ಶಿವಮೊಗ್ಗ ವಿಮಾನ ನಿಲ್ದಾಣ ದಲ್ಲಿ ಲ್ಯಾಂಡಿಂಗ್ ಪ್ರಾಬ್ಲಮ್​ ಬಗ್ಗೆ ದೆಹಲಿಯಲ್ಲಿ ಪರಿಹಾರ ಹುಡುಕಿದ ಸಂಸದ ಬಿ.ವೈ.ರಾಘವೇಂದ್ರ !

Mp BY Raghavendra speaks to Union Minister in Delhi on landing problem at Shivamogga airport

ಶಿವಮೊಗ್ಗ ವಿಮಾನ ನಿಲ್ದಾಣ ದಲ್ಲಿ ಲ್ಯಾಂಡಿಂಗ್ ಪ್ರಾಬ್ಲಮ್​ ಬಗ್ಗೆ ದೆಹಲಿಯಲ್ಲಿ  ಪರಿಹಾರ ಹುಡುಕಿದ ಸಂಸದ ಬಿ.ವೈ.ರಾಘವೇಂದ್ರ !

SHIVAMOGGA|  Dec 15, 2023  | ಕೇಂದ್ರ ರೈಲ್ವೆ ಸಚಿವರನ್ನ ಭೇಟಿ ಮಾಡಿ ಶಿವಮೊಗ್ಗದ ವಿವಿಧ ರೈಲ್ವೇ ಕಾಮಗಾರಿಗಳಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಮನವಿ ಮಾಡಿದ್ದ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ  (by raghavendra)  ಇದೀಗ ಶಿವಮೊಗ್ಗ ವಿಮಾನ ನಿಲ್ದಾಣ ವಿಚಾರವಾಗಿ  ನವದೆಹಲಿ ಯಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ  ಅವರನ್ನು ಭೇಟಿಯಾಗಿದ್ದಾರೆ. 

ಸಂಸದ ಬಿ.ವೈ.ರಾಘವೇಂದ್ರ 

ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ರಾತ್ರಿ ವೇಳೆಯೂ ವಿಮಾನ ಕಾರ್ಯಾಚರಣೆ ನಡೆಸಲು ಅಗತ್ಯವಿರುವ ತಾಂತ್ರಿಕ ಉಪ ಕರಣಗಳನ್ನು ಒದಗಿಸುವುದೂ ಸೇರಿ ವಿವಿಧ ಸೌಲಭ್ಯಗಳ ಅಳವಡಿಸುವಂತೆ ಮನವಿ ಮಾಡಿದರು. 

READ : ಭದ್ರಾವತಿಯಲ್ಲಿ ಪತಿಯಿಂದಲೇ ಪತ್ನಿ ಹತ್ಯೆ ! ಪೇಪರ್ ಟೌನ್​ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್

ಪ್ರಸ್ತುತ ಶಿವಮೊಗ್ಗದಿಂದ ನಾಲ್ಕು ಮಾರ್ಗಗಳಲ್ಲಿ ಎರಡು ವೈಮಾನಿಕ ಸಂಸ್ಥೆಗಳ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಆದರೆ ಹವಾಮಾನ ವೈಪರೀತ್ಯ ಉಂಟಾದ ಸಂದರ್ಭದಲ್ಲಿ ವಿಮಾನ ಲ್ಯಾಂಡ್ ಮಾಡುವುದು ಹಾಗೂ ಟೇಕಾಫ್ ಮಾಡುವುದು ಕಷ್ಟವಾಗುತ್ತಿದೆ. 

ಶಿವಮೊಗ್ಗ ವಿಮಾನ ನಿಲ್ದಾಣ

READ :ಸರ್ಕಲ್​ಗಳ ಬಳಿ NO Parking | ಶಿವಮೊಗ್ಗ ಟ್ರಾಫಿಕ್​ಗೆ ಜಿಲ್ಲಾಡಳಿತದ ಮೇಜರ್ ಸರ್ಜರಿ! ಎಲ್ಲೆಲ್ಲಿ ಏನೇನು ಬದಲಾವಣೆ ? ಇಲ್ಲಿದೆ ವಿವರ

ಇದೇ ಕಾರಣಕ್ಕೆ ವಿಮಾನ ಸಂಚಾರದಲ್ಲಿ ಮೂರಾಲ್ಕು ಬಾರಿ ವ್ಯತ್ಯಯವಾಗಿದೆ. ಒಂದೆರಡು ಬಾರಿ ವಿಮಾನ ಸಂಚಾರ ರದ್ದಾದ ನಿದರ್ಶನವೂ ಇದೆ ಎಂದು ಸಚಿವರ ಗಮನಸೆಳೆದ ರಾಘವೇಂದ್ರವರು. ಈ ಸಂಬಂಧ ಅಗತ್ಯ ತಾಂತ್ರಿಕ ಉಪಕರಣಗಳನ್ನು ರನ್‌ವೇಯಲ್ಲಿ ಅಳವಡಿಸಿದಲ್ಲಿ ಹವಾಮಾನ ವೈಪರೀತ್ಯದ ಸಂದರ್ಭದಲ್ಲೂ ಲ್ಯಾಂಡಿಂಗ್ ಹಾಗೂ ಟೇಕಾಫ್‌ಗೆ ಸಮಸ್ಯೆಯಾಗುವುದಿಲ್ಲ ಎಂದು ವಿವರಿಸಿದ್ದಾರೆ. ಅಲ್ಲದೆ ಉಪಕರಣಗಳನ್ನು ಒದಗಿಸಿ, ವಿಮಾನಗಳ ಸಂಚಾರಕ್ಕೆ ತೊಂದರೆ ಆಗುತ್ತಿರುವುದನ್ನ ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.