ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೊದಲ ಇಂಡಿಗೋ ಪ್ಲೈಟ್

KARNATAKA NEWS/ ONLINE / Malenadu today/ Aug 31, 2023 SHIVAMOGGA NEWS

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮೊದಲ ಪ್ರಯಾಣಿಕ ವಿಮಾನ ಟೇಕ್ ಆಫ್ ಆಗಿ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಮಾಜಿಸಿಎಂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಎಂ.ಬಿ.ಪಾಟೀಲ್, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಆರಗ ಜ್ಞಾನೇಂದ್ರ  ಮತ್ತು, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾಜಿ ಶಾಸಕ ಹರತಾಳು ಹಾಲಪ್ಪ ಸೇರಿದಂತೆ  ಶಿವಮೊಗ್ಗದ ಹಲವು ಮುಖಂಡರು ಪಕ್ಷಾತೀತವಾಗಿ ಒಂದೇ ಪ್ಲೈಟ್​ನಲ್ಲಿ ಸಂಭ್ರಮಿಸುತ್ತಾ ಶಿವಮೊಗ್ಗಕ್ಕೆ ಆಗಿಸಿದ್ದಾರೆ. ಶಿವಮೊಗ್ಗ : ಸೋಗಾನೆ ವಿಮಾನ ನಿಲ್ದಾಣ ಮುಂದೆ ವಿಮಾನ ಆಗಮನದ ಹಿನ್ನೆಲೆ ನೂರಾರು ಜನರು ಜಮಾಯಿಸಿದ್ದರು, ಈ ಹಿನ್ನೆಲೆ ಬಿಗಿ  ಬಂದೋಬಸ್ತ್ ಕೂಡ ಮಾಡಲಾಗಿತ್ತು. 

ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸೇರಿದಂತೆ ಮಲೆನಾಡು ಭಾಗದ ಜನಪ್ರತಿನಿಧಿಗಳು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗಕ್ಕೆ ಬೆಳಿಗ್ಗೆ 9.50ಕ್ಕೆ ಉದ್ಘಾಟನಾ ವಿಮಾನದಲ್ಲಿ ಹೊರಟಿದ್ದರು, ಗಣ್ಯರನ್ನೊಳಗೊಂಡ ಇಂಡಿಗೋ ಏರ್ಲೈನ್ಸ್ ಬೆಳಿಗ್ಗೆ 11:00 ಕ್ಕೆ  ಶಿವಮೊಗ್ಗದಲ್ಲಿ ಲ್ಯಾಂಡ್ ಆಯ್ತು, ಲ್ಯಾಂಡ್ ಆದ ವಿಮಾನಕ್ಕೆ ವಾಟರ್ ಸೆಲ್ಯೂಟ್ ಸಹ ನೀಡಲಾಯ್ತು. 

ಇನ್ನೂ ವಿಮಾನದಲ್ಲಿ ಶಿವಮೊಗ್ಗಕ್ಕೆ ಬಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ವಿಮಾನ ನಿಲ್ದಾಣದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ್ದಾರೆ.  ಶಿವಮೊಗ್ಗ ಏರ್​​ಪೋರ್ಟ್​​​ ನಿರ್ಮಾಣಕ್ಕೆ ಕಾರಣರಾದವರು ಆ ಭಾಗದ ರೈತರು, ಅವರ ಭೂಮಿಗಳನ್ಕೃನು ನೀಡಿ ಯಾವುದೇ ತಕರಾರಿಲ್ಷಿಲದೇ ವಿಮಾನನಿಲ್ದಾಣ ಆರಂಭವಾಗಲು ಸಹಕಾರ ನೀಡಿದ್ಧಾರೆ. ಹಾಗಾಗಿ ಎಲ್ಲಾ ಗೌರವ ಆ ಭಾಗದ ರೈತರಿಗೆ ಸೇರಬೇಕು ಎಂದಿದ್ಧಾರೆ. ಬೆಂಗಳೂರು ‌ನಂತರ ದೊಡ್ಡ ವಿಮಾನ ನಿಲ್ಥಾಣ ಶಿವಮೊಗ್ಗದಲ್ಲಿ ಆಗಿದೆ. ಸಹಕಾರ ಕೊಟ್ಟ ರೈತರಿಗೆ (Farmers) ಧನ್ಯವಾದ ತಿಳಿಸುತ್ತೇನೆ, ಅಲ್ಲದೆ  ಮೊದಲ ವಿಮಾನದಲ್ಲಿ ಕೆಲವು ರೈತರನ್ನು ಸಹ ಕರೆದುಕೊಂಡು ಹೋಗುತ್ತಿರುವುದಾಗಿ ಬಿಎಸ್​ವೈ ತಿಳಿಸಿದ್ದಾರೆ. 

ಇನ್ನಷ್ಟು ಸುದ್ದಿಗಳು 


 

 

Leave a Comment