ಶಿವಮೊಗ್ಗ ಗ್ಯಾಂಗ್‌ ವಾರ್‌ | ಸಿಸಿ ಕ್ಯಾಮರಾದಲ್ಲಿ ಸೆರೆಸಿಕ್ಕ ದೃಶ್ಯದಲ್ಲಿ ಏನಿದೆ ?| ಜಸ್ಟ್‌ 2 ನಿಮಿಷದಲ್ಲಿ ಏನೆಲ್ಲಾ ಆಯ್ತು?

Shimoga Gang War | What is in the scene captured on the CC camera?| What happened in just 2 minutes?Lashkar Mohalla Case, Sheebu, Ghaus, Adil, Yasin, Gang War

ಶಿವಮೊಗ್ಗ ಗ್ಯಾಂಗ್‌ ವಾರ್‌ | ಸಿಸಿ ಕ್ಯಾಮರಾದಲ್ಲಿ ಸೆರೆಸಿಕ್ಕ ದೃಶ್ಯದಲ್ಲಿ ಏನಿದೆ ?| ಜಸ್ಟ್‌ 2 ನಿಮಿಷದಲ್ಲಿ ಏನೆಲ್ಲಾ ಆಯ್ತು?
Lashkar Mohalla Case, Sheebu, Ghaus, Adil, Yasin, Gang War, Shimoga Gang War

SHIVAMOGGA | MALENADUTODAY NEWS | May 10, 2024  

ಶಿವಮೊಗ್ಗ ಗ್ಯಾಂಗ್‌ ವಾರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಅಪ್‌ಡೇಟ್ಸ್‌ ಸಿಕ್ಕಿದೆ. ಆರೋಪಿಗಳು ಬೈಕ್‌ಗಳಲ್ಲಿ ಲಷ್ಕರ್‌ ಮೊಹಲ್ಲಾಕ್ಕೆ ನುಗ್ಗಿದ ಸಿಸಿ ಕ್ಯಾಮರಾ ದೃಶ್ಯಾವಳಿಗಳೂ ಮಾದ್ಯಮಗಳಿಗೆ ಲಭ್ಯವಾಗಿದೆ. 

ಲಷ್ಕರ್‌ ಮೊಹಲ್ಲಾದಲ್ಲಿರುವ ಅಂಗಡಿಯೊಂದರ ವಿಡಿಯೋ ಇದಾಗಿದ್ದು ದೃಶ್ಯದಲ್ಲಿ ಜನರು ಆತಂಕ ಪಡುವ ಸನ್ನಿವೇಶಗಳು ಕಾಣುತ್ತಿವೆ. 

ಅಲ್ಲದೆ ದುಷ್ಕರ್ಮಿಗಳ ತಂಡವೊಂದು ಬೈಕ್‌ಗಳಲ್ಲಿ ಮಾರಕಾಸ್ತ್ರಗಳಿಂದ ಬರುವ ಹಾಗೂ ಬಂದ ವೇಗದಲ್ಲಿಯೇ ವಾಪಸ್‌ ಆಗುವ ದೃಶ್ಯಗಳು ಸಹ ಕಾಣ ಸಿಕ್ಕಿವೆ.

ಈ  ಸಿಟಿ ಕ್ಯಾಮರಾದ ದೃಶ್ಯದಲ್ಲಿ ಮೊದಲು ದುಷ್ಕರ್ಮಿಗಳ ತಂಡವೊಂದು ಅಲ್ಲಿಗೆ ಕೂಗುತ್ತಾ ಬರುತ್ತದೆ. ಆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಳಿಕ ಅದೇ ತಂಡದ ಸದಸ್ಯರು ಕೆಲವೇ ಕ್ಷಣದಲ್ಲಿ ವಾಪಸ್‌ ಆಗುತ್ತಾರೆ. 

ಏನಿದೆ ಸಿಸಿ ಕ್ಯಾಮರಾದಲ್ಲಿ

ಘಟನೆ ನಡೆದ ದಿನ ಸಂಜೆ ಆರು ಗಂಟೆ ಒಂದು ನಿಮಿಷ ಸ್ಪಾಟ್‌ಗೆ ಬರುವ ಆರೋಪಿಗಳು ಕೇವಲ 1 ನಿಮಿಷದಲ್ಲಿ ತಮ್ಮ ದುಷ್ಕತ್ಯವಸಗಿ ಅಲ್ಲಿಂದ ಎಸ್ಕೇಪ್‌ ಆಗುತ್ತಾರೆ.

ಆರು ಗಂಟೆ 2 ನಿಮಿಷಕ್ಕೆ ಅಲ್ಲಿಂದ ಆರೋಪಿಗಳು ಎಸ್ಕೇಪ್‌ ಆಗುತ್ತಾರೆ. ಈ ವೇಳೆ ಯಾಸೀನ್‌ ಖುರೇಶಿಯ ಸಹಚರರು ಎಸ್ಕೇಪ್‌ ಆಗುತ್ತಿರುವವರ ಮೇಲೆ ಅಟ್ಯಾಕ್‌ ಮಾಡುತ್ತಾರೆ.

ಆರು ಗಂಟೆ 2 ನಿಮಿಷ ಮೂವತ್ತು ಸೆಕೆಂಡ್‌ ನಲ್ಲಿ ಗೌಸ್‌ ಹಾಗೂ ಶೀಬು ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುತ್ತದೆ. ಆರು ಗಂಟೆ ಎರಡು ನಿಮಿಷ ಐವತ್ತು ಸೆಕೆಂಡ್‌ ಯಾಸೀನ್‌ ಖುರೇಶಿಯನ್ನ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗುತ್ತದೆ. 

ಇದಿಷ್ಟು  ಸಿಸಿ ಕ್ಯಾಮರಾದಲ್ಲಿ ದೃಶ್ಯಾವಳಿಗಳಲ್ಲಿ ಕಾಣ ಸಿಗುತ್ತಿದೆ. ಇನ್ನೂ ದೃಶ್ಯದಲ್ಲಿ ಅತ್ಯಂತ್ರ ಭಯಬೀತರಾಗಿ ಅಂಗಡಿಗಳನ್ನ ಕ್ಲೋಸ್‌ ಮಾಡಿಕೊಂಡು ಒಳಗಡೆ ರಕ್ಷಣೆ ಪಡೆಯುತ್ತಾರೆ.

ತಮ್ಮವರನ್ನು ಎಚ್ಚರಿಸುವ ಜನರು, ಅಲ್ಲಿಗೆ ಹೋಗಬೇಡಿ ಎನ್ನುವ ಮಾತುಗಳು ಆಡುತ್ತಾರೆ. ಒಟ್ಟಾರೆ ಘಟನೆಯು ಸ್ಥಳೀಯವಾಗಿ ಜನರನ್ನ ಬೆಚ್ಚಿ ಬೀಳಿಸಿದೆ