ಕರುಳ ಕುಡಿಗಳ ಕೈಗಳನ್ನು ಬಿಕ್ಷೆಗೆ ಒಡ್ಡಿದ ತಾಯಿ! ರಿಪ್ಪನ್​ಪೇಟೆಯಲ್ಲಿ ನಡೀತು ಮನಸ್ಸಿಗೆ ನೋವಾಗುವಂತಹ ಘಟನೆ

The incident took place in the area of Rippon Town Police Station, Hosnagar Taluk, Shimoga District ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ ಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದ ಘಟನೆ

ಕರುಳ ಕುಡಿಗಳ ಕೈಗಳನ್ನು ಬಿಕ್ಷೆಗೆ ಒಡ್ಡಿದ ತಾಯಿ! ರಿಪ್ಪನ್​ಪೇಟೆಯಲ್ಲಿ ನಡೀತು ಮನಸ್ಸಿಗೆ ನೋವಾಗುವಂತಹ ಘಟನೆ

KARNATAKA NEWS/ ONLINE / Malenadu today/ Nov 10, 2023 SHIVAMOGGA NEWS

Shivamogga  | ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಮನಸ್ಸಿಗೆ ನೋವಾಗುವಂತಹ ಘಟನೆಯೊಂದು ನಡೆದಿದೆ. ಆಡಬೇಕಾದ ವಯಸ್ಸಿನಲ್ಲಿ ಮಕ್ಕಳಿಬ್ಬರು ಬಿಕ್ಷೆ ಬೇಡುತ್ತಿದ್ದ ಘಟನೆ ಇದಾಗಿದ್ದು, ಅಲ್ಲಿನ ಸ್ಥಳೀಯರು ಇದನ್ನ ತಪ್ಪಿಸಿ ಪೊಲೀಸರಿಗೆ ಮಾಹಿತಿ ನೀಡಿದಾಗ ಬೇರೆಯದ್ದೆ ಸತ್ಯವೊಂದು ಹೊರಕ್ಕೆ ಬಂದಿದೆ. ಅದು ವಿಧಿಯ ಶಾಪ ಅಂದರೇ ಇದೇನಾ ಎನ್ನುವಂತಿದೆ. 

ಏನಿದು ಘಟನೆ 

ರಿಪ್ಪನ್​ ಪೇಟೆಯ ಬಳಿ ಶಿವಮೊಗ್ಗ ರಸ್ತೆಯಲ್ಲಿ ಇಬ್ಬರು ಪುಟಾಣಿಗಳು ಬಿಕ್ಷೆ ಬೇಡುತ್ತಿದ್ದವು. ಇದನ್ನ ಅಲ್ಲಿಯ ಹೋರಾಟಗಾರ ಕೃಷ್ಣಪ್ಪಣ್ಣ ನೋಡಿದ್ದಾರೆ. ಅವರು ಮಕ್ಕಳು ಬಿಕ್ಷೆ ಬೇಡುತ್ತಿರುವದನ್ನ ಗಮನಿಸಿದಾಗ ಅವರ ಮನಸ್ಸಿಗೇನೋ ಅನುಮಾನ ನಾಟಿದೆ. ತಕ್ಷಣ ತಮ್ಮ ಗಮನವನ್ನೆಲ್ಲಾ ಕೊಟ್ಟು ಮಕ್ಕಳನ್ನು ನೋಡುತ್ತಾ ನಿಂತಿದ್ದಾರೆ. ಈ ವೇಳೆ ಆ ಮಕ್ಕಳು ಬಿಕ್ಷೆ ಎತ್ತುವಂತ ಒಬ್ಬ ಮಹಿಳೆ ಹೇಳುತ್ತಿರುವುದು ಗಮನಿಸಿದ್ದಾರೆ. 

ತಕ್ಷಣ ರಿಪ್ಪನ್​ ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅಲ್ಲಿದ್ದವರನ್ನ ಪೊಲೀಸ್ ಸ್ಟೇಷನ್​ಗೆ ಕರೆದೊಯ್ದಿದ್ದಾರೆ. ಈ ವೇಳೆ ಅಲ್ಲಿ ಇನ್ನೊಂದಿಷ್ಟು ಸ್ಥಳೀಯರು ಸೇರಿದ್ದರು. ಆನಂತರ ಸ್ಟೇಷನ್​ ಅಧಿಕಾರಿ ಪಿಎಸ್​ಐ ಪ್ರವೀಣ್​ ಕುಮಾರ್​ ವಿಚಾರಣೆ ನಡೆಸಿದಾಗ ಆ ಮಕ್ಕಳ ತಾಯಿಯೇ, ತನ್ನ ಕುಡಿಗಳನ್ನ ಬಿಕ್ಷೆ ಬೇಡುವಂತೆ ಪ್ರೇರೇಪಿಸಿರುವುದು ಗೊತ್ತಾಯ್ತು. 

ಬಳಿಕ ಅವರ ಕಷ್ಟ ಸಂಕಷ್ಟಗಳನ್ನ ಆಲಿಸಿ ಇನ್ನೊಮ್ಮೆ ಹೀಗೆ ಮಾಡಬೇಡಿ, ಮಕ್ಕಳ ಕೈಯಿಂದ ಬಿಕ್ಷೆ ಬೇಡಿಸುವುದು ತಪ್ಪು ಎಂದು ಅರಿವು ಮೂಡಿಸಿದರು. ಅಲ್ಲದೆ ಮತ್ತೆ ಮಾಡಿದರೇ ಕಾನೂನ್​ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿ. ಪುಟಾಣಿಗಳನ್ನ ಶಾಲೆಗೆ ಕಳುಹಿಸುವಂತೆ ಸೂಚಿಸಿದ್ರು. ಅಂತಿಮವಾಗಿ ಆ ಕುಟುಂಬ ಅಲ್ಲಿಂದ ತೆರಳಿತು.