ಶ್‌! ಶಿವಮೊಗ್ಗ ರೌಡಿಸಂನ ಸೈಲೆನ್ಸ್‌ ಬ್ರೇಕ್‌ | ಕೋರ್ಟ್‌ ಡೇಟ್‌ ಮುಹೂರ್ತದ ಸ್ಕೆಚ್‌ ಯಾರಿಗೆ? ಏನಿದು ಮಲೆನಾಡು ಟುಡೆ JP EXCLUSIVE

Another big update on Shivamogga rowdyism writes JP in Malenadu Today.

ಶ್‌! ಶಿವಮೊಗ್ಗ ರೌಡಿಸಂನ ಸೈಲೆನ್ಸ್‌ ಬ್ರೇಕ್‌ | ಕೋರ್ಟ್‌ ಡೇಟ್‌ ಮುಹೂರ್ತದ ಸ್ಕೆಚ್‌ ಯಾರಿಗೆ? ಏನಿದು ಮಲೆನಾಡು ಟುಡೆ JP EXCLUSIVE
Handi Anni, Hebbettu Manja, Market Loki, Tamil Ramesh, Kada Karthi, Karab Shivu, Sainadi Lakshmana,

SHIVAMOGGA | MALENADUTODAY NEWS | Jun 13, 2024  ಮಲೆನಾಡು ಟುಡೆ

ಪತ್ರಕರ್ತ ರವಿ ಬೆಳೆಗೆರೆ ರೌಡಿ ಜಗತ್ತಿನ ಮೌನದ ಬಗ್ಗೆ ಒಮರ್ಟಾ ಎಂಬ ಪದವೊಂದನ್ನ ಬಳಸ್ತಾರೆ. ಮತ್ತದನ್ನ ಪುಸ್ತಕದ ಟೈಟಲ್‌ ಆಗಿ ಹೊರತರುವ ಬೆಳೆಗೆರೆ, ಲಾ ಆಫ್‌ ಸೈಲೆನ್ಸ್‌ ಎಂಬ ಟ್ಯಾಗ್‌ ಲೈನ್‌ ಕೊಡ್ತಾರೆ. ಸದ್ಯ ಈ ಪದವನ್ನ ಶಿವಮೊಗ್ಗದ ಮಟ್ಟಿಗೆ ಬಳಸುತ್ತಿದ್ದೇವೆ. ಕಾರಣ ಶಿವಮೊಗ್ಗದ ರೌಡಿಸಂನ ಸೈಲೆನ್ಸ್‌ ಬ್ರೇಕ್‌ ಆಗಿದೆ. ಯೆಸ್‌ ಸರ್…‌ ಶಿವಮೊಗ್ಗದಲ್ಲಿ ಚುನಾವಣಾ ನೀತಿ ಸಂಹಿತೆ ಮುಗಿದ ಬೆನ್ನಲ್ಲೆ ಟಾಪ್‌ ರ್ಯಾಂಕ್‌ ರೌಡಿ ಪಟಾಲಂ ತಮ್ಮೊಳಗಿನ ದ್ವೇಷಕ್ಕೆ ಸ್ಕೆಚ್‌ ರೂಪಿಸಿ ಫೀಲ್ಡ್‌ಗಿಳಿದಿದೆ. 

ಏನಿದು? 

ಶಿವಮೊಗ್ಗದ ರೌಡಿವಲಯದ ವೈಯಕ್ತಿಕ ದ್ವೇಷದ ಪ್ರತೀಕಾರದ ಕೊಲೆಗಳು ದಂಡಿಯಾಗಿ ನಡೆದಿವೆ. ಅದರ ಮುಂದುವರೆದ ಭಾಗಕ್ಕೆ ಇದೀಗ ಭೂಮಿ ಹಸನಾಗಿಸ್ತಿದೆ ಶಿವಮೊಗ್ಗ ರೌಡಿಸಂ. ಹೌದು, ಮಲೆನಾಡು ಟುಡೆಗೆ ಸಿಕ್ಕ ಎಕ್ಸ್‌ಕ್ಲ್ಯೂಸಿವ್‌ ಮೂಲಗಳ ಪ್ರಕಾರ, ಕೆಲ ತಿಂಗಳ ಹಿಂದೆ ರಿಲೀಸ್‌ ಆಗಿದ್ದ ಇಬ್ಬರು ರೌಡಿಗಳು, ಇದೀಗ ತಮ್ಮ ದ್ವೇಷಿಗಳ ಮೇಲೆ ಕಣ್ಣು ನೆಟ್ಟಿದ್ದಾರೆ. ಇದಕ್ಕಾಗಿ ಫಿಲ್ಡ್‌ ಕ್ಲಿಯರ್‌ ಮಾಡಿಕೊಂಡಿದ್ದಾರೆ ಎಂಬುದು ಫಸ್ಟ್‌ ಸುದ್ದಿ. 

ಕೋರ್ಟ್‌ ಡೇಟ್‌ ಮೇಲೆ ಕಣ್ಣು

ಮೊದಲೆಲ್ಲಾ ರೌಡಿಯೊಬ್ಬನ ಚಲನವಲನವನ್ನು ಪಕ್ಕಾ ಕಲೆಹಾಕಿ ಆತ ಓಡಾಡುವ ಜಾಗದಲ್ಲಿ ಹುಡುಗರನ್ನ ಬಿಟ್ಟು ಅಥವಾ ಆತನೊಂದಿಗೆ ಓಡಾಡುವ ಹುಡುಗನಿಂದ ಮಾಹಿತಿ ಪಡೆದು ಆಫೋಸಿಟ್‌ ತಂಡ ಅಟ್ಯಾಕ್‌ ಮಾಡುತ್ತಿತ್ತು. ಆದರೆ ಹಂದಿಅಣ್ಣಿಯ ಮರ್ಡರ್‌ ಕೇಸ್‌ ಈ ಅಟ್ಯಾಕ್‌ ಪ್ಯಾಟ್ರನನ್ನ ಬದಲಾಯಿಸಿದೆ. ಈಗಿರೋ ಹೊಸ ಪ್ಯಾಟ್ರನ್‌ ಅಂದರೆ ಟಾರ್ಗೆಟ್‌ ಆದ ರೌಡಿಯೊಬ್ಬ ಕೋರ್ಟ್‌ಗೆ ಯಾವಾಗ ಬರುತ್ತಾನೆ. ಆತನ ವಿರುದ್ಧದ ಕೇಸ್‌ ಗೆ ಯಾವಾಗ ಅಟೆಂಡ್‌ ಆಗುತ್ತಾನೆ ಎಂದು ತಿಳಿದುಕೊಂಡು, ಆ ಸಂದರ್ಭದಲ್ಲಿಯೇ ಆತನ ಮೇಲೆ ದಾಳಿ ಮಾಡುವ ಸ್ಕೆಚ್‌ಗಳು ರೂಪುಗೊಳ್ಳುತ್ತಿದೆ. ಮತ್ತಿದರ ಸಕ್ಸಸ್‌ ರೇಟ್‌ ಹೈ ಆಗಿದೆ. 

ಕೋರ್ಟ್‌ಗೆ ಹೊರಟಿದ್ದ ಅಣ್ಣಿ ಕೊಲೆ

ಹೆಬ್ಬೆಟ್ಟು ಮಂಜನ ಮೇನ್‌ ವಿಕೆಟ್‌ ಆಗಿದ್ದ ಹಂದಿ ಅಣ್ಣಿಯನ್ನು ಶಿವಮೊಗ್ಗದ ವಿನೋಬನಗರ ಪೊಲೀಸ್‌ ಠಾಣೆಯ ಹತ್ತಿರದಲ್ಲಿಯೇ ಹೊಡೆದುಹಾಕಿದ್ರು ಕಾಡಾ ಕಾರ್ತಿಯ ಬ್ಯಾಟ್ಸ್‌ಮನ್‌ಗಳು. ಅಂದು ಅಣ್ಣಿ ಯಾವುದೋ ಕೇಸ್‌ವೊಂದಕ್ಕೆ ಕೋರ್ಟ್‌ಗೆ ಹೋಗಿ ಬರ್ತಿನಿ ಅಂತಾ ಮನೆಯಲ್ಲಿ ಹೇಳಿ ಹೊರಟಿದ್ದನಷ್ಟೆ. ಆತ ಅಂದು ಕೋರ್ಟ್‌ಗೆ ಹೋಗುತ್ತಾನೆ ಎಂಬುದು ಎದುರಾಳಿಗಳಿಗೆ ಮೊದಲೇ ಗೊತ್ತಿತ್ತು. ಅದರ ಬೇಸ್‌ ಮೇಲೆ ಸ್ಕೆಚ್‌ ಸಿದ್ಧವಾಗಿತ್ತಷ್ಟೆ ಅಲ್ಲದೆ ಅಣ್ಣಿ ನಡುರೋಡ್‌ನಲ್ಲಿ ಹೆಣವಾಗಿದ್ದ

ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲೆ ಅಟ್ಯಾಕ್‌ 

ಇನ್ನೂ ಅಣ್ಣಿಯನ್ನ ಕೊಂದಿದ್ದ ಆರೋಪಿಗಳ ಗ್ಯಾಂಗ್‌ನ ಇಬ್ಬರ ಮೇಲೆ ಕಳೆದ ವರ್ಷ ಮಾರ್ಚ್‌ 15 ರಂದು ಮೇಜರ್‌ ಅಟ್ಯಾಕ್‌ ನಡೆದಿತ್ತು.  ದಾವಣಗೆರೆ ಹೊನ್ನಾಳಿ ತಾಲ್ಲೂಕಿನ ಚೀಲೂರು ಸಮೀಪ  ಹಂದಿ ಅಣ್ಣಿ ಕೊಲೆ ಯ ಆರೋಪಿಗಳಾದ ಮಧು ಮತ್ತು ಆಂಜನೇಯನ ಮೇಲೆ ತಮಿಳ್‌ ರಮೇಶ್‌ ಆಂಡ್‌ ಗ್ಯಾಂಗ್‌ ಅಟ್ಯಾಕ್‌ ನಡೆಸಿತ್ತು. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದ, ಇನ್ನೊಬ್ಬ ಗಂಭೀರನಾಗಿದ್ದ. ಅಣ್ಣಿ ಮರ್ಡರ್‌ ಕೇಸ್‌ನಲ್ಲಿ ಬೇಲ್‌ ಮೇಲೆ ಬಿಡುಗಡೆಯಾಗಿದ್ದ ಇಬ್ಬರು, ಶಿವಮೊಗ್ಗ ಕೋರ್ಟ್‌ನಲ್ಲಿ ಕೇಸ್‌ಗೆ ಅಟೆಂಡ್‌ ಆಗಿ ವಾಪಸ್‌ ಹೋಗುವ ಸಂದರ್ಭದಲ್ಲಿಯೇ ಈ ದಾಳಿ ನಡೆದಿತ್ತು. ಅಂದರೆ ಇಲ್ಲಿಯು ಎದುರಾಳಿ ಗ್ಯಾಂಗ್‌ ಕೋರ್ಟ್‌ ಕೇಸ್‌ ಡೇಟ್‌ ದಿನವೇ ಮುಹೂರ್ತ ಫಿಕ್ಸ್‌ ಮಾಡಿತ್ತು. 

ಕಾಡಾ ಕಾರ್ತಿ ಮೇಲೆ ದಾಳಿಗೆ ಸ್ಕೆಚ್‌ 

ಮೆಲ್ಕಂಡ ಸ್ಟೈಲ್‌ನಲ್ಲಿ ಕಾರ್ತಿ ಯಾವಾಗ ಕೋರ್ಟ್‌ಗೆ ಬರುತ್ತಾನೆ ಎಂಬುದುನ್ನ ಆತನ ಎದುರಾಳಿ ಗ್ಯಾಂಗ್‌ ಅಥವಾ ಹೆಬ್ಬೆಟ್ಟು ಮಂಜನ ಟೀಂ ತಿಳಿದುಕೊಂಡು ಒಂದೆರಡು ಬಾರಿ ಸ್ಕೆಚ್‌ ಸಹ ರೂಪಿಸಿತ್ತು. ಆದರೆ ಅದು ಯಶಸ್ಸು ಇದುವರೆಗೂ ಕಂಡಿಲ್ಲ. ಬಹುಶಃ ಕೋರ್ಟ್‌ ಡೇಟ್‌ನ ಮುಹೂರ್ತದ ಆತಂಕದಲ್ಲಿಯೇ ಕಾರ್ತಿ ವಿಡಿಯೋ ಕಾನ್ಫರೆನ್ಸ್‌ ಮೂಲಕವೇ ಕೋರ್ಟ್‌ಗೆ ಅಟೆಂಡ್‌ ಆಗ್ತಿದ್ದಾನೆ ಎನ್ನಲಾಗ್ತಿದೆ. 

ಕರಾಬ್‌ ಶಿವು ಮೇಲೆ ಲೋಕಿ ಕಣ್ಣು 

ಕೋರ್ಟ್‌ ಡೇಟ್‌ ಮುಹೂರ್ತಕ್ಕೆ ರೌಡಿವಲಯದ ಲೇಟೆಸ್ಟ್‌ ಉದಾಹರಣೆ ಅಂದರೆ ಕರಾಬ್‌ ಶಿವು ಮ್ಯಾಟರ್‌, ಸದ್ಯ ಜೈಲಿನಿಂದ ಹೊರಕ್ಕೆ ಬಂದಿರುವ ಮಾರ್ಕೆಟ್‌ ಲೋಕಿ ತನ್ನ ಹಳೆಯ ದ್ವೇಷದ ಇನ್ನೊಂದು ಅಧ್ಯಾಯಕ್ಕೆ ಸಿದ್ಧನಾಗ್ತಿದ್ದಾನೆ ಎಂಬುದು ಪೊಲೀಸ್‌ ಮೂಲಗಳಲ್ಲಿರುವ ಸೀಕ್ರೆಟ್‌ ಸಂಗತಿ. 

ಆ ನಿಟ್ಟಿನಲ್ಲಿ ಲೋಕಿಯು ಸಹ , ಕೇಸ್‌ ವಿಚಾರವಾಗಿ ಕೋರ್ಟ್‌ಗೆ ಕರಾಬ್‌ ಶಿವು ಯಾವಾಗ ಬರುತ್ತಾನೆ ಎನ್ನುವ ಮಾಹಿತಿಯನ್ನ ಪಡೆಯುತ್ತಿದ್ದಾನಂತೆ. ನಿನ್ನೆ ಶಿವಮೊಗ್ಗ ಕೋರ್ಟ್‌ಗೆ ಕರಾಬ್‌ ಶಿವು ಹಾಜರಾಗಿದ್ದ, ಕೇಸ್‌ವೊಂದರಲ್ಲಿ ಘನ ನ್ಯಾಯಾಲಯದ ಮುಂದೆ ಅಟೆಂಡ್‌ ಆಗಿದ್ದ. ಅದೇ ಟೈಂನಲ್ಲಿ ಶಿವಮೊಗ್ಗ ಪೊಲೀಸರು ಶಿವಮೊಗ್ಗ ಕೋರ್ಟ್‌ ಸುತ್ತಮುತ್ತ ಬೀಟ್‌ ಮಾಡಿದ್ದರು. ಸಿಟಿಯಲ್ಲಿ ಮತ್ತೊಂದು ಅಟ್ಯಾಕ್‌ ತಪ್ಪಿಸುವ ಪ್ರಿವೆಂಟಿವ್‌ ಮೇಜರ್‌ ಕ್ರಮ ಇದಾಗಿತ್ತು. ಇದರ ಜೊತೆಗೊಂದಿಷ್ಟು ಗಾಳಿ ಸುದ್ದಿಗಳು ಅಂಡರ್‌ ವರ್ಲ್ಡ್‌ ನಲ್ಲಿ ಹವಾ ಸೃಷ್ಟಿಸ್ತಿವೆ

ಕೋರ್ಟ್‌ಗೆ ಬರಲು ರೌಡಿಗಳ ಭಯ

ಸದ್ಯ ಶಿವಮೊಗ್ಗ ಸಿಟಿಯಲ್ಲಿ ಕೋರ್ಟ್‌ ಕೇಸ್‌ಗೆ ಅಟೆಂಡ್‌ ಆಗಬೇಕು ಎಂದಾಗ ರೌಡಿಗಳ ಮೈ ಬೆವರುತ್ತಿದೆ. ಯಾರಾದ್ರೂ ಮಹೂರ್ತ ಫಿಕ್ಸ್‌ ಮಾಡಿದ್ರೆ ಕಥೆ ಫಿನಿಶ್‌ ಅನ್ನೋದ್ರಲ್ಲಿ ರೌಡಿಶೀಟರ್‌ಗಳಿಗೂ ಅನುಮಾನ ಇಲ್ಲ. ಹೀಗಾಗಿ ಫೀಲ್ಡ್‌ಗೆ ಹುಡುಗ್ರನ್ನ ಕಟ್ಟಿಕೊಂಡೆ ಕೇಸ್‌ಗಳಿಗೆ ಅಟೆಂಡ್‌ ಆಗುತ್ತಿದ್ದಾರೆ. ಸದ್ಯ ಸಮಾಧಾನದ ಸಂಗತಿ ಅಂದರೆ, ಶಿವಮೊಗ್ಗ ಪೊಲೀಸ್‌ ರೌಡಿ ಎಲಿಮೆಂಟ್ಸ್‌ ಮೇಲೆ ಮೇಜರ್‌ ಗಮನಹರಿಸಿದೆ. 

ಸಿಟಿಯಲ್ಲಿ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ಡೇ ಆಂಡ್‌ ನೈಟ್‌ ವಾಚ್‌ ಮಾಡುತ್ತಿದ್ದು, ಕಟ್ಟೆಚ್ಚರ ವಹಿಸಲಾಗುತ್ತಿದೆ. ಸಾಲದ್ದಕ್ಕೆ ಶಿವಮೊಗ್ಗದಲ್ಲಿ ಹೊರಗಿನ ಹುಡುಗ್ರು ಓಡಾಡುತ್ತಿರುವ ಮ್ಯಾಟ್ರು ಹರಿದಾಡುತ್ತಿದೆ. ಹೀಗಾಗಿ ಚೆಕ್‌ಪೋಸ್ಟ್‌ಗಳನ್ನ ಬಿಗಿಗೊಳಿಸಲಾಗಿದೆ. ಇತ್ತೀಚೆಗೆ ನಡೆದ ಗ್ಯಾಂಗ್‌ವಾರ್‌ ನಿಂದ ಸುಧಾರಿಸಿಕೊಳ್ತಿರುವ ಡಿಪಾರ್ಟ್‌ಮೆಂಟ್‌ಗೆ ಮತ್ತೊಂದು ಅಂತಹ ಘಟನೆ ಸುತಾರಾಮ್‌ ನಡೆಯಬಾರದು. ಅದಕ್ಕಾಗಿ ಆಂತರಿಕವಾಗಿ ನಾನಾ ಪ್ರಯತ್ನ ನಡೆಸ್ತಿದೆ. ಆದಾಗ್ಯು ಬಿಲ್‌ಕುಲ್‌ ಬಿಡಲ್ಲ ಎನ್ನುವ ಶಿವಮೊಗ್ಗದ ರೌಡಿಜಗತ್ತಿನ ಲೇಟೆಸ್ಟ್‌ ಮೆಸೇಜ್‌ ಆಲ್‌ರೈಟ್‌ ಮುಂದಕ್ಕೆ ಹೋಗೋಣ ಎನ್ನುವುದಕ್ಕೆ ಬಿಡುತ್ತಿಲ್ಲ.