ತಲೆ ಕೆಟ್ಟವನ ಮಾತು | ಈಶ್ವರಪ್ಪ ಆಕ್ರೋಶ | ಏನಿದು ಬಿಜೆಪಿ ಮುಖಂಡರು, ಮಾಜಿ ಮುಖಂಡರ ನಡುವಿನ ವಾಕ್ಸಮರ ?

Talks between former minister KS Eshwarappa and KPCC spokesperson Ayanur Manjunath. ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ರವರ ನಡುವೆ ವಾಕ್ಸಮರ

ತಲೆ ಕೆಟ್ಟವನ ಮಾತು | ಈಶ್ವರಪ್ಪ ಆಕ್ರೋಶ  | ಏನಿದು ಬಿಜೆಪಿ ಮುಖಂಡರು, ಮಾಜಿ ಮುಖಂಡರ ನಡುವಿನ ವಾಕ್ಸಮರ ?

KARNATAKA NEWS/ ONLINE / Malenadu today/ Oct 20, 2023 SHIVAMOGGA NEWS

ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಮಾತಿನ ಏಟು ಏದಿರೇಟು ತುಸುಜಾಸ್ತಿಯೇ ನಡೆಯುತ್ತಿರುತ್ತದೆ. ರಾಜ್ಯ ರಾಜಕೀಯದ ಪವರ್ ಸೆಂಟರ್ ಎನಿಸಿರುವ ಕಾರಣ ಪಕ್ಷಗಳ ನಾಯಕರ ಮಾತಿನ ಪವರ್ ಜೋರಾಗಿಯೇ ಕೇಳಿಸುತ್ತಿರುತ್ತದೆ. ಈ ಮಧ್ಯೆ ಇತ್ತೀಚೆಗೆ ಕೆಪಿಸಿಸಿ ಹಿಂದೊಮ್ಮೆ ಬಿಜೆಪಿ ವಾಗ್ಮಿ ಎನಿಸಿದ್ದ ಆಯನೂರು ಮಂಜುನಾಥ್​ರವರನ್ನೆ ತನ್ನ ವಕ್ತಾರರನ್ನಾಗಿ ನೇಮಿಸಿದೆ. 

ಹೀಗಾಗಿ ಬಿಜೆಪಿ ಮುಖಂಡರು ಹಾಗೂ ಮಾಜಿ ಮುಖಂಡರ ನಡುವೆಯೇ ಮಾತಿನ ಸಮರ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಮಾತನಾಡಿದ್ದ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್​ ಕೆ.ಎಸ್​.ಈಶ್ವರಪ್ಪನವರ ವಿರುದ್ಧ ಹರಿಹಾಯ್ದಿದ್ದರು, ಈಶ್ವರಪ್ಪನವರು ಭ್ರಷ್ಟಾಚಾರ ಮಾಡಿದ್ದನ್ನ ತಮ್ಮ ಮಾತಿನಲ್ಲೆ ಒಪ್ಪಿಕೊಂಡಿದ್ದರು. ಅವರು ಹೇಳಿದಂತೆ ಆಪರೇಷನ್ ಕಮಲ ನಡೆಯಲ್ಲ ಕಾಂಗ್ರೆಸ್​ಗೇನೆ ಬಿಜೆಪಿಯವರು ಬರುತ್ತಾರೆ ಎಂದು ಆರೋಪಿಸಿದ್ದರು. ಅಲ್ಲದೇ ಬಿಜೆಪಿ ಮಾಜಿ ಮಂತ್ರಿ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಎಂದು ದೂರಿದ್ದರು. 

ಆಯನೂರು ಮಂಜುನಾಥ್​ ರವರ ಟೀಕೆಗೆ ಉತ್ತರಿಸಿದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ  ಆಯನೂರು ಮಂಜುನಾಥ್ ರವರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಅಲ್ಲದೆ 'ಆ ತಲೆ ಕೆಟ್ಟವನ ಮಾತಿಗೆ ನಾನು ಉತ್ತರ ಕೊಡಲ್ಲ. ಅವನಿಗೆ ಯಾವ ನೈತಿಕತೆಯೂ ಇಲ್ಲ. ಎಷ್ಟು ಪಕ್ಷಗಳನ್ನು ಬದಲಾವಣೆ ಮಾಡಿದ್ದಾನೆ ಎಂದು ಅವನೇ ಹೇಳಲಿ' ಎಂದು ಏಕವಚನದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ನಾಯಕರ ಈ ಟೀಕೆ ಪ್ರತಿಟೀಕೆಗಳು ವಾಗ್ದಾಳಿಗಳು ಕುತೂಹಲ ಮೂಡಿಸುತ್ತಿದೆ  


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ