ಐರಾವತದಲ್ಲಿ ಬೆಂಗಳೂರಿನಿಂದ ಸಾಗರಕ್ಕೆ ಬಂದ ಪ್ರಯಾಣಿಕನಿಗೆ ಶಾಕ್​ | KSRTC ಬಸ್​ ನಿಲ್ಲಾಣದಲ್ಲಿ ಮತ್ತೊಂದು ಘಟನೆ

Malenadu Today

KARNATAKA NEWS/ ONLINE / Malenadu today/ Oct 20, 2023 SHIVAMOGGA NEWS

ಶಿವಮೊಗ್ಗ KSRTC ಬಸ್​ ಸ್ಟ್ಯಾಂಡ್​ನಲ್ಲಿ ಒಂದಲ್ಲ ಒಂದು ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇವೆ. ಈ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಗಮನ ಹರಿಸಿದಂತಿಲ್ಲ. ಇದರ ನಡುವೆ ಮತ್ತೊಂದು ಕಳ್ಳತನ ಪ್ರಕರಣ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಗಿದೆ. 

ಏನಿದು ಕೇಸ್​, 

ಬೆಂಗಳೂರಿನ ಸಂಬಂಧಿಕರ ಮನೆಗೆ ಹೋಗಿ ಪೂಜೆ ಕಾರ್ಯಕ್ರಮ ಮುಗಿಸಿ ವಾಪಸ್ ಬೆಂಗಳೂರಿನಿಂದ ಸಾಗರಕ್ಕೆ ಐರಾವತ ಬಸ್ ಬುಕ್ ಮಾಡಿಕೊಂಡು ಪ್ರಯಾಣಿಕರೊಬ್ಬರು ಬಂದಿದ್ದರು. ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಇಳಿದು ಶೌಚಕ್ಕೆ ಹೋಗಿ ವಾಪಸ್ ಮತ್ತೆ ಬಸ್ ನಲ್ಲಿ ಕುಳಿತಿದ್ದಾರೆ. ಆನಂತರ ಸಾಗರಕ್ಕೆ ತೆರಳಿದ ನಂತರ ತಮ್ಮ ಸಂಬಂಧಿ ನಿವಾಸದಲ್ಲಿ ಬ್ಯಾಗ್​ ಓಪನ್ ಮಾಡಿದ್ದಾರೆ. ಆವೇಳೆ ಬ್ಯಾಗ್​ನಲ್ಲಿದ್ದ ಚಿನ್ನಾಭರಣ ಇಲ್ಲದಿರುವುದು ಗೊತ್ತಾಗಿದೆ. ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನಾಭರಣಗಳು ಕಳ್ಳತನವಾಗಿರುವುದು ಗೊತ್ತಾಗಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು : IPC 1860 (U/s-379) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ 


ಇನ್ನಷ್ಟು ಸುದ್ದಿಗಳು 

ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ


 

Share This Article