KARNATAKA NEWS/ ONLINE / Malenadu today/ Aug 30, 2023 SHIVAMOGGA NEWS
ಶಿವಮೊಗ್ಗ ನಗರದ ಸಿಇಎನ್ ಪೊಲೀಸ್ ಸ್ಟೇಷನ್ (CEN Police Station)ನಲ್ಲಿ ಮತ್ತೊಂದು ಆನ್ ಲೈನ್ ದೋಖಾ ಪ್ರಕರಣ ದಾಖಲಾಗಿದೆ.
ಮೊಬೈಲ್ಗೆ ಬರುವ ಮೆಸೇಜ್ಗಳೆಲ್ಲಾ ನಿಜವಾದುದಲ್ಲ ಎಂದು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಆದಾಗ್ಯು ಹಣದ ಆಸೆಗೆ ಮೋಸಹೋಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಪೂರಕ ಎಂಬಂತೆ ಶಿವಮೊಗ್ಗ ನಗರದಲ್ಲಿ ವಾಟ್ಸ್ಯಾಪ್ ಮೆಸೇಜ್ ನಂಬಿ ಎರಡು ಮುಕ್ಕಾಲು ಲಕ್ಷ ರೂಪಾಯಿಯನ್ನು ಮಹಿಳೆಯೊಬ್ಬರು ಕಳೆದುಕೊಂಡಿದ್ದಾರೆ.
ಇಲ್ಲಿನ ನಿವಾಸಿ ಯುವತಿಯೊಬ್ಬರು ಆನ್ಲೈನ್ ಜಾಬ್ಗಾಗಿ ಹುಡುಕಾಡುತ್ತಿದ್ದರು. ಈ ವೇಳೆ ಅವರ ಮೊ ಬೈಲ್ಗೆ ಒಂದು ಮೆಸೇಜ್ ಬಂದಿದೆ. ಅದರಲ್ಲಿ ಆನ್ ಲೈನ್ ಜಾಬ್ ನೀಡುವುದಾಗಿ ಎಂಬ ಮಾಹಿತಿ ಇದ್ದು, ಯುಟ್ಯೂಬ್ ನಲ್ಲಿ ನಮ್ಮ ವಿಡಿಯೋಗಳನ್ನು ಲೈಕ್ ಶೇರ್ ಮಾಡಿದರೆ ನಿಮಗೆ ಕಮಿಷನ್ ನೀಡುವುದಾಗಿ ಬರೆಯಲಾಗಿತ್ತು. ಇದನ್ನ ಪರೀಕ್ಷೆಗೆ ಅಂತಾ ಯುವತಿ ಟೆಸ್ಟ್ ಮಾಡಿದ್ದಾರೆ . ಈ ವೇಳೆ ಯುವತಿ ಅಕೌಂಟ್ಗೆ 150/-ರೂಪಾಯಿ ಬಂದಿದೆ. ಹೀಗಾಗಿ ಆ ಮೆಸೇಜ್ನ್ನ ಯುವತಿ ನಂಬಿದ್ದಾರೆ. ತಕ್ಷಣವೇ, ಟೆಲಿಗ್ರಾಂ ಅಕೌಂಟ್ನಲ್ಲಿ ಲಿಂಕ್ ಕಳಿಸಿರುವ ಬಗ್ಗೆ ಮಾಹಿತಿ ನೀಡಿದ ಆನ್ಲೈನ್ ವಂಚಕರು, ಅದರಲ್ಲಿ ಹಲವು ಪ್ರೀಪೈಡ್ ಟಾಸ್ಕ್ ಕೊಟ್ಟು ಒಟ್ಟು 2,79,070/-ರೂಪಾಯಿಯನ್ನು ತಮ್ಮ ಅಕೌಂಟ್ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಬಳಿಕ ಅನುಮಾನ ಗೊಂಡ ಯುವತಿ ಸಿಇಎನ್ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಿಸಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ.
ಇನ್ನಷ್ಟು ಸುದ್ದಿಗಳು
ಪ್ರೀತಿ ಪೆಟ್ಟು ಹುಷಾರು! ಪ್ರೇಮಿಸಿದ ಯುವಕನನ್ನ ಕೂಡಿ ಹಾಕಿ ಹೊಡೆದ ಹುಡುಗಿ ಕಡೆಯವರು! ದಾಖಲಾಯ್ತು ಎಫ್ಐಆರ್!
ಮನೆ ಹಿತ್ತಲಲ್ಲಿದ್ದ ಬಾವಿಗೆ ಬಿದ್ದ ಮಹಿಳೆ! ಬಚಾವ್ ಆಗಿದ್ದೇ ಹೆಚ್ಚು! ನಡೆದಿದ್ದೇನು?
