ಸಕ್ರೆಬೈಲ್ ಆನೆ ಕ್ಯಾಂಪ್​ನಲ್ಲಿ WILD TUSKER SAKREBYLU | ಏನಿದು ಗೊತ್ತಾ ವಿಶಿಷ್ಟ ಸಂಘಟನೆ ಮತ್ತು ಕಾರ್ಯಕ್ರಮ !

Wild Tusker Sakrebylu organized a special program at Sakrebyle Elephant Camp yesterday, ಸಕ್ರೆಬೈಲ್​ ಆನೆ ಕ್ಯಾಂಪ್​ನಲ್ಲಿ ನಿನ್ನೆ ವೈಲ್ಡ್​ ಟಸ್ಕರ್​ ಸಕ್ರೆಬೈಲು ಸಂಸ್ಥೆ ವಿಶಿಷ್ಟ ಕಾರ್ಯಕ್ರಮ ನಡೆಸಿಕೊಟ್ಟಿದೆ

ಸಕ್ರೆಬೈಲ್ ಆನೆ ಕ್ಯಾಂಪ್​ನಲ್ಲಿ  WILD TUSKER SAKREBYLU |  ಏನಿದು ಗೊತ್ತಾ ವಿಶಿಷ್ಟ ಸಂಘಟನೆ ಮತ್ತು ಕಾರ್ಯಕ್ರಮ !

KARNATAKA NEWS/ ONLINE / Malenadu today/ Oct 20, 2023 SHIVAMOGGA NEWS

ನೇಚರ ಮಲೆನಾಡು ಮಳೆಕಾಡು ವನ್ಯಜೀವಿ ಅದ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಶಿವಮೊಗ್ಗದ ಸಕ್ರೇಬೈಲ್ ಆನೆ ಬಿಡಾರದಲ್ಲಿರುವ ಮಾವುತ ಹಾಗೂ ಕಾವಾಡಿಗಳಿಗೆ ದಸರಾ ಹಬ್ಬದ ಪ್ರಯುಕ್ತ ಜವಳಿ ವಿತರಿಸಲಾಯಿತು. .ಆನೆಗಳ ತರಬೇತಿ ಕ್ಯಾಂಪ್ ನಲ್ಲಿ, ನಡೆದ ಸರಳ ಕಾರ್ಯಕ್ರಮದಲ್ಲಿ ಎಂ.ಆರ್.ಎರ್.ಎಸ್. ಸಂಸ್ಥೆಯ ಅಂಗಸಂಸ್ಥೆ ಯಾದ ವೈಲ್ಡ್ ಟಸ್ಕರ್ ಸಕ್ರೇಬೈಲುವಿನ ಗೌರವಾದ್ಯಕ್ಷ  ಎಂ .ಶ್ರೀಕಾಂತ್ ರವರು, ಎಂಬತ್ತು ಮಂದಿ ಸಕ್ರೇಬೈಲ್ ಆನೆ ಬಿಡಾರದ ಮಾವುತರು ಹಾಗು ಕಾವಾಡಿಗಳು ಮತ್ತು ಗಾಜನೂರು ವನ್ಯಜೀವಿ ವಿಭಾಗದ ಡಿಸಿಪಿ ವಾಚರ್ಸ್ ಮತ್ತು ನಿವೃತ್ತ ಜಮೇದಾರ್ ಗಳಿಗೆ ಬಟ್ಟೆಯನ್ನು ವಿತರಿಸಿದರು. 

ಇನ್ನೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ  ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕೃಷ್ಣ ಪಟಗಾರ್​ ಸಮಾಜದಲ್ಲಿ ಶ್ರಮಿಕ ವರ್ಗದ ನೌಕರರನ್ನು ಗುರುತಿಸಿ ಸಹಾಯ ಮಾಡುವುದು ಮಾದರಿ ಕೆಲಸ ಎಂದರು. ಅರಣ್ಯ ಇಲಾಖೆಯಲ್ಲಿನ ಕೆಳಹಂತದ ಸಿಬ್ಬಂದಿ ತಮಗಿರುವ ಕನಿಷ್ಟ ಸೌಲಭ್ಯದಲ್ಲಿಯೂ ಉತ್ತಮ ಕೆಲಸ ಮಾಡುತ್ತಾರೆ. ಅವರ ಶ್ರಮದಿಂದ ಅರಣ್ಯ ಮತ್ತು ವನ್ಯ ಪ್ರಾಣಿಗಳ ರಕ್ಷಣೆಯಾಗುತ್ತಿದೆ.ಇಂತಹ ಸಿಬ್ಬಂದಿಗಳಿಗೆ ಸಾಮಾಜಿಕ ಸೇವಾ ಸಂಸ್ಥೆ ಮಾಡುತ್ತಿರುವ ನೆರವು ಸ್ಫೂರ್ತಿದಾಯಕ ಎಂದರು.

ಸಂಸ್ಥೆ ಗೌರವ ಅಧ್ಯಕ್ಷರಾದ ಎಂ.ಶ್ರೀಕಾಂತ್ ಅವರು ಮಾತನಾಡಿ, ಕೊರೋನದಂತಹ ಸಂಕಷ್ಟ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸಂಸ್ಥೆ ಸ್ಪಂದಿಸಿದೆ. ಮಾವುತರು ಮತ್ತು ಕಾವಾಡಿಗಳು ಅರಣ್ಯದಲ್ಲಿ ಆನೆಯೊಂದಿಗೇ ಕಷ್ಟದ ಜೀವನ ಮಾಡುತ್ತಾರೆ. ಸರಕಾರದಿಂದ ಸಿಗುವ ಸೌಲಭ್ಯಗಳೂ ಅವರಿಗೆ ಸಮರ್ಪಕವಾಗಿಲ್ಲ. ಈ ಬಗ್ಗೆ ಸಚಿವರ ಗಮನ ಸೆಳೆಯಲಾಗುವುದು. ನಿಮ್ಮ ಶ್ರಮವನ್ನು ಯಾವತ್ತೂ ಗೌರವಿಸುತ್ತೇವೆ. ಸಂಸ್ಥೆ ಈ ರೀತಿಯ ಜನಪರ ಕೆಲಸವನ್ನು ಮುಂದೆಯೂ ಮಾಡಲಿದೆ ಎಂದರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಮಾವುತರು ಮತ್ತು ಕಾವಾಡಿಗಳು ಜೀವ ಒತ್ತೆ ಇಟ್ಟು ಕೆಲಸ ಮಾಡುತ್ತಾರೆ. ಅವರ ನೆರವಿಗೆ ವೈಲ್ಡ್ ಟಸ್ಕರ್ ಸಂಸ್ಥೆ ಮುಂದಾಗಿರುವುದು ಮಾದರಿಯಾಗಿದೆ. ಶ್ರೀಕಾಂತ್ ಮತ್ತು ಜೇಸುದಾಸ್ ಅವರ ಮಾನವೀಯ ಕಾರ್ಯ ಮೆಚ್ಚುವಂತಾಗಿದೆ. ಮಾವುತರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕೆಂದು ಹೇಳಿದರು.

ಸಂಸ್ಥೆ ನಿರ್ದೇಶಕ ಪಿ.ಜೇಸುದಾಸ್ ಮಾತನಾಡಿ, ಸಂಸ್ಥೆ ವನ್ಯಜೀವಿ ಸಂಶೋಧನೆ, ಅರಣ್ಯ ಬೆಳವಣಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಇಲಾಖೆಯ ಕೆಳಹಂತದ ನೌಕರರ ಆರೋಗ್ಯ, ಮಕ್ಕಳ ಶಿಕ್ಷಣ ಇತ್ಯಾದಿ ಕೆಲಸ ಮಾಡಲಿದೆ ಎಂದು ಸಂಸ್ಥೆ ಉದ್ದೇಶಗಳನ್ನು ವಿವರಿಸಿದರು.



ವನ್ಯಜೀವಿ ವೈದ್ಯ ಡಾ.ವಿನಯ್, ಉಪ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ್  ವೇದಿಕೆಯಲ್ಲಿದ್ದರು. ಸಕ್ರೆಬೈಲ್ ಮಾವುತರು, ಕಾವಾಡಿಗಳು, ನಿವೃತ್ತ ಜಮೇದಾರರಿಗೆ ಸಮವಸ್ತ್ರ ವಿತರಿಸಿ ಅವರೊಂದಿಗೆ ಔತಣಕೂಟವನ್ನು ಸಂಸ್ಥೆ ಆಯೋಜಿಸಿತ್ತು. ಶಿವಮೊಗ್ಗದ ಪ್ರತ್ರಕರ್ತರು,  ವನ್ಯಜೀವಿ ಪ್ರೇಮಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ