ದಾವಣಗೆರೆಯಲ್ಲಿ ದಾಳಿಮಾಡಿದ್ದ ಆನೆ ಇರುವ ಕ್ಯಾಂಪ್​ಗೆ ಕಮ್​ಬ್ಯಾಕ್​ ಮಾಡಿದ ಡಾ.ವಿನಯ್​! ಆನೆ ದಿನಾಚರಣೆಯಲ್ಲಿ ಮಿಸ್ಸಿಂಗ್ ಆಗಿದ್ದೇನು ಗೊತ್ತಾ? ಖುಷಿಕೊಟ್ಟವನು ಯಾರು ಗೊತ್ತಾ?

Dr Vinay returns to camp where elephant attacked in Davanagere Do you know what was missing on Elephant Day? ದಾವಣಗೆರೆಯಲ್ಲಿ ದಾಳಿಗೊಳಗಾಗಿದ್ದ ಆನೆ ಇರುವ ಕ್ಯಾಂಪ್​ಗೆ ಕಮ್​ಬ್ಯಾಕ್​ ಮಾಡಿದ ಡಾ.ವಿನಯ್​! ಆನೆ ದಿನಾಚರಣೆಯಲ್ಲಿ ಮಿಸ್ಸಿಂಗ್ ಆಗಿದ್ದೇನು ಗೊತ್ತಾ? ಖುಷಿಕೊಟ್ಟವನು ಯಾರು ಗೊತ್ತಾ?

ದಾವಣಗೆರೆಯಲ್ಲಿ ದಾಳಿಮಾಡಿದ್ದ ಆನೆ ಇರುವ ಕ್ಯಾಂಪ್​ಗೆ ಕಮ್​ಬ್ಯಾಕ್​ ಮಾಡಿದ ಡಾ.ವಿನಯ್​! ಆನೆ ದಿನಾಚರಣೆಯಲ್ಲಿ ಮಿಸ್ಸಿಂಗ್ ಆಗಿದ್ದೇನು ಗೊತ್ತಾ? ಖುಷಿಕೊಟ್ಟವನು ಯಾರು ಗೊತ್ತಾ?

KARNATAKA NEWS/ ONLINE / Malenadu today/ Aug 12, 2023 SHIVAMOGGA NEWS 

ಇವತ್ತು ವಿಶ್ವ ಆನೆ ದಿನಾಚರಣೆ! ಜಗತ್ತಿನ ಗಜಪಡೆಯ ಸಂರಕ್ಷಣೆಗಾಗಿ ಇಡೀ ವಿಶ್ವದಲ್ಲಿ ಆಚರಿಸುವ ಆನೆ ಸಮೂಹದ ಬರ್ತ್​​ಡೇ ದಿನ. ಶಿವಮೊಗ್ಗದ ಸಕ್ರೆಬೈಲ್​ ಆನೆ ಬಿಡಾರದಲ್ಲಿ ಈ ಆಚರಣೆ ತುಸು ಜಾಸ್ತಿಯೇ ವಿಶೇಷ ಎನಿಸಿತ್ತು. ಇದಕ್ಕೆ ಕಾರಣ ಕುಂತಿ ಪುತ್ರ ದ್ರುವ…

ಸಕ್ರೆಬೈಲ್ ಆನೆ ಬಿಡಾರ. ಶಿವಮೊಗ್ಗದಿಂದ 14 ಕಿಲೋಮೀಟರ್ ದೂರದಲ್ಲಿ ತುಂಗೆಯ ಹಿನ್ನೀರಿನಲ್ಲಿರುವ ಸಾಕಾನೆಗಳ ಕುಟೀರ… ನಾಡಿನ ಮಂದಿ ಜೊತೆ ನಾಡಾನೆಗಳ ಸ್ವಚ್ಚಂದ ಪ್ರೀತಿಯ ಸಂವಹನ ನಡೆಯುವ ಸ್ಥಳದಲ್ಲಿ ಇವತ್ತು ಹಬ್ಬದ ವಾತಾವರಣ ಕಾಣಸಿಕ್ಕಿತ್ತು  

ಕುಂತಿಪುತ್ರ ದ್ರುವ ಆಟ ಚೆಲ್ಲಾಟ

ಆಗಸ್ಟ್ 12 ರಂದು ಆಚರಿಸುವ ವಿಶ್ವ ಆನೆ ದಿನಾಚರಣೆಯನ್ನು ಸಕ್ರೆಬೈಲ್​ನಲ್ಲಿಯು ವಿಶೇಷವಾಗಿ ಪ್ರತಿವರ್ಷ ಆಚರಿಸಲಾಗುತ್ತದೆ.. ಆದರೆ ಈ ಸಲ ಕ್ಯಾಂಪ್​ನಲ್ಲಿ  ಕುಂತಿ ಪುತ್ರ ದ್ರುವನ ಮಕ್ಕಳಾಟ ಆನೆ ದಿನಾಚರಣೆಗೆ ಮುಗ್ದ ಕಳೆ ನೀಡಿತ್ತು.

ದ್ರುವನ ನೋಡಲೇಂದೆ ವಿವಿಧ ಶಾಲೆಯ ಪುಟಾಣಿಗಳು ಸಹ ಬಂದಿದ್ದರು. ಎಲ್ಲಿದೆ ಆನೆ ಅಂದರೆ ಅಗೋ ಅಲ್ಲಿ ಅಂತಾ ತೋರಿಸುವ ಪುಟ್ಟ ಮಕ್ಕಳ ಎದುರು ದ್ರುವ ಮಜಾ ನೀಡುತ್ತಾ ಓಡಾಡಿದರೆ, ಹಿರಿಯಾನೆಗಳು, ಸಾಂಪ್ರದಾಯಿಕ ಸಿಂಗಾರ ಮಾಡಿಕೊಂಡು ಕೊಟ್ಟ ಕಬ್ಬಿನ ರುಚಿ ನೋಡುತ್ತಿದ್ದವು. 

ಆನೆಗಳ ಸಿಂಗಾರ, ಪ್ರವಾಸಿಗರ ಸಡಗರ

ಬಣ್ಣ ಬಣ್ಣದ ಸಿಂಗಾರಗಳ ಚಿತ್ರ ಮೈಮೇಲೆ ಬಿಡಿಸಿಕೊಂಡು, ಚೆಂಡೂವಿನ ಹಾರಗಳನ್ನ ಹಾಕಿಸಿಕೊಂಡು ತಲೆದೂಗುತ್ತಿದ್ದ ಆನೆಗಳ ನೋಡೆಲೆಂದೆ ಹೆಂಗಳೆಯರ ದಂಡು ಸಕ್ರೆಬೈಲ್​ ಬಿಡಾರದಲ್ಲಿ ಬೆಳಗ್ಗೆ…ಬೆಳಗ್ಗೆ ಟಿಕಾಣಿ ಹೂಡಿತ್ತು.

ಅತ್ತ ಆನೆಗಳು ಬಂದವರಿಗೆ ಪ್ರೀತಿಯ ಸ್ವಾಗತ ಕೋರುತ್ತಿದ್ದರೇ, ಮನೆಗೆ ಬಂದವರಿಗೆ ಅರಣ್ಯ ಸಿಬ್ಬಂದಿ ವಿಶ್ವಾಸದ ಆತಿಥ್ಯ ನೀಡುತ್ತಿದ್ರು. ಮನೆ ಮಂದಿ ಜೊತೆ ಬಂದ ಜನ ವೀಕೆಂಡ್​ನಲ್ಲಿ ನೆಮ್ಮದಿಯಾಗಿ ಕಾಡು ನೀಡಿದು ಉಡುಗೊರೆಗಳ ಜೊತೆ ಸಮಯ ಕಳೆಯುತ್ತಿದ್ದರು. 

ಆನೆ ಸಂಭ್ರಮಕ್ಕೆ ಇರದ ಗಜಪಡೆಯ ತಾಲೀಮು

ಹಿಂದೆಲ್ಲಾ  ಈ ಸಂದರ್ಭದಲ್ಲಿ ಬಿಡಾರದ ಆನೆಗಳ ತಾಲೀಮು ನಡೆಯುತ್ತಿತ್ತು. ಪುಟ್ಟ ಆನೆಗಳಿಂದ ಹಿಡಿದು ಹಿರಿಜೀವಗಳವರೆಗೂ ಪ್ರತಿಯೊಂದು ಆನೆಗಳು ಆಟವಾಡುತ್ತಿದ್ದವು. ಆದರೆ ಆನೆಗಳಲ್ಲಿ ಕಾಣಿಸಿಕೊಂಡ ಹರ್ಪಿಸ್​ ವೈರಸ್​ ನಿಂದ ಸಂಭವಿಸಿದ ಆನೆಗಳ ಸರಣಿ ಸಾವು.

ಆನೆಗಳ ಆಟೋಟ, ತಾಲೀಮು ಇತ್ಯಾದಿ ಚಟುವಟಿಕೆಗಳಿಗೆ ಕಡಿವಾಣ ಹಾಕಿತು. ಆ  ಸಂದರ್ಭದಲ್ಲಿ 10 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಆನೆಗಳಲ್ಲಿ ಕಾಣಿಸಿಕೊಂಡಿದ್ದ ಈ ವೈರಸ್ ಐದು ಆನೆಗಳು ಸಾವನ್ನಪ್ಪಿದ್ದವು. ಅವುಗಳು ಮೂರು ಮರಿಯಾನೆಗಳಾಗಿದ್ದವು. ಈ ಕಾರಣಕ್ಕೆ ಆನೆ ದಿನಾಚರಣೆಯಲ್ಲಿ ಕಂಡೀಷನ್​ಗಳು ಅಪ್ಲೆಯಾದವು. 

ಸಾಕಾನೆಗಳ ದೈವಿಕತೆಗೆ ನಾಡಿನ ಪೂಜೆ

ಈಗೇನಿದ್ದರೂ ಆನೆಗಳ ದಿನಾಚರಣೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿಶೇಷ ಪೂಜೆಯನ್ನ  ನಡೆಸಲಾಗುತ್ತದೆ. ಆನೆಗಳನ್ನ ಸಿಂಗಾರ ಮಾಡಿ, ಅವುಗಳಿಗೆ ವಿಶೇಷವಾದ ಆಹಾರ ಕೊಟ್ಟು ಖುಷಿಪಡುವದಕ್ಕಷ್ಟೆ ದಿನಾಚರಣೆ ಸೀಮಿತವಾಗಿದೆ. ಇವತ್ತೂ ಸಹ ಈ ಪ್ರಕ್ರಿಯೆಗಳು ವಿಶೇಷವಾಗಿ ನಡೆದವು.

ಜೊತೆಯಲ್ಲಿ ಏಷ್ಯಾಟಿಕ್​ ಎಲಿಪೆಂಟ್ ಸ್ಪೆಷಲಿಸ್ಟ್ ಗ್ರೂಪ್ ನಿಂದ ಆನೆಗಳ ಜೀವನ, ಅವುಗಳ ಸಂರಕ್ಷಣೆ, ಆಪರೇಷನ್ ಖೆಡ್ಡಾ, ಗಜಪಡೆಯ ಆರೈಕೆ, ಮಾವುತ, ಕಾವಾಡಿಗಳು ಹಾಗು ಅವುಗಳ ಸಂಬಂಧದ ಬಗ್ಗೆ ಕಾರ್ಯಾಗಾರವೂ ನಡೆಯಿತು. ಜೊತೆಯಲ್ಲಿ ಬಿಡಾರಕ್ಕೆ ಬಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳ ಜಾಥಾ ಆನೆ ದಿನಾಚರಣೆಯ ದಿನಕ್ಕೆ ವಿಶೇಷ ಸಾಕ್ಷ್ಯ ಕೊಟ್ಟು ಸಡಗರ ನೀಡಿತು.. 

ಕಮ್​ಬ್ಯಾಕ್ ಮಾಡಿದ ಡಾ. ವಿನಯ್​

ಕೆಳ ತಿಂಗಳ ಹಿಂದೆ ದಾವಣಗೆರೆಯಲ್ಲಿ ನಡೆದಿದ್ದ ಕಾಡಾನೆಯ ದಾಳಿಯ ಬಗ್ಗೆ ಕೇಳೇ ಇರುತ್ತೀರಿ, ಈ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವನ್ಯಜೀವಿ ಡಾಕ್ಟರ್​ ವಿನಯ್​ ಬಗ್ಗೆಯು ತಿಳಿದಿರುತ್ತೀರಿ. ವಿಶೇಷ ಅಂದರೆ, ಇವತ್ತು ಅವರು ಮತ್ತೆ ವೈಲ್ಡ್​ಲೈಫ್​ಗೆ ಕಮ್​ಬ್ಯಾಕ್ ಮಾಡಿದ್ರು.

ಕೆಲದಿನಗಳಿಂದ ಬಿಡಾರಕ್ಕೆ ಬರುತ್ತಿರುವ ಅವರು ಇವತ್ತು ಮತ್ತದೆ ರಗಡ್​ ಲುಕ್​ನಲ್ಲಿ ಆನೆಗಳನ್ನ ಮುಟ್ಟಿ ಅದರೊಂದಿಗೂ, ಅಲ್ಲಿಗೆ ಬಂದವರ ಜೊತೆಗೂ ಮಾತನಾಡುತ್ತಿದ್ರು. ಸುದೀರ್ಘ ಚಿಕಿತ್ಸೆ ಹಾಗೂ ವಿಶ್ರಾಂತಿಯ ನಂತರ ಬಂದಿದ್ದ ಡಾಕ್ಟರ್​ ವಿನಯ್​ರವರಿದ್ದ ತುಸುದೂರದ ಕ್ರಾಲ್​ನಲ್ಲಿ ದಾವಣಗೆರೆಯಲ್ಲಿ ದಾಳಿಮಾಡಿದ್ದ ಅಭಿಮನ್ಯು ನಾಡಿನ ಪರಿಸರಕ್ಕೆ ಹೊಂದಿಕೊಳ್ಳುವ ಪಾಠ ಕಲಿಯುತ್ತಿದ್ದ… 


ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು