ಭದ್ರಾವತಿ ರಾಜಕಾರಣ |ಲೈನ್‌ ಮ್ಯಾನ್‌ಗೆ ಒಂದೆ ದಿನ ಮೂರು ಕಡೆಗೆ ವರ್ಗಾವಣೆ? | ಇದು ಸಾಧ್ಯ?

Bhadravathi politics: Mescom lineman transferred to three places in a day? | Is this possible?

ಭದ್ರಾವತಿ ರಾಜಕಾರಣ |ಲೈನ್‌ ಮ್ಯಾನ್‌ಗೆ  ಒಂದೆ ದಿನ ಮೂರು ಕಡೆಗೆ ವರ್ಗಾವಣೆ? | ಇದು ಸಾಧ್ಯ?
Bhadravathi politics‌ , Mescom lineman transferred

SHIVAMOGGA | MALENADUTODAY NEWS | May 20, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಓರ್ವ ಮೆಸ್ಕಾಂ ಸಿಬ್ಬಂದಿಯನ್ನು ಒಂದೆ ದಿನ ಮೂರು ಸಲ ವರ್ಗಾವಣೆ ಮಾಡಲಾಗಿದೆಯಾ? ಹೀಗೊಂದು ಅನುಮಾನಯುಕ್ತ ಆರೋಪವೊಂದು ತಾಲ್ಲೂಕುನಲ್ಲಿ ಕೇಳಿಬಂದಿದೆ. 

ಏನಿದು ಪ್ರಕರಣ ?

ಭದ್ರಾವತಿ ಮೆಸ್ಕಾಂ ಸಹಾಯಕ ಅಭಿಯಂತರರು(ವಿ) ಘಟಕ-1 ರಲ್ಲಿ ಲೈನ್‌ ಮ್ಯಾನ್‌ ಆಗಿ ಆನಂದ್‌ ಎಂಬವರು ಕೆಲಸ ಮಾಡುತ್ತಿದ್ದಾರೆ. ಅವರು  ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷ ಕೂಡ ಆಗಿದ್ದಾರಂತೆ. ಅವರನ್ನು ಒಂದೇ ದಿನ 3 ಬಾರಿ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಜೆಡಿಎಸ್‌ ಶಾರದಾ ಅಪ್ಪಾಜಿ ಅವರು ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಯ ಇಇ ಪ್ರಭಾರಿ ಬೀರಪ್ಪ ರವರ ಕಚೇರಿಗೆ ತೆರಳಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 

ಕಳೆದ ವರ್ಷ 2023 ರಲ್ಲಿ ರೆಸಾರ್ಟ್‌ವೊಂದರಲ್ಲಿ ಜೂಜಾಟವಾಡುತ್ತಿದ್ದ ಆರೋಪ ಸಂಬಂಧ ಆನಂದ್‌ ಎಂಬವರ ವಿರುದ್ಧ ದೂರು ದಾಖಲಾಗಿತ್ತು. ಅದೇ ಪ್ರಕರಣ ಸಂಬಂಧ ಸ್ಥಳೀಯ ಶಾಸಕರ ಪತ್ರದ ಆಧಾರದ ಮೇಲೆ ಅಮಾನತ್ತುಗೊಳಿಸಲಾಗಿತ್ತಂತೆ. ಆ ಬಳಕಿ ಸಸ್ಪೆಂಡ್‌ ಅವಧಿ ಮುಗಿಯುತ್ತಲೇ ಆನಂದ್‌ರವರನ್ನ ಒಂದೇ ದಿನ   ಧರ್ಮಸ್ಥಳದ ಉಜಿರೆ, ಉಜಿರೆಯಿಂದ ಹೊಳೆಹೊನ್ನೂರಿಗೆ, ನಂತರ ಸೊರಬಕ್ಕೆ ವರ್ಗಾಯಿಸಲಾಗಿದೆ ಎಂಬುದು ಆರೋಪ. 

ತಮ್ಮ ವರ್ಗಾವಣೆಗೆ ಆನಂದ್‌ ಕೋರ್ಟ್‌ ಮೂಲಕ ತಡೆಯಾಜ್ಞೆ ತಂದಿದ್ದು, ಅವರನ್ನು ಪೂರ್ವ ನಿಯೋಜಿತ ಸ್ಥಳದಲ್ಲಿಯೇ ನಿಯುಕ್ತಿಗೊಳಿಸಬೇಕು ಎಂದು ಜೆಡಿಎಸ್‌ ಮುಖಂಡರು ಇಇ ರವರಿಗೆ ಮನವಿ ಸಲ್ಲಿಸಿದ್ದಾರೆ. ಸದ್ಯ ಪ್ರಕರಣ ರಾಜಕಾರಣವಾಗಿ ಕುತೂಹಲ ಮೂಡಿಸಿದೆ