ಮೊಟ್ಟೆ ನುಂಗಲು ಹೋಗಿ ಕೋಳಿಗೂಡಲ್ಲಿ ಬಂಧಿಯಾದ ನಾಗರ !

A cobra who went to swallow an egg and was trapped in a hen's nest!

ಮೊಟ್ಟೆ ನುಂಗಲು ಹೋಗಿ ಕೋಳಿಗೂಡಲ್ಲಿ ಬಂಧಿಯಾದ ನಾಗರ !

KARNATAKA NEWS/ ONLINE / Malenadu today/ May 4, 2023 GOOGLE NEWS


ರಿಪ್ಪನ್‌ಪೇಟೆ/ ಹೊಸನಗರ/ ಶಿವಮೊಗ್ಗ/ ಇಲ್ಲಿನ ವಡಾ ಹೊಸಳ್ಳಿ ಎಂಬಲ್ಲಿ ನಾಗರಹಾವೊಂದು ಮೊಟ್ಟೆ ನುಂಗಲು ಹೋಗಿ ಕೋಳಿ ಗೂಡಿನ್ಲಲಿ ಬಂದಿಯಾದ ಘಟನೆ ನಡೆದಿದೆ. 

ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಸುಶೀಲ ಎಂಬವರ ಮನೆಯ ಕೋಳಿಗೂಡಿನಲ್ಲಿ, ನಿನ್ನೆ ನಾಗರ ಹಾವೊಂದು ಕಾಣಿಸಿತ್ತು. ಇದನ್ನ ನೋಡಿ ಭಯ ಬಿದ್ದ ಮನೆಯವರು ಹಾವು ಹಿಡಿಯುವ ತಜ್ಞ ಗಂಗಾಧರ್​ರವರಿಗೆ ಫೋನಾಯಿಸಿದ್ದಾರೆ. 

ಅಸಲಿಗೆ ಕೋಳಿ ಮೊಟ್ಟೆಯನ್ನು ತಿನ್ನಲು ಬಂದಿದ್ದ ನಾಗರ, ಕೋಳಿಗೂಡಿನಿಂದ ಹೊರಕ್ಕೆ ಬರಲಾಗದೇ ಅಲ್ಲಿಯೇ ಹೆಡೆಯೆತ್ತಿಕೊಂಡು ಬುಸುಗುಡುತ್ತಿತ್ತು. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಗಂಗಾಧರ್ ಹಾವನ್ನ ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಡುಗಡೆ ಮಾಡಿದ್ದಾರೆ. 

ಕಾಂಗ್ರೆಸ್ ತಾಕತ್ತಿದ್ದರೆ ಬಜರಂಗದಳ ನಿಷೇಧಕ್ಕೆ ಕೈಹಾಕಲಿ 

ಬಜರಂಗದಳ ನಿಷೇಧವೆಂದರೆ ಜೇನುಗೂಡಿಗೆ ಕೈ ಹಾಕಿದಂತೆ  ಅಂತಾ ಬಜರಂಗದಳದ ಸಂಯೋಜಕ ರಾಜೇಶ್‌ಗೌಡ ಹೇಳಿದ್ಧಾರೆ. ನಿನ್ನೆ ಈ ಸಂಬಂಧ ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  ಕಾಂಗ್ರೆಸ್ ಪಕ್ಷ ರಾಷ್ಟ್ರೀಯವಾದಿ ಸಂಸ್ಥೆ ಬಜರಂಗದಳವನ್ನು ನಿಷೇಧಿಸಲು ಹೊರಟು ಜೇನುಗೂಡಿಗೆ ಕಾಂಗ್ರೆಸ್‌ ಕೈಹಾಕಿದೆ ಎಂದಿದ್ದಾರೆ. 

ದೇಶದ್ರೋಹಿ ಸಂಘಟನೆ ಜೊತೆಗೆ ಹೋಲಿಸಿದ್ದು, ಅತ್ಯಂತ ಖಂಡನೀಯ ಎಂದಿರುವ ಅವರು, ಬಜರಂಗದಳದ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಅಭಿಯಾನ ಕೈಗೊಳ್ಳಲಿದ್ದಾರೆ. ದೇಶದ  ಮತದಾರರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು

 ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸದಾ ಕಾಮಾಲೆ ಕಣ್ಣಿನಿಂದ ಬಜರಂಗದಳನ್ನು ಟೀಕಿಸುತ್ತಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಇವರು ಯಾವ ಮಟ್ಟಕ್ಕೂ ಇಳಿಯಲು ಸಿದ್ಧರಿದ್ದಾರೆ. ಕಾಂಗ್ರೆಸ್ ತಾಕತ್ತಿದ್ದರೆ ಬಜರಂಗದಳ ನಿಷೇಧಕ್ಕೆ ಕೈಹಾಕಲಿ ಎಂದರು.

ಕರೆಂಟ್ ಶಾಕ್​ ! 9 ವರ್ಷದ ಬಾಲಕ ದುರ್ಮರಣ 

ಭದ್ರಾವತಿ/ಶಿವಮೊಗ್ಗ/ ವಿದ್ಯುತ್​ ಸ್ಪರ್ಶದಿಂದ ಬಾಲಕನೊಬ್ಬ ಮೃತಪಟ್ಟ ಘಟನೆ ಶಿವಮೊಗ್ಗದ ಭದ್ರಾವತಿ ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಹೊಸಮನೆಯ ತ್ಯಾಗರಾಜ ಬಡಾವಣೆಯಲ್ಲಿ ಈ ಘಟನೆ ಸಂಭವಿಸಿದೆ. 

ಗೌತಮ್​ ಎಂಬ 9 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಈತನ ಅತ್ತೆ ಮನೆಗೆ ಬಂದಿದ್ದ. ಮನೆಯ ಸಮೀಪ ಆಟವಾಡುತ್ತಿದ್ದಾಗ, ಈತನಿಗೆ ವಿದ್ಯುತ್ ತಗುಲಿದೆ. ಈತನನ್ನ ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಯ್ತಾದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್​ ಪೊಲೀಸ್ ಸ್ಟೇಷನ್​ ಪೊಲೀಸರು ಕೇಸ್ ದಾಖಲಿಸಿದ್ದಾರೆ. 

Malenadutoday.com Social media