KARNATAKA NEWS/ ONLINE / Malenadu today/ Aug 13, 2023 SHIVAMOGGA NEWS
ಶಿಕಾರಿಪುರದಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು, ರೋಗಿಯೊಬ್ಬರನ್ನ ಶಿವಮೊಗ್ಗ ಆಸ್ಪತ್ರೆಗೆ ಬಿಟ್ಟು ಆ್ಯಂಬುಲೆನ್ಸ್ನಲ್ಲಿ ವಾಪಸ್ ಆಗುವಾಗ ಸಂಭವಿಸಿದ ಆಕ್ಸಿಡೆಂಟ್ನಲ್ಲಿ ಸಾವನ್ನಪ್ಪಿದ್ದಾರೆ.
ಏನಿದು ಘಟನೆ?
ನ್ಯಾಮತಿ ತಾಲ್ಲೂಕಿನ ಶಿಕಾರಿಪುರ-ಸವಳಂಗ ರಸ್ತೆಯ ಹೊಸಜೋಗ ಬಸ್ ನಿಲ್ದಾಣದ ಬಳಿ ಶುಕ್ರವಾರ ಈ ಘಟನೆ ಸಂಭವಿಸಿದೆ. ಕ್ಯಾಂಟರ್‌ಗೆ ಹಿಂಬದಿಯಿಂದ ಆ್ಯಂಬುಲೆನ್ಸ್ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಸ್ಟಾಫ್ ನರ್ಸ್ ವಿಶ್ವನಾಥ ಮನಗೊಳಿ (30) ಅವರು ಮೃತಪಟ್ಟಿದ್ದಾರೆ.
ಇದನ್ನು ಸಹ ಓದಿ : 2 ಕೆಜಿ ಗಾಂಜಾ ಜೊತೆ ಹೊಸಮನೆ, ಗಾಡಿಕೊಪ್ಪ, ಸವಾರ್ ಲೈನ್ ರಸ್ತೆ , ತುಮಕೂರಿನ ಆರೋಪಿ ಅರೆಸ್ಟ್! ಗಡಿಪಾರಾದವನು ಮಾರುತ್ತಿದ್ದನಾ ಆಂಧ್ರ ಗಾಂಜಾ?
ಘಟನೆಯ ಹಿನ್ನೆಲೆ
ತೀವ್ರ ಗಂಭೀರ ಸ್ವರೂಪದಲ್ಲಿದ್ದ ರೋಗಿಯನ್ನು ಶಿಕಾರಿಪುರದಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ವಿಶ್ವನಾಥ್ ಆ್ಯಂಬುಲೆನ್ಸ್ನಲ್ಲಿ ಕರೆತಂದಿದ್ದರು. ಆನಂತರ ವಾಪಸ್ ಶಿಕಾರಿಪುರಕ್ಕೆ ಸವಳಂಗ ರಸ್ತೆಯ ಮೂಲಕ ಹೋಗುವಾಗ, ಹೊಸಜೋಗ ಬಳಿ ಈ ಅಪಘಾತ ಸಂಭವಿಸಿದೆ.
ಎಲ್ಲಿಯುವರು ವಿಶ್ವನಾಥ್ ?
ಜಮಖಂಡಿ: ಪಟ್ಟಣದ ಶ್ರೀ ಸಿದ್ದ ರಾಮೇಶ್ವರ ಬಡಾವಣೆ ವಾಸಿ ವಿಶ್ವನಾಥ್ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಶುಶೂಪಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ ಮೂರೂವರೆ ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದರು.
ಇದನ್ನು ಸಹ ಓದಿ: ತೀರ್ಥಹಳ್ಳಿ ವಿಹಂಗಮಧಾಮದ ಮೇಲೆ ಪೊಲೀಸ್ ರೇಡ್! ದೇಶಿ,ವಿದೇಶಿ ಮದ್ಯ, ಕೋವಿ, ಕೊಂಬು ಸೇರಿದಂತೆ ವಿವಿಧ ವಸ್ತುಗಳು ಜಪ್ತಿ! ಏನಿದು ಪ್ರಕರಣ!?
ಇನ್ನಿಬ್ಬರಿಗೆ ಗಾಯ
ಘಟನೆಯಲ್ಲಿ ಕ್ಯಾಂಟರ್ ರಭಸವಾಗಿ ಡಿಕ್ಕಿ ಹೊಡೆದಿದ್ದರಿಂದ ಆ್ಯಂಬುಲೆನ್ಸ್ನಲ್ಲಿದ್ದ ವಿಶ್ವನಾಥ ಮನಗೊಳಿ ಸ್ಥಳದಲ್ಲೇ ಮೃತಪಟ್ಟಿ ದ್ದಾರೆ. ಆ್ಯಂಬುಲೆನ್ಸ್ ಮತ್ತು ಕ್ಯಾಂಟರ್ ಲಾರಿ ಚಾಲಕರಿಗೆ ಗಾಯಗಳಾಗಿದ್ದು, ಇಬ್ಬರಿಗೂ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಸುದ್ದಿಗಳು
ಭದ್ರಾವತಿ ಶಾಸಕರಿಗೆ ಹೊಸ ಜವಾಬ್ದಾರಿ! ಮಿಸ್ ಆಯ್ತಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ!?
ಶಿವಮೊಗ್ಗ ನಗರ ಶಾಸಕರಿಂದ ಉದ್ಘಾಟನೆಗೊಂಡ TS ಸರ್ಕಲ್! ಇಲ್ಲಿರೋ ವಿಶೇಷ ಏನು ಗೊತ್ತಾ?