2 ಸೆಕ್ಷನ್​ ಅಡಿಯಲ್ಲಿ ನಾಲ್ಕು ವರ್ಷ ಶಿಕ್ಷೆ ! ಕಳ್ಳತನ ಕೇಸ್​ನಲ್ಲಿ ಆರೋಪಿಗೆ ಕೋರ್ಟ್​ ತೀರ್ಪು

The ASCJ and JMFC court sentenced the accused to four years in jail in connection with a theft case in Bhadravathi. ಎ.ಎಸ್.ಸಿ.ಜೆ. ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಭದ್ರಾವತಿಯ ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗೆ ನಾಲ್ಕು ವರ್ಷ ಶಿಕ್ಷೆ ವಿಧಿಸಿದೆ.

2 ಸೆಕ್ಷನ್​ ಅಡಿಯಲ್ಲಿ ನಾಲ್ಕು ವರ್ಷ ಶಿಕ್ಷೆ ! ಕಳ್ಳತನ ಕೇಸ್​ನಲ್ಲಿ ಆರೋಪಿಗೆ ಕೋರ್ಟ್​ ತೀರ್ಪು

KARNATAKA NEWS/ ONLINE / Malenadu today/ Aug 13, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಭದ್ರಾವತಿ  (Bhadravati) ತಾಲ್ಲೂಕಿನಲ್ಲಿ ನಡೆದಿದ್ದ ಕಳ್ಳತನ ಪ್ರಕರಣವೊಂದರ ಸಂಬಂಧ  ಆರೋಪಿಗೆ ಕೋರ್ಟ್ ನಾಲ್ಕು ವರ್ಷ ಕಠಿಣ ಶಿಕ್ಷೆ ವಿಧಿಸಿದೆ 110 ಸಾವಿರ ರೂ. ದಂಡ ವಿಧಿಸಿದೆ. 

ಏನಿದು ಪ್ರಕರಣ 

2019ನೇ ಸಾಲಿನಲ್ಲಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ (Bhadravati Rural Police Station) ವ್ಯಾಪ್ತಿಯ ಬಾಬಳ್ಳಿಯಲ್ಲಿ ದೇವೇಂದ್ರಪ್ಪ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು.ಈ ಸಂಬಂಧ  ಆರೋಪಿ ಮಹೇಶ್ ನಾಯ್ಕ ಬೆಳ್ಳಿ ಮತ್ತು ಚಿನ್ನದ ಸಾಮಾನು ಕಳ್ಳತನ ಮಾಡಿರುತ್ತಾನೆ ಎಂದು ದೂರಲಾಗಿತ್ತು. ಪ್ರಕರಣ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಚಾರ್ಜ್​ಶೀಟ್ ಸಲ್ಲಿಕೆ

ತನಿಖಾಧಿಕಾರಿಯಾದ ಭದ್ರಾವತಿ ಗ್ರಾಮಾಂತರ ಠಾಣೆಯ ಸಿಪಿಐ ಯೋಗೀಶ್, ತನಿಖಾ ಸಹಾಯಕರಾಗಿ ದಿವಾಕರ್‌ರಾವ್ ಹೆಚ್‌ಸಿ ಇವರು ತನಿಖೆ ಕೈಗೊಂಡು ಆರೋಪಿತನ ವಿರುದ್ಧ  ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಪ್ರಕರಣದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕರಾದ ತಿಪ್ಪೇಶ್‌ರಾವ್‌ರವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. 

ಕೋರ್ಟ್ ತೀರ್ಪು

ಸದ್ಯ ಪ್ರಕರಣ ಸಂಬಂಧ ಎ.ಎಸ್.ಸಿ.ಜೆ. ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಿಲನ ವಿ.ಎನ್.ರವರು ದಿನಾಂಕ: 10-08-2023ರಂದು ಆರೋಪಿಗೆ ಕಲಂ  380 ಕ್ಕೆ  2ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದ್ದು, ದಂಡ ಕಟ್ಟಲು ವಿಫಲವಾದಲ್ಲಿ 3 ತಿಂಗಳು ಸಾದಾ ಕಾರಾವಾಸ ಮತ್ತು 454 ಕಲಂಗೆ 2 ವರ್ಷ ಮತ್ತು 5 ಸಾವಿರ ರೂ. ದಂಡ ವಿಧಿಸಿದ್ದು, ದಂಡ ಕಟ್ಟಲು ತಪ್ಪಿದಲ್ಲಿ 3 ತಿಂಗಳು ಸಾದಾ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. 

ಶಿವಮೊಗ್ಗ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ್​ ಅದಾಲತ್​! ಯಾವಾಗ? ಯಾವೆಲ್ಲಾ ಕೇಸ್​ಗಳು ಆಗಲಿವೆ ಇತ್ಯರ್ಥ! ಪಾಲ್ಗೊಳ್ಳುವುದು ಹೇಗೆ?|

ಕರ್ನಾಟಕ ರಾಜ್ಯ ಕಾನೂನು ಪ್ರಾಧಿಕಾರ, ಬೆಂಗಳೂರು ಇವರ ನಿರ್ದೇಶನದಲ್ಲಿ ರಾಜ್ಯದೆಲ್ಲೆಡೆ ರಾಷ್ಟ್ರೀಯ ಲೋಕ ಅದಾಲತ್‌ನ್ನು ನಡೆಸಲಾಗ್ತಿದೆ. ಈ ಹಿನ್ನೆಲೆ ಶಿವಮೊಗ್ಗ ಜಿಲ್ಲಾದ್ಯಂತ ಎಲ್ಲಾ ತಾಲ್ಲೂಕುಗಳನ್ನು ಒಳಗೊಂಡಂತೆ ಎಲ್ಲಾ ನ್ಯಾಯಾಲಯಗಳಲ್ಲೂ ಏಕ ಕಾಲದಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿದೆ. 

ಇದನ್ನು ಸಹ ಓದಿ :GOOD NEWS / ಕೊಡಚಾದ್ರಿ ಪ್ರವಾಸಕ್ಕೆ ಇನ್ನಿಲ್ಲ ನಿರ್ಬಂಧ! ಆದರೆ ಇದೊಂದಕ್ಕಿಲ್ಲ ಅವಕಾಶ!

ಯಾವ್ಯಾವ ಪ್ರಕರಣಗಳು ಇತ್ಯರ್ಥ?

ಈ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ವಿವಿಧ ಸಿವಿಲ್ ವ್ಯಾಜ್ಯಗಳು, ಬಗೆಹರಿಸಬಹುದಾದ ಕ್ರಿಮಿನಲ್, ಚೆಕ್ ಬೌನ್ಸ್ ಬ್ಯಾಂಕ್‌ ವಸೂಲಾತಿ, ಮೋಟಾರು ವಾಹನಗಳ, ಕೌಟುಂಬಿಕ, ಭೂ ಸ್ವಾಧೀನ, ಕಂದಾಯ, ಜನನ ಮತ್ತು ಮರಣ ನೊಂದಣಿ, ಜೀವನಾಂಶ ಪ್ರಕರಣಗಳು ಹಾಗೂ ಇನ್ನಿತರೆ ಲಘು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತು ವ್ಯಾಜ್ಯ ಪೂರ್ವ ಬ್ಯಾಂಕು ಸಾಲ ಮರುಪಾವತಿಯ ಪ್ರಕರಣಗಳನ್ನು ಇತ್ಯಾರ್ಥ ಪಡಿಸಿಕೊಳ್ಳಲು ಅವಕಾಶ ಇದೆ. 

ಇದನ್ನು ಸಹ ಓದಿ : ತೀರ್ಥಹಳ್ಳಿ ವಿಹಂಗಮಧಾಮದ ಮೇಲೆ ಪೊಲೀಸ್ ರೇಡ್! ದೇಶಿ,ವಿದೇಶಿ ಮದ್ಯ, ಕೋವಿ, ಕೊಂಬು ಸೇರಿದಂತೆ ವಿವಿಧ ವಸ್ತುಗಳು ಜಪ್ತಿ! ಏನಿದು ಪ್ರಕರಣ!?

ಪಾಲ್ಗೊಳ್ಳುವುದು ಹೇಗೆ?

ಸಂಬಂಧಪಟ್ಟ ಕಕ್ಷಿದಾರರು ವಕೀಲರ ಮೂಲಕ ಅಥವಾ ಖುದ್ದಾಗಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯಾರ್ಥಪಡಿಸಿ ಕೊಳ್ಳಬಹುದಾಗಿದ್ದು, ಇದರ ಸದುಪಯೋಗ ಕಕ್ಷಿಗಾರರು ಪಡೆಯ ಬಹುದಾಗಿದೆ. ರಾಜೀ ಪ್ರಕ್ರಿಯೆಯಿಂದ ಸಮಯ ಮತ್ತು ಹಣವನ್ನು ಉಳಿಸಬಹುದಾಗಿದೆ ಹಾಗೂ ಉಭಯ ಪಕ್ಷಗಾರರ ನಡುವಿನ ಬಾಂಧವ್ಯವು ವೃದ್ಧಿಸುವುದು. ಆದುದರಿಂದ ಕಕ್ಷಿಗಾರರು ಲೋಕ ಅದಾಲತ್‌ ನಲ್ಲಿ ಪಾಲ್ಗೊಳುವ ಅನುಕೂಲವನ್ನು ಪಡೆಯುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎನ್‌. ಚಂದನ್ ತಿಳಿಸಿದ್ದಾರೆ.


ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು