ಮನೆ ಹಿತ್ತಲಲ್ಲಿದ್ದ ಬಾವಿಗೆ ಬಿದ್ದ ಮಹಿಳೆ! ಬಚಾವ್ ಆಗಿದ್ದೇ ಹೆಚ್ಚು! ನಡೆದಿದ್ದೇನು?

A woman fell into a well at Mavinakoppa in Hosanagara taluk ...ಹೊಸನಗರ ತಾಲ್ಲೂಕಿನ ಮಾವಿನಕೊಪ್ಪ ದಲ್ಲಿ ಮಹಿಳೆಯೊಬ್ಬರು ಬಾವಿಗೆ ಬಿದ್ದ ಘಟನೆ ಸಂಭವಿಸಿದೆ

ಮನೆ ಹಿತ್ತಲಲ್ಲಿದ್ದ ಬಾವಿಗೆ ಬಿದ್ದ ಮಹಿಳೆ! ಬಚಾವ್ ಆಗಿದ್ದೇ ಹೆಚ್ಚು! ನಡೆದಿದ್ದೇನು?

KARNATAKA NEWS/ ONLINE / Malenadu today/ Aug 26, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಹೊಸನಗರ  ತಾಲ್ಲೂಕು (Hosnagar taluk) ಮಾವಿನಕೊಪ್ಪದಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯ ಹಿತ್ತಲಿನಲ್ಲಿದ್ದ ಬಾವಿಗೆ ಹಾರಿದ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಮಹಿಳೆಯು ಯಾವುದೇ ಅಪಾಯವಿಲ್ಲದೇ ಬಚಾವ್ ಆಗಿದ್ದಾರೆ. 

ಏನಿದು ಘಟನೆ

ಮಾವಿನಕೊಪ್ಪದ ಯಶೋದಮ್ಮ ಎಂಬವರು ಬಾವಿಗೆ ಹಾರಿದ ಮಹಿಳೆ. ನಿನ್ನೆ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಮನೆಯಿಂದ ಹೊರಬಂದ ಯಶೋದಮ್ಮರವರು ಮನೆಯ ಹಿತ್ತಲಿನಲ್ಲಿರುವ ಬಾವಿಗೆ ಹಾರಿದ್ದಾರೆ.  ಆನಂತರ ಮನೆಯಲ್ಲಿದ್ದವರು ಯಶೋದಮ್ಮರಿಗಾಗಿ ಹುಡುಕಾಟ ನಡೆಸಿದ್ದಾರೆ. ಹಿತ್ತಲಿನಲ್ಲಿ ಹುಡುಕಾಡುವಾಗ ಬಾವಿಗೆ ಹಾಕಿದ್ದ ಗ್ರಿಲ್​ ಡೋರ್ ಓಪನ್​ ಇರುವುದು ಕಂಡು ಬಂದಿದೆ. ತಕ್ಷಣವೇ ಬಾವಿಯೊಳಗೆ ಮನೆಯ ಸೊಸೆಯೊಬ್ಬರು ಇಣುಕಿ ನೋಡಿದ್ದಾರೆ. ಈ ವೇಳೆ ಯಶೋದಮ್ಮರವರು ಬಾವಿಯೊಳಗೆ ಪೈಪ್​ ಹಿಡಿದು ನಿಂತಿರುವುದು ಕಾಣಿಸಿದೆ. 

ತಕ್ಷಣವೇ ಮನೆಯ ಸದಸ್ಯರು, ಅಕ್ಕಪಕ್ಕದವರನ್ನ ಕರೆದು, ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ಧಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಸಿಬ್ಬಂದಿ ಬಾವಿಯಿಂದ ಯಶೋದಮ್ಮರವರನ್ನು ಮೇಲಕ್ಕೆತ್ತಿ ರಕ್ಷಣೆ ಮಾಡಿದ್ಧಾರೆ.  

ಇನ್ನಷ್ಟು ಸುದ್ದಿಗಳು