ಸರ್ಕಲ್​ಗಳ ಬಳಿ NO Parking | ಶಿವಮೊಗ್ಗ ಟ್ರಾಫಿಕ್​ಗೆ ಜಿಲ್ಲಾಡಳಿತದ ಮೇಜರ್ ಸರ್ಜರಿ! ಎಲ್ಲೆಲ್ಲಿ ಏನೇನು ಬದಲಾವಣೆ ? ಇಲ್ಲಿದೆ ವಿವರ

NO Parking near Circles | District administration's major surgery for Shivamogga traffic What changes everywhere? Here's the details

ಸರ್ಕಲ್​ಗಳ ಬಳಿ  NO Parking  | ಶಿವಮೊಗ್ಗ ಟ್ರಾಫಿಕ್​ಗೆ ಜಿಲ್ಲಾಡಳಿತದ ಮೇಜರ್ ಸರ್ಜರಿ! ಎಲ್ಲೆಲ್ಲಿ ಏನೇನು ಬದಲಾವಣೆ ? ಇಲ್ಲಿದೆ ವಿವರ

SHIVAMOGGA|  Dec 15, 2023  | ಶಿವಮೊಗ್ಗ ಜಿಲ್ಲಾಡಳಿತ ಶಿವಮೊಗ್ಗ ಸಿಟಿಯಲ್ಲಿ ಮತ್ತೆ ಪಾರ್ಕಿಂಗ್ ಹಾಗೂ ನೋ ಪಾರ್ಕಿಂಗ್​ ಸಂಬಂಧ ಆದೇಶವೊಂದನ್ನ ಹೊರಡಿಸಿದೆ. ಅದರಲ್ಲಿಯು ಮುಖ್ಯವಾಗಿ ವಿವಿಧ ಸರ್ಕಲ್​ಗಳ ಸುತ್ತಮುತ್ತ ಐವತ್ತು ಮೀಟರ್ ವ್ಯಾಪ್ತಿಯಲ್ಲಿ ನೋಪಾರ್ಕಿಂಗ್ ಆದೇಶವನ್ನ ಹೊರಡಿಸಲಾಗಿದೆ. ಜಿಲ್ಲಾಡಳಿತದ ಆದೇಶದಲ್ಲಿ ಏನಿದೆ ಎಂಬುದರ ವಿವರ ಇಲ್ಲಿದೆ 

ವಾಹನ ನಿಲುಗಡೆ ನಿಷೇಧ

ಶಿವಮೊಗ್ಗ ನಗರದ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸವಳಂಗ ರಸ್ತೆಯಲ್ಲಿ ಕರ್ನಾಟಕ ಸಂಘ ಸಿಗ್ನಲ್‍ನಿಂದ ಉಷಾ ನರ್ಸಿಂಗ್ ಹೋಂವರೆಗೆ ಸುಗಮ ಸಂಚಾರ ದೃಷ್ಠಿಯಿಂದ ದ್ವಿಚಕ್ರ ಮತ್ತು ಕಾರ್‍ಗಳ ಪಾರ್ಕಿಂಗ್‍ಗೆ ಕೆಳಕಂಡಂತೆ  ಕ್ರಮ ಕೈಗೊಂಡು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ರವರು ಅಧಿಸೂಚನೆ ಹೊರಡಿಸಿದ್ದಾರೆ. 

ವಾಹನಗಳ ನಿಲುಗಡೆ ನಿಷೇಧಿತ ಸ್ಥಳ (No parking )

ಬಸವೇಶ್ವರ (ಡಿವಿಎಸ್) ಸರ್ಕಲ್‍ನ ಸುತ್ತ 50 ಮೀ, ಮಹಾವೀರ ಸರ್ಕಲ್‍ನ ಸುತ್ತ 50 ಮೀ., ಶಿವಮೂರ್ತಿ ಸರ್ಕಲ್ ಸುತ್ತ 50 ಮೀ, ಅಕ್ಕಮಹಾದೇವಿ (ಉಷಾ ನರ್ಸಿಂಗ್ ಹೋಂ) ಸರ್ಕಲ್ ಸುತ್ತ 50 ಮೀ ಹಾಗೂ ಕಮಲಾ ನರ್ಸಿಂಗ್ ಹೋಂನಿಂದ ಗಾಂಧಿನಗರ ಕ್ರಾಸ್‍ವರೆಗೆ ಎಲ್ಲಾ ವಾಹನಗಳ ನಿಲುಗಡೆ ನಿಷೇದಿಸಲಾಗಿದೆ. 

ದ್ವಿ-ಚಕ್ರ ವಾಹನಗಳ ನಿಲುಗಡೆ ಸ್ಥಳ (Parking):

ಮೋರ್ ಸೂಪರ್ ಮಾರ್ಕೇಟ್‍ನಿಂದ ಶಿವಮೊಗ್ಗ ಡ್ರಗ್ ಹೌಸ್‍ವರೆಗೆ ಎಡಬದಿ, ಪದ್ಮ ಜ್ಯೂವೆಲ್ಲರಿ ಯಿಂದ ಸುಶೋಧ ಆಸ್ಪತ್ರೆವರೆಗೆ ಎಡಬದಿ ಮತ್ತು ವಿಜಯ ಕಾಂಪ್ಲೇಕ್ಸ್ ನಿಂದ ಬೀಬಾ ಶಾಪ್‍ವರೆಗೆ ಬಲಬದಿ ದ್ವಿ-ಚಕ್ರ ವಾಹನಗಳ ನಿಲುಗಡೆ ಮಾಡಬಹುದಾಗಿದೆ.

ನಾಲ್ಕು ಚಕ್ರ ವಾಹನಗಳ ನಿಲುಗಡೆ ಸ್ಥಳ (Parking):  ಚನ್ನಪ್ಪ ಲೇಔಟ್ 2ನೇ ಕ್ರಾಸ್ ಯಿಂದ ಕಮಲಾ ನರ್ಸಿಂಗ್ ಹೋಂವರೆಗೆ ಎಡಬದಿ, ವೆಸ್ಟ್​ಸೈಡ್​​ ಕಾಂಪ್ಲೇಕ್ಸ್ (ಜಯನಗರ 2ನೇ ಪ್ಯಾರಲಲ್ ರಸ್ತೆ) ನಿಂದ ಫೈರ್ ಫಾಕ್ಸ್ ಸೈಕಲೋತ್ಸವವರೆಗೆ ಬಲಬದಿ ಕಾರ್‍ಗಳನ್ನು ನಿಲುಗಡೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿರುತ್ತಾರೆ.

ಇದರ ಜೊತೆಯಲ್ಲಿ  ಶಿವಮೊಗ್ಗ ನಗರ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎಎ ಸರ್ಕಲ್ ನಿಂದ ಶಿವಪ್ಪನಾಯಕ ಸರ್ಕಲ್ ವರೆಗಿನ ರಸ್ತೆಯಲ್ಲಿನ ಪಾರ್ಕಿಂಗ್​ ಸಮಸ್ಯೆಗೂ ಜಿಲ್ಲಾಡಳಿತ ಆದೇಶ ಹೊರಡಿಸಿದೆ. 

ವೆಂಕಟೇಶ್ವರ ಸ್ವೀಟ್ ಹೌಸ್

ಶಿವಮೊಗ್ಗ ನಗರ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎ.ಎ. ಸರ್ಕಲ್ ನ ವೆಂಕಟೇಶ್ವರ ಸ್ವೀಟ್ ಹೌಸ್ ನಿಂದ ಜ್ವರಾರಿ ಮೆಡಿಕಲ್ ಶಾಪ್ ವರೆಗೆ ರಸ್ತೆಯ ಎಡಭಾಗದಲ್ಲಿ ಎಲ್ಲಾ ವಿಧದ ವಾಹನಗಳ ನಿಲುಗಡೆ ನಿಷೇಧ ಮಾಡಿ ಆದೇಶಿಸಿದೆ.ಈ ಅಧಿಸೂಚನೆಯನ್ನು ದಿನಾಂಕ: 12.12.2023 ರಂದು ಹೊರಡಿಸಲಾಗಿದೆ.