ಕೆಎಸ್‌ ಈಶ್ವರಪ್ಪನವರಿಗೆ ಸಿಕ್ತು ದಾನವಾಡಿ ಬೆಟ್ಟದ ಗಿರಿರಂಗನಾಥ ಸ್ವಾಮಿಯ ಪ್ರಸಾದ! ಹೂವಿನ ಪ್ರಸಾದ ಮಹಿಮೆಯಲ್ಲಿದೆ ಇಂಟರ್‌ಸ್ಟಿಂಗ್‌ ಸಂಗತಿ

Prasad of Giriranganath Swami of Danawadi hill for KS Eshwarappa ! An interesting fact lies in the glory of flower prasad

ಕೆಎಸ್‌ ಈಶ್ವರಪ್ಪನವರಿಗೆ ಸಿಕ್ತು ದಾನವಾಡಿ ಬೆಟ್ಟದ ಗಿರಿರಂಗನಾಥ ಸ್ವಾಮಿಯ ಪ್ರಸಾದ! ಹೂವಿನ ಪ್ರಸಾದ ಮಹಿಮೆಯಲ್ಲಿದೆ ಇಂಟರ್‌ಸ್ಟಿಂಗ್‌ ಸಂಗತಿ
Giriranganath Swami of Danawadi hill

Shivamogga Mar 31, 2024  ಶಿವಮೊಗ್ಗ ಲೋಕಸಭಾ ಚುನಾವಣೆ 2024 ಕ್ಕೆ ರಂಗು ಮೂಡಿಸ್ತಿರುವುದು ಕೆಎಸ್​ ಈಶ್ವರಪ್ಪನವರ ಚುನಾವಣೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಆಯನೂರು ಮಂಜುನಾಥ್​ ರವರ ಸ್ಪರ್ಧೆ ಕುತೂಹಲ ಮೂಡಿಸಿತ್ತು. ಇದೀಗ ಕೆಎಸ್​ ಈಶ್ವರಪ್ಪನವರ ಸ್ಪರ್ಧೆ ಲೋಕಸಭಾ ಚುನಾವಣೆಯಲ್ಲಿ  ಇಂಟರ್​ಸ್ಟ್ರಿಂಗ್​ ಆಗಿದೆ. ಆದಾಗ್ಯು ಅವರು ಚುನಾವಣೆಗೆ ನಿಜವಾಗಿಯು ನಿಲ್ಲುತ್ತಾರಾ ಎಂಬುದೇ ಅವರ ಕಡೆಯವರನ್ನ ಸೇರಿದಂತೆ ಹಲವರನ್ನ ಕಾಡುತ್ತಿದೆ. ಈ ಪ್ರಶ್ನೆಯ ಅರಿವು ಸ್ವತಃ ಈಶ್ವರಪ್ಪವರಿಗೂ ಎದುರಾಗಿದ್ದರಿಂದ ಮಾಜಿ ಡಿಸಿಎಂ ಪ್ರತಿಸರ್ತಿಯು ತಾವು ನೂರಕ್ಕೆ ನೂರು ಚುನಾವಣೆಗೆ ನಿಲ್ಲುತ್ತೇನೆ ಎಂದು ಖಚಿತ ಪಡಿಸುತ್ತಿದ್ದಾರೆ. ಈ ಮೂಲಕ ಸಂಶಯವನ್ನ ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. 

ತಮ್ಮ ಸ್ಪರ್ಧೆಯ ವಿಚಾರದಲ್ಲಿ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಎನ್ನುತ್ತಿರುವ ಈಶ್ವರಪ್ಪ ಈ ಹಿಂದೆ ಸಿಗಂದೂರು ದೇವಾಲಯಕ್ಕೆ ಹೋದಾಗಲು ಚುನಾವಣೆಗೆ ನಿಲ್ಲುವುದು ಖಚಿತವೇ ಎಂಬ ಪ್ರಶ್ನೆ ಕೇಳಿಬಂದಿತ್ತು ಎಂದಿದ್ದರು. ಹೀಗೆ ತಮ್ಮ ಚುನಾವಣೆ ಸ್ಪರ್ಧೆಯ ವಿಚಾರದ ಖಚಿತತೆಯನ್ನು ಸ್ಪಷ್ಟಪಡಿಸುತ್ತಿರುವ ಶಿವಮೊಗ್ಗ ನಗರ ಕ್ಷೇತ್ರದ ಮಾಜಿ ಶಾಸಕರು, ಗುಡ್ಡದ ರಂಗನಾಥ ದೇವಸ್ಥಾನದಲ್ಲಿ ಪ್ರಸಾದ ಕೇಳಲು ಹೋಗಿದ್ಧಾಗ ನಡೆದ ಘಟನೆ ಯೊಂದನ್ನ ವಿವರಿಸಿದ್ದಾರೆ. 

ನಿನ್ನೆ ಈ ಬಗ್ಗೆ ಮಾತನಾಡಿರುವ ಕೆಎಸ್‌ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ತಾವು ಕಣಕ್ಕಿಳಿಯುವ ಬಗ್ಗೆ ಅನುಮಾನ ದೇವರಿಗೂ ಇತ್ತು ಎಂದು ಕಾಣುತ್ತದೆ. ಹಾಗಾಗಿ ಗುಡ್ಡದ ರಂಗನಾಥ ದೇವಾಲಯದಲ್ಲಿ ಮೊದಲು ಪ್ರಸಾದ ಆಗಲಿಲ್ಲ. ಆದರೆ ನನ್ನ ಸ್ಪಷ್ಟನೆಯನ್ನು ಪ್ರಾರ್ಥನೆಯ ಮೂಲಕ ತಿಳಿಸಿದಾಗ ಗುಡ್ಡದ ರಂಗನಾಥ ದೇವಸ್ಥಾನದಲ್ಲಿ ಪ್ರಸಾದವಾಯ್ತು ಎಂದು ತಿಳಿಸಿದ್ರು. 

ಭದ್ರಾವತಿ ತಾಲ್ಲೂಕು ದಾನವಾಡಿ ಬೆಟ್ಟದಲ್ಲಿರುವ ಗಿರಿರಂಗನಾಥ ಸ್ವಾಮಿ ದೇವಾಲಯಕ್ಕೆ ಕೆಎಸ್‌ ಈಶ್ವರಪ್ಪ ಭೇಟಿಕೊಟ್ಟಿದ್ದರು. ಶುಕ್ರವಾರದಂದು ಅಲ್ಲಿಗೆ ತೆರಳಿದ್ದ ಈಶ್ವರಪ್ಪನವರು ದೇವರಲ್ಲಿ ಅಪ್ಪಣೆ ಕೇಳಿದ್ದಾರೆ. ಮೊದಲು ರಂಗನಾಥ ಸ್ವಾಮಿ ಬಲ ತೊಡೆಯ ಮೇಲಿನ ಪ್ರಸಾದವಾಗಿದೆ. (ಪ್ರಸಾದವೆಂದರೆ ದೇವರಿಗೆ ಅಲಂಕರಿಸಿದ ಹೂವು ಬೇಡಿಕೊಂಡ ಸಂದರ್ಭದಲ್ಲಿ ಕೆಳಕ್ಕೆ ಬೀಳುವುದು) ಈ ಬಗ್ಗೆ ಅಭಿಮಾನಿಗಳು ತಮ್ಮಲ್ಲೆ ಮಾತನಾಡಿಕೊಳ್ತಿದ್ದಾಗ, ಕೆಎಸ್‌ ಈಶ್ವರಪ್ಪನವರು ಪುನಃ ರಂಗಪ್ಪ ಸ್ವಾಮಿ... ನನ್ನ ಸ್ಪರ್ಧೆ ಖಚಿತ. ಮುಂದಿಟ್ಟ ಹೆಜ್ಜೆ ಹಿಂದಿಡಲ್ಲ ಎಂದು ಗಂಟೆ ಭಾರಿಸಿ ಶಂಖನಾದ ಮೊಳಗಿಸಿದ್ದಾರೆ. ಆಗಲು ಪ್ರಸಾದವಾಗಲಿಲ್ಲ. ಕೆಲವೇ ಕ್ಷಣಗಳಲ್ಲಿ ಅರ್ಚಕರು ಮತ್ತೊಮ್ಮೆ  ಪೂಜೆ ಸಲ್ಲಿಸಿ ಆರತಿ ಬೆಳಗಿದ್ದಾರೆ. ಆಗ ರಂಗನಾಥ ಸ್ವಾಮಿಯ ಎದೆಭಾಗದಿಂದ ಪ್ರಸಾದವಾಗಿದೆ. ಇದರಿಂದ ಈಶ್ವರಪ್ಪನವರ ಅಭಿಮಾನಿಗಳು ಸಂತೋಷಗೊಂಡು ದೇವರಿಗೆ ಕೈ ಮುಗಿದಿದ್ದಾರೆ.  

ಈ ಕ್ಷಣವನ್ನು ನಿನ್ನೆ ಮಾಧ್ಯಮಗಳೊಂದಿಗೆ ಹಂಚಿಕೊಂಡ ಕೆಎಸ್‌ ಈಶ್ವರಪ್ಪನವರು ತಮ್ಮ ಸ್ಪರ್ಧೆ ಖಚಿತ ಎಂದು ಸ್ಪಷ್ಟಪಡಿಸಿದ್ದಷ್ಟೆ ಅಲ್ಲದೆ ಘಂಟೆ ಬಾರಿಸುವುದಕ್ಕೂ ಸಿದ್ಧ ಎಂದು ಎದುರಾಳಿಯ ಸವಾಲಿಗೆ ಪ್ರತಿಸವಾಲು ಹಾಕಿದ್ದಾರೆ