2 ಕೆಜಿ ಗಾಂಜಾ ಜೊತೆ ಹೊಸಮನೆ, ಗಾಡಿಕೊಪ್ಪ, ಸವಾರ್ ಲೈನ್ ರಸ್ತೆ , ತುಮಕೂರಿನ ಆರೋಪಿ ಅರೆಸ್ಟ್! ಗಡಿಪಾರಾದವನು ಮಾರುತ್ತಿದ್ದನಾ ಆಂಧ್ರ ಗಾಂಜಾ?

The CEN police in Shivamogga city have seized two kg of ganja and arrested the four accused. ಶಿವಮೊಗ್ಗ ನಗರದ ಸಿಇಎನ್ ಠಾಣೆ ಪೊಲೀಸರು ಎರಡು ಕೆಜಿ ಗಾಂಜಾ ಜಪ್ತಿ ಮಾಡಿ ನಾಲ್ವರು ಆರೋಪಿಗಳನ್ನ ಬಂಧಿಸಿದ್ಧಾರೆ.

2 ಕೆಜಿ ಗಾಂಜಾ ಜೊತೆ ಹೊಸಮನೆ, ಗಾಡಿಕೊಪ್ಪ, ಸವಾರ್ ಲೈನ್ ರಸ್ತೆ , ತುಮಕೂರಿನ ಆರೋಪಿ ಅರೆಸ್ಟ್! ಗಡಿಪಾರಾದವನು ಮಾರುತ್ತಿದ್ದನಾ ಆಂಧ್ರ ಗಾಂಜಾ?

KARNATAKA NEWS/ ONLINE / Malenadu today/ Aug 12, 2023 SHIVAMOGGA NEWS 

ಶಿವಮೊಗ್ಗ ಪೊಲೀಸರು ಗಾಂಜಾ ವಿಚಾರದಲ್ಲಿ ಇವತ್ತು ಮತ್ತೊಂದು ಭರ್ಜರಿ ಬೇಟೆಯಾಡಿದ್ದಾರೆ. ಸಿಟಿ ಲಿಮಿಟ್​ನಲ್ಲಿಯೇ ಗಾಂಜಾ ಮಾರುತ್ತಿದ್ದ ಆರೋಪಿಗಳನ್ನ ಬಂಧಿಸಿ ಬರೋಬ್ಬರಿ 2 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ಧಾರೆ. 

ಏನಿದು ಪ್ರಕರಣ ?

ಶಿವಮೊಗ್ಗ ನಗರದ ಎಂ.ಆರ್.ಎಸ್. ನಿಂದ  ವಡ್ಡಿನಕೊಪ್ಪದ ಕಡೆಗೆ ಹೋಗುವ ರಸ್ತೆಯ  ಸಮೀಪ ಇರುವ ಕೆಇಬಿ ಖಾಲಿ ಜಾಗದಲ್ಲಿ ಕೆಲವರು ಗಾಂಜಾ ಮಾರುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ  ಡಿ.ಸಿ.ಆರ್.ಬಿ ಪೊಲೀಸ್ ಉಪಾಧೀಕ್ಷಕ  ಪ್ರಭು ಡಿ.ಟಿ ನೇತ್ರತ್ವದಲ್ಲಿ ಸಿಇಎನ್ ಕ್ರೈಂ ಪೊಲೀಸ್ ಠಾಣೆ ದೀಪಕ್, ಎಂ.ಎಸ್ ಟೀಂ  ಮರ್ದಾನ್‌ ಕಿರ್‌ವಾಡಿ, ಸಂದೀಪ್‌, ಸಮೀವುಲ್ಲಾ ಹಾಗೂ ಸಿಪಿಸಿ ಚಿದಂಬರ್, ಫಿರ್ ದೋಸ್ ಅಹಮ್ಮದ್, ಪರಮೇಶ್ವರಪ್ಪ, ರವಿ, ಪ್ರಮೋದ್, ಜಗದೀಶ್‌ ಸಂಗಮಶ್‌ ಮತ್ತು ಎಹೆಚ್‌ಸಿ ಪ್ರಕಾಶನಾಯಾ ರವರುಗಳನ್ನೊಳಗೊಂಡ ಗಾಂಜಾ ಮಾರಾಟದ ಜಾಲದ ಮೇಲೆ ದಾಳಿ ಮಾಡಿದೆ. 

ಇದನ್ನು ಸಹ ಓದಿ : ಟ್ಯಾಂಕರ್ ಬಂತು! ಬರಲಿದೆ ಯುದ್ದ ವಿಮಾನ! ಶಿವಮೊಗ್ಗದಲ್ಲಿ ಎಲ್ಲಿ ಸ್ಥಾಪನೆಯಾಗಲಿದೆ ಸ್ಮಾರಕ?

2ಕೆಜಿ ಗಾಂಜಾ ಪತ್ತೆ

ಪೊಲೀಸರ ದಾಳಿಯಲ್ಲಿ ಬರೋಬ್ಬರಿ 2 ಕೆಜಿ ಗಾಂಜಾ ಪತ್ತೆಯಾಗಿದೆ. ಇದರ ಅಂದಾಜು ಮೌಲ್ಯ 1,10,000/- ರೂಗಳಾಗಿವೆ. ಒಟ್ಟು 2 ಕೆ. ಜಿ ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 2,50,000/- ರೂಗಳ ಕೆಟಿಎಂ ಡ್ಯೂಕ್ ಬೈಕ್ ಅನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. 

ಬಂಧಿತರು ಯಾರು?

  • 1 ಪ್ರವೀಣ್ @ ಮೋಟು ಬಿನ್ ಮೂರ್ತಿ 24 ವರ್ಷ, ವಾಸ ಗೌರವ್ ಲಾಡ್ಜ್ ಹಿಂಭಾಗ ಸವಾರ್‌ ಲೈನ್ ರಸ್ತೆ, ಶಿವಮೊಗ
  •  2) ವಿಶಾಲ್, ಏ @ ಪಾಲ: ಔನ್ ವಿಶ್ವನಾಥ ಎಸ್, 25 ವರ್ಷ, ವಾಸ 06ನೇ ತಿರುವು ಹೊಸಮನೆ ಆಂಜನೇಯ ದೇವಸ್ಥಾನದ ಹತ್ತಿರ ಶಿವಮೊಗ್ಗ, 
  • 3) ನಿತೇಶ್‌ ಎಸ್‌ ವೈ, ಬಿನ್. ಎಸ್. ಯೋಗೇಶ್ 21 ವರ್ಷ, ವಾಸ ಕಲ್ಪತರು ಹಾಸ್ಟೆಲ್‌ ತಿಪಟೂರು ತುಮಕೂರು ಜಿಲ್ಲೆ, ಮತ್ತು
  • 4) ಪ್ರೀತಂ ಕೆ @ ಡಿಟೋ ಬಿನ್ ಕೃಷ್ಣ 22 ವರ್ಷ, ವಾಸ ದರ್ಗಾ ಲೇ ಔಟ್ 01ನೇ ತಿರುವು ಗಾಡಿಕೊಪ್ಪ  

ಇದನ್ನು ಸಹ ಓದಿ : ದಾವಣಗೆರೆಯಲ್ಲಿ ದಾಳಿಮಾಡಿದ್ದ ಆನೆ ಇರುವ ಕ್ಯಾಂಪ್​ಗೆ ಕಮ್​ಬ್ಯಾಕ್​ ಮಾಡಿದ ಡಾ.ವಿನಯ್​! ಆನೆ ದಿನಾಚರಣೆಯಲ್ಲಿ ಮಿಸ್ಸಿಂಗ್ ಆಗಿದ್ದೇನು ಗೊತ್ತಾ? ಖುಷಿಕೊಟ್ಟವನು ಯಾರು ಗೊತ್ತಾ?

ಗಡಿಪಾರಾಗಿದ್ದ ಆರೋಪಿಯಿಂದಲೇ ಗಾಂಜಾ ಮಾರಾಟ!

ಇನ್ನೂ ಈ ಪ್ರಕರಣದಲ್ಲಿ ಬಂಧಿತನಾಗಿರುವ ಎ1 ಆರೋಪಿ ಪ್ರವೀಣ್ ಅಲಿಯಾಸ್ ಮೋಟು ಇದೇ 2024 ಸಾಲಿನ ಮೇ ತಿಂಗಳವರೆಗೂ ಶಿವಮೊಗ್ಗ ಜಿಲ್ಲೆಯಿಂದ ಗಡಿಪಾರಾಗಿದ್ದ , ಈತನನ್ನ ಜಿಲ್ಲಾಧಿಕಾರಿಗಳು 2024 ಏಪ್ರಿಲ್ ತಿಂಗಳವರೆಗೆ ಶಿವಮೊಗ್ಗ ಜಿಲೆಯಿಂದ ಗಡಿಪಾರು ಮಾಡಿ ಆದೇಶ ಮಾಡಿದ್ದರು. ಆದರೆ ಆದೇಶ ಉಲ್ಲಂಘಿಸಿ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ಧಾನೆ. ಈತನ ಮೇಲೆ ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣವೂ ಸೇರಿದಂತೆ 10 ಪ್ರಕರಣಗಳಿವೆ. ಹಿಂದೊಮ್ಮೆ ಈತನ ಕಾಲಿಗೆ ಗುಂಡು ಹೊಡೆದು ಪೊಲೀಸರು ಅರೆಸ್ಟ್ ಮಾಡಿದ್ದರು. ಇದೀಗ ಗಾಂಜಾ ದಂಧೆಯಲ್ಲಿ ತೊಡಗಿದ್ದ ಈತನನ್ನ ಪೊಲೀಸರು ಬಂಧಿಸಿದ್ದಾರೆ.

ಇದನ್ನು ಸಹ ಓದಿ : ಫಾರ್ಚೂನರ್ ಕಾರಿನಲ್ಲಿ ಗಾಂಜಾ ಸಾಗಾಟ ! ತೀರ್ಥಹಳ್ಳಿ ತಾಲ್ಲೂಕು, ಮಾಳೂರು ಪೊಲೀಸರಿಂದ ಮೂವರು ವಶಕ್ಕೆ

ಏರಡನೇ ಆರೋಪಿ ರೌಡಿಶೀಟರ್

ಇನ್ನೂ ಪ್ರಕರಣದ ಎರಡನೇ ಆರೋಪಿ  ವಿಶಾಲ್, ಎ @ ಡಾಲು ಈತನೂ ಸಹ ರೌಡಿ ಆಸಾಮಿಯಾಗಿದ್ಧಾನೆ..  ಈತನ ವಿರುದ್ಧ ಶಿವಮೊಗ್ಗ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ, ಒಟ್ಟು 05 ಪ್ರಕರಣಗಳು ದಾಖಲಾಗಿವೆ.  4ನೇ ಆರೋಪಿ ಪ್ರೀತಂ ಕೆ @ ಡಿಟೋ ಈತನ ವಿರುದ್ಧವೂ ಕೂಡ ಶಿವಮೊಗ್ಗ ನಗರದ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 

ಆಂಧ್ರ ಗಾಂಜಾ ಜಪ್ತಿ?

ಈ ಹಿಂದೆ ಎಸ್​ಪಿ ಲಕ್ಷ್ಮೀಪ್ರಸಾದ್ ಇದ್ದ ಸಂದರ್ಭದಲ್ಲಿ ಆಂಧ್ರದ ಶೀಲಾವತಿ ಗಾಂಜಾ ದೊಡ್ಡಮಟ್ಟದಲ್ಲಿ ಶಿವಮೊಗ್ಗದಲ್ಲಿ ಸದ್ದು ಮಾಡಿತ್ತು. ಅಲ್ಲದೆ ಜಿಲ್ಲೆಯೊಳಗೆ ಸರಾಗವಾಗಿ ಬರುತ್ತಿದ್ದ ಆಂಧ್ರ ಗಾಂಜಾದ ಎಲ್ಲಾ ದಾರಿಗಳನ್ನು ಶಿವಮೊಗ್ಗ ಪೊಲೀಸರು ಬಹುತೇಕ ಬಂದ್ ಆಗುವಂತೆ ಮಾಡಿದ್ದರು. ಇದೀಗ ಇವತ್ತು ಪತ್ತೆಯಾಗಿರುವ ಗಾಂಜಾದ ಮೂಲ ಆಂಧ್ರ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.  

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು