ಕೆ ಬಿ.ಎಸ್​. ಯಡಿಯೂರಪ್ಪ ದಿಢೀರ್​ ಭೇಟಿ! ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹೇಳಿದ್ದೇನು?
B.S.Yediyurappa's sudden visit to shimoga What was said at Shivamogga airport?

SHIVAMOGGA  |  Jan 27, 2024  |  ರಾಜ್ಯಪ್ರವಾಸದಲ್ಲಿದ್ದ  ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಇವತ್ತು ದಿಢೀರ್​ ಆಗಿ  ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾರೆ. ಅವರ ಈ ಭೇಟಿ ಕುತೂಹಲ ಮೂಡಿತ್ತಾದರೂ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

ಬಿ.ಎಸ್​.ಯಡಿಯೂರಪ್ಪ

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ನೇಹಿತರಾದ MLC ರುದ್ರೇಗೌಡ ಅವರ ವಿಶೇಷ ಅಭಿನಂದನಾ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು. ನಾಳೆ ಮೈಸೂರಿಗೆ ವಾಪಸ್ ಹೋಗ್ತೇನೆ , ಎಲ್ಲಾ ಕಡೆ ಬಿಜೆಪಿ ಪರ ವಾತಾವರಣ ಇದೆ. ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರದಲ್ಲಿ ಬಿಜೆಪಿ ಗೆದ್ದು ಪ್ರಧಾನಿಗೆ ರಾಜ್ಯದಿಂದ ಕೊಡುಗೆ ಕೊಡಬೇಕೆಂಬ ಆಸೆ ಇದೆ ಅದಕ್ಕಾಗಿ ಸಾವಿರಾರು ಕಾರ್ಯಕರ್ತರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ ಎಂದಿದ್ದಾರೆ. 

 

ಲಕ್ಷ್ಮಣ್​ ಸವದಿ ಬಿಜೆಪಿಗೆ ಬರುತ್ತಾರಾ?

ಇನ್ನೂ ಜಗದೀಶ್​  ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ  ಲಕ್ಷ್ಮಣ ಸವದಿ ಜೊತೆ ಇನ್ನು ಮಾತಾನಾಡಿಲ್ಲ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಂಡು ಮಾತಾನಾಡುತ್ತೇನೆ ಎಂದರು. ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರ

ಶಾಮನೂರು ಶಿವಶಂಕರಪ್ಪನವರು ಅಭಿಮಾನದಿಂದ‌ ಮಾತಾನಾಡಿದ್ದಾರೆ ಎಂದ ಯಡಿಯೂರಪ್ಪರವರು ಸಂಸದ ರಾಘವೇಂದ್ರ ಮಾಡಿರುವ ಒಳ್ಳೆಯ ಕೆಲಸ ನೋಡಿ ಮನವರಿಕೆಯಾಗಿರಬೇಕು. ಒಳ್ಳೆಯ ಅಭಿಪ್ರಾಯ ಕೊಟ್ಟಿರುವುದು ಸ್ವಾಗತಾರ್ಹ. ಕಾಂಗ್ರೆಸ್ ನಾಯಕರಾಗಿ ಈ ರೀತಿ ಹೇಳಿಕೆ ಸ್ವಾಗತಾರ್ಹ ಎಂದರು. 

ಮಂಡ್ಯ ಟಿಕೆಟ್ ವಿಚಾರ

ಈ ಬಗ್ಗೆ ಇದುವರೆಗೂ ಯಾವುದೇ ಚರ್ಚೆ ಆಗಿಲ್ಲ ಮಂಡ್ಯ ಟಿಕೆಟ್ ಯಾರಿಗೆ ನೀಡಬೇಕು ಎಂಬುದನ್ನ ಕೂಲಂಕುಶವಾಗಿ ಚರ್ಚಿಸಿದ ನಂತರ ಅಂತಿಮ ತೀರ್ಮಾನ ಹೊರಬೀಳಲಿದೆ ಎಂದಿದ್ದಾರೆ.