ಸಾಗರ | ಬೀಡಾ ಅಂಗಡಿಗೆ ಬಂದು ಸಿಗರೇಟು, ಗುಟ್ಕಾ ಕೇಳಿದ ಶಾಸಕ | ಆನಂತರ ನಡೆಯಿತು ಈ ಸೀನ್‌ |

Mla Belur Gopalakrishna lashes out at man selling gutka near college in Sagar

ಸಾಗರ | ಬೀಡಾ ಅಂಗಡಿಗೆ ಬಂದು ಸಿಗರೇಟು, ಗುಟ್ಕಾ ಕೇಳಿದ ಶಾಸಕ  | ಆನಂತರ ನಡೆಯಿತು ಈ ಸೀನ್‌ |
Sagar,Mla Belur Gopalakrishna

SHIVAMOGGA | MALENADUTODAY NEWS | May 19, 2024  ಮಲೆನಾಡು ಟುಡೆ 

ಶಿಕ್ಷಣ ಸಂಸ್ಥೆಗಳಿಂದ ನೂರು ಮೀಟರ್‌ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಬಾರದು ಎನ್ನುತ್ತದೆ ರೂಲ್ಸ್‌. ಇದರ ನಡುವೆಯು ನಡೆಯುವ ಈ ವಹಿವಾಟಿನ ಮೇಲೆ ಅಧಿಕಾರಿಗಳು ಆಗಾಗ ರೈಡ್‌ ನಡೆಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಸಾಗರದಲ್ಲಿ ಸ್ವತಃ ಶಾಸಕರೇ ಇಂತಹದ್ದೊಂದು ರೇಡ್‌ ನಡೆಸಿದ್ದಾರೆ. 

ಹೌದು ಸಾಗರ ಶಾಸಕ ಹಾಗೂ  ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರುರವರು ನಿನ್ನೆ ದಿನ ಸಾಗರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಬಳಿ ತೆರಳಿದ್ದಾರೆ. ಅಲ್ಲಿದ್ದ ಅಂಗಡಿಯೊಂದಕ್ಕೆ ತೆರಳಿ  ಗುಟ್ಕಾ ಕೇಳಿದ್ರು, ಆ ಬಳಿಕ ಸಿಗರೇಟ್‌ ಕೊಡುವಂತೆ ಕೇಳಿದ್ರು. ಎರಡನ್ನು ಅಂಗಡಿಯವ ಶಾಸಕರಿಗೆ ಕೊಟ್ಟಿದ್ದ.

ಆತನ ಅಂಗಡಿಯಲ್ಲಿ ಗುಟ್ಕಾ , ಸಿಗರೇಟ್‌ ತಂಬಾಕು ಉತ್ಪನ್ನ ಸಿಗುತ್ತದೆ ಎಂದು ಗೊತ್ತಾದ ಬೆನ್ನಲ್ಲೆ ಶಾಸಕರು ಅಂಗಡಿಯಾತನನ್ನ ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲಯ್ಯ ಹೀಗೆಲ್ಲಾ ಮಾಡೋದು ಸರಿನಾ?  ಮಕ್ಕಳು ಇಂತವೆಕ್ಕೆಲ್ಲಾ ಅಟ್ರಾಕ್ಟ್‌ ಆಗಲ್ವಾ? ಇವತ್ತಿಗೆ ಕೈದು ಮಾಡು , ನಾಳೆಯಿಂದ ತಂಬಾಕು ಉತ್ಪನ್ನ ಮಾರಿದ್ರೆ ಹುಷಾರ್‌ ಎಂದು ಎಚ್ಚರಿಕೆ ಕೊಟ್ಟು ಬಂದಿದ್ದಾರೆ.