ಸಚಿವರ ಶಾಕ್/ 48 ಗಂಟೆಯಲ್ಲಿ ಬದಲಾಯ್ತು ಶಿವಮೊಗ್ಗ AIRPORT ನಲ್ಲಿದ್ದ ಈ ವ್ಯವಸ್ಥೆ!

As per the instructions given by Minister MB Patil, priority has been given to Kannada on the sign board of Shimoga Kuvempu Airport.ಸಚಿವ ಎಂಬಿ ಪಾಟೀಲ್​ರವರು ನೀಡಿದ ಸೂಚನೆಯಂತೆ ಶಿವಮೊಗ್ಗ ಕುವೆಂಪು ವಿಮಾನ ನಿಲ್ದಾಣದ ಸೈನ್​ ಬೋರ್ಡ್​ನಲ್ಲಿ ಕನ್ನಡಕ್ಕೆ ಆದ್ಯತೆ ನೀಡಲಾಗಿದೆ

ಸಚಿವರ ಶಾಕ್/  48 ಗಂಟೆಯಲ್ಲಿ ಬದಲಾಯ್ತು ಶಿವಮೊಗ್ಗ AIRPORT  ನಲ್ಲಿದ್ದ ಈ ವ್ಯವಸ್ಥೆ!

KARNATAKA NEWS/ ONLINE / Malenadu today/ Sep 3, 2023 SHIVAMOGGA NEWS

ಶಿವಮೊಗ್ಗದ ಸೋಗಾನೆಯಲ್ಲಿರುವ ಕುವೆಂಪು ವಿಮಾನ ನಿಲ್ದಾಣ (Kuvempu Airport) ದಲ್ಲಿ ವಾಣಿಜ್ಯವಿಮಾನಯಾನ ಆರಂಭವಾದ ದಿನ ಅಲ್ಲಿಯ ಸೈನ್​ ಬೋರ್ಡ್​ಗಳ ಬಗ್ಗೆ ಆಕ್ಷೇಪಣೆ ಕೇಳಿಬಂದಿತ್ತು. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕನ್ನಡ ಭಾಷೆಯನ್ನು ಕಡೆಗಣನೆ ಮಾಡಲಾಗಿದೆ ಹಿಂದಿ ಭಾಷೆಗೆ ಒತ್ತುಕೊಡಲಾಗಿದೆ. ರಾಜ್ಯಸರ್ಕಾರ ನಿರ್ವಹಿಸುವ ಏರ್​ಪೋರ್ಟ್​ನಲ್ಲಿ ಕನ್ನಡಕ್ಕೆ ಆದ್ಯತೆ ಕೊಡದಿದ್ದರೇ ಹೇಗೆ ಎಂಬ ಪ್ರಶ್ನೆ ಕೇಳಿಬಂದಿತ್ತು. 

ಈ ಸಂಬಂಧ ಸೋಶಿಯಲ್​ ಮೀಡಿಯಾದಲ್ಲಿ ಅಭಿಯಾನ ಆರಂಭವಾಗಿತ್ತಲ್ಲದೇ ಸಚಿವ ಎಂಬಿ ಪಾಟೀಲ್​ (MB Patil) ರನ್ನ ಟ್ಯಾಗ್​ ಮಾಡಿ ವಿಚಾರದ ಗಮನ ಸೆಳೆದಿದ್ದರು. ಅಲ್ಲದೆ ಇದೇ ವಿಚಾರವಾಗಿ ಏರ್​ಪೋರ್ಟ್​ ಟರ್ಮಿನಲ್ ಎದುರು ಪ್ರತಿಭಟನೆ ಕೂಡ ನಡೆದಿತ್ತು. ಇನ್ನೂ ಸೋಶಿಯಲ್ ಮೀಡಿಯಾದ ಅಭಿಯಾನದಲ್ಲಿ ಪ್ರಕಟವಾಗಿದ್ದ ಪೋಸ್ಟ್​ವೊಂದಕ್ಕೆ ಉತ್ತರಿಸಿದ್ದ ಸಚಿವರು, ಇದು ನನ್ನ ಗಮನಕ್ಕೆ ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡುವೆ ಎಂದಿದ್ದರು

ಸಚಿವರ ಪ್ರತಿಕ್ರಿಯೆ  ಬೆನ್ನಲ್ಲೆ ಇದೀಗ ಏರ್​ಪೋರ್ಟ್​ ಸೈನ್​ ಬೋರ್ಡ್​ನಲ್ಲಿ ಕನ್ನಡ ಕಾಣಿಸಿಕೊಂಡಿದೆ. ಈ ಬಗ್ಗೆ ತಮ್ಮ ಅಧಿಕೃತ ಟ್ವಿಟ್ಟರ್​ ಖಾತೆ @MBPatil ನಲ್ಲಿ ಪೋಸ್ಟ್ ಹಾಕಿರುವ ಸಚಿವ ಎಂ.ಬಿ.ಪಾಟೀಲ್​ ರವರು, ಕನ್ನಡವೇ ಸತ್ಯ-ಕನ್ನಡವೇ ನಿತ್ಯ! ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿನ ಮಾಹಿತಿ ಫಲಕ. ನೆಲ-ಜಲ-ಭಾಷೆಯ ವಿಷಯದಲ್ಲಿ ನಮ್ಮದು ಒಗ್ಗಟ್ಟಿನ ಧ್ವನಿ ಎಂದು ಟ್ವೀಟ್ ಮಾಡಿದ್ದಾರೆ. 


ಇನ್ನಷ್ಟು ಸುದ್ದಿಗಳು