ಶಿವಮೊಗ್ಗ ಜಿಲ್ಲೆಗೆ ಮತ್ತೆ ಬಂದು ಹೋಯಿತೆ NIA | ನಾಲ್ವರಿಗೆ ನೋಟಿಸ್ ನೀಡಿ ಬೆಂಗಳೂರಿಗೆ ಬರಹೇಳಿದ್ದೇಕೆ?

The National Investigation Agency has issued notices to four people from Tirthahalli in connection with various casesವಿವಿಧ ಪ್ರಕರಣಗಳ ಸಂಬಂಧ ರಾಷ್ಟ್ರೀಯ ತನಿಖಾ ದಳ ತೀರ್ಥಹಳ್ಳಿಯ ನಾಲ್ವರಿಗೆ ನೋಟಿಸ್ ಜಾರಿ ಮಾಡಿದೆ

ಶಿವಮೊಗ್ಗ ಜಿಲ್ಲೆಗೆ ಮತ್ತೆ ಬಂದು ಹೋಯಿತೆ NIA |  ನಾಲ್ವರಿಗೆ ನೋಟಿಸ್ ನೀಡಿ ಬೆಂಗಳೂರಿಗೆ ಬರಹೇಳಿದ್ದೇಕೆ?KARNATAKA NEWS/ ONLINE / Malenadu today/ Oct 17, 2023 SHIVAMOGGA NEWSಶಿವಮೊಗ್ಗ ಜಿಲ್ಲೆಯಲ್ಲಿನ ಶಂಕಿತ ಚಟುವಟಿಕೆ ಸಂಬಂಧಿಸಿದಂತೆ NIA  ತನಿಖೆ ಇನ್ನೂ ಸಹ ಮುಂದುವರಿದೆ. ಇತ್ತೀಚೆಗೆ ದೆಹಲಿಯಲ್ಲಿ ಅರೆಸ್ಟ್​ ಮಾಡಿರುವ ಶಂಕಿತ ಅರಾಫತ್ ಅಲಿಗೆ ಸಂಬಂಧಿಸಿದಂತೆ ತೀರ್ಥಹಳ್ಳಿ ಮೂಲದ ನಾಲ್ವರಿಗೆ ಎನ್​ಐಎ ನೋಟಿಸ್ ನೋಟಿಸ್ ನೀಡಿದೆ 

ತುಂಗಾ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ ಹಾಗೂ ದೇಶದ ತ್ರಿವರ್ಣ ಧ್ವಜ ಸುಟ್ಟ ಪ್ರಕರಣ ಮತ್ತು ತೀರ್ಥಹಳ್ಳಿಯ ಶಂಕಿತ ಉಗ್ರ ಅರಫತ್ ಅಲಿ ಬಂಧನದ ವಿಚಾರವಾಗಿ ನಾಲ್ವರು ಬೆಂಗಳೂರಿಗೆ ಬಂದು ವಿಚಾರಣೆ ಎದುರಿಸಬೇಕು ಎಂದು ಎನ್​ಐಎ ತನ್ನ ನೋಟಿಸ್​ ನಲ್ಲಿ ತಿಳಿಸಿದೆ. 

ಈ ಸಂಬಂಧ ತೀರ್ಥಹಳ್ಳಿಗೆ ಎನ್​ಐಎ ಅಧಿಕಾರಿ ಬಂದು ನೋಟಿಸ್​ ನೀಡಿದ್ದಾರೆ ಎನ್ನಲಾಗಿದೆ. ಬರುವ ಅಕ್ಟೋಬರ್ 19 ರ ಮಧ್ಯಾಹ್ನ 1 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. 

ಅರಾಫತ್ ಅಲಿ ಹಾಗೂ ಇತರೇ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹೊಂದಿರುವ ಮಾಹಿತಿ ಪಡೆಯಲು ಎನ್​ಐಎ ಈ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ. 


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ