ಸುದ್ದಿಗಾರರ ಬದುಕಿಗೆ ವೇದಿಕೆ ಒದಗಿಸಿದ ಈ ಟಿವಿ, ಈ ನಾಡು, ರಾಮೋಜಿ ಫಿಲ್ಮಂ ಸಿಟಿ ಸ್ಥಾಪಕ ರಾಮೋಜಿ ರಾವ್‌ ಇನ್ನಿಲ್ಲ

 Ramoji Rao, the chairman of the Eenadu media group and founder of Ramoji Film City, is no more.

ಸುದ್ದಿಗಾರರ ಬದುಕಿಗೆ ವೇದಿಕೆ ಒದಗಿಸಿದ ಈ ಟಿವಿ, ಈ ನಾಡು, ರಾಮೋಜಿ ಫಿಲ್ಮಂ ಸಿಟಿ ಸ್ಥಾಪಕ ರಾಮೋಜಿ ರಾವ್‌ ಇನ್ನಿಲ್ಲ
 Ramoji Rao, Eenadu media group, Ramoji Film City

SHIVAMOGGA | MALENADUTODAY NEWS | Jun 7, 2024  ಮಲೆನಾಡು ಟುಡೆ 

ಸುದ್ದಿ ಜಗತ್ತಿನ ಸುದ್ದಿಗಾರರನ್ನ ಬೆಳಸಿದ ಕೀರ್ತಿ ಹೊಂದಿದ್ದ ಮಾದ್ಯಮ ಲೋಕದ ದಿಗ್ಗಜ ರಾಮೋಜಿ ರಾಂ ನಿಧನರಾಗಿದ್ದಾರೆ. ಈನಾಡು ಮಾಧ್ಯಮ ಸಮೂಹದ ಅಧ್ಯಕ್ಷ ಹಾಗೂ ರಾಮೋಜಿ ಫಿಲ್ಮ್ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ಶನಿವಾರ ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ. 

ರಾಮೋಜಿ ರಾವ್ ರವರಿಗೆ ಹೈದರಾಬಾದ್‌ನ ಸ್ಟಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ 87 ವರ್ಷವಾಗಿತ್ತು. ಕನ್ನಡ ಮಾಧ್ಯಮ ಲೋಕವೂ ಸೇರಿದಂತೆ ಈ ಟಿವಿ ಹೆಸರಿನ ದೊಡ್ಡ ಸಂಸ್ಥೆಯನ್ನು ಕಟ್ಟಿದ ರಾಮೋಜಿರಾವ್‌ ಸಾವಿರಾರು ಪತ್ರಕರ್ತರಿಗೆ ಬದುಕು ಕಟ್ಟಿಕೊಳ್ಳಲು ವೇದಿಕೆ ಒದಗಿಸಿದವರು. ರಾಜ್ಯದ ಹಲವಾರು ಸ್ಟಾರ್‌ ಟಿವಿ ಪತ್ರಕರ್ತರು ಈಟಿವಿಯಿಂದಲೇ ಕೆಲಸ ಆರಂಭಿಸಿದವರು. 

ಇಷ್ಟೆ ಅಲ್ಲದೆ  ಚಲನಚಿತ್ರ ನಿರ್ಮಾಣ ಸಂಸ್ಥೆ ಉಷಾ ಕಿರಣ್ ಮೂವೀಸ್, ಚಲನಚಿತ್ರ ವಿತರಣಾ ಕಂಪನಿ ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್, ಹಣಕಾಸು ಸೇವಾ ಸಂಸ್ಥೆ ಮಾರ್ಗದರ್ಶಿ ಚಿಟ್ ಫಂಡ್ ಮತ್ತು ಹೋಟೆಲ್ ಸರಪಳಿ ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್  ಹೀಗೆ ಹಲವು ಸಂಸ್ಥೆಗಳನ್ನ ಕಟ್ಟಿ ಬೆಳಸಿದ ರಾಮೋಜಿ ರಾವ್‌ ನಿಧನಕ್ಕೆ ಎಲ್ಲೆಡೆ ಸಂತಾಪ ವ್ಯಕ್ತವಾಗುತ್ತಿದೆ.  

 Ramoji Rao, the chairman of the Eenadu media group and founder of Ramoji Film City, is no more.