ಕಂಟ್ರಿ ಕ್ಲಬ್‌ಗೆ ಹೋಗುವ ರಸ್ತೆಯಲ್ಲಿ ವ್ಯಕ್ತಿಯ ದರೋಡೆ! ಪೆಟ್ರೋಲ್‌ ಬಂಕ್‌ಗೆ ಡ್ರಾಪ್‌ ಕೊಡುವುದಾಗಿ ಹೇಳಿ ರಾಬರಿ!

A man's robbery on the road leading to the country club! kote Police Station Limits

ಕಂಟ್ರಿ ಕ್ಲಬ್‌ಗೆ ಹೋಗುವ ರಸ್ತೆಯಲ್ಲಿ  ವ್ಯಕ್ತಿಯ ದರೋಡೆ! ಪೆಟ್ರೋಲ್‌ ಬಂಕ್‌ಗೆ ಡ್ರಾಪ್‌ ಕೊಡುವುದಾಗಿ ಹೇಳಿ ರಾಬರಿ!
kote Police Station Limits

Shivamogga  Mar 29, 2024  kote Police Station Limits ಪೆಟ್ರೋಲ್‌ ಬಂಕ್‌ಗೆ ಡ್ರಾಪ್‌ ಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನ ದರೋಡೆ ಮಾಡಿದ ಸಂಬಂಧ ಶಿವಮೊಗ್ಗದ ಕೋಟೆ ಪೊಲೀಸ್‌ ಸ್ಟೇಷನ್‌ನಲ್ಲಿ IPC 1860 (U/s-394) ಅಡಿಯಲ್ಲಿ ಕೇಸ್‌ ದಾಖಲಾಗಿದೆ 

ನಡೆದಿದ್ದೇನು?

ಕಳೆದ 27 ರಂದು ಕಂಪನಿಯೊಂದರಲ್ಲಿ ಕಲೆಕ್ಷನ್‌ ಎಕ್ಸಿಕ್ಯೂಟಿವ್‌ ಆಗಿದ್ದ ವ್ಯಕ್ತಿಯೊಬ್ಬರು ಆ ದಿನದ 20 ಸಾವಿರ ರೂಪಾಯಿ ಕಲೆಕ್ಷನ್‌ ಹಣವನ್ನು ಸಂಗ್ರಹಿಸಿ ಮರುದಿನ ಮತ್ತೊಂದು ಕಡೆಗೆ ಕಲೆಕ್ಷನ್‌ಗಾಗಿ ಶಿಕಾರಿಪುರಕ್ಕೆ ಹೊರಟಿದ್ಧಾರೆ. 28 ನೇ ತಾರೀಖು ಬೆಳಗಿನ ಜಾವ  4.30 ಗಂಟೆಗೆ ಹೊರಟು ವಿದ್ಯಾನಗರದ ಕಡೆಯಿಂದ ಹೊಳೆ ಬಸ್ಟಾಪ್ ಹತ್ತಿರ ಬರುತ್ತಿರುವಾಗ ಬೈಕಿನಲ್ಲಿ, ಪೆಟ್ರೋಲ್ ಖಾಲಿಯಾಗಿದೆ. ಆದರೆ ಅಲ್ಲಿಯೇ ಇರುವ ದೀಪಕ್‌ ಪೆಟ್ರೋಲ್‌ ಬಂಕ್‌ ಇನ್ನೂ ಓಪನ್‌ ಆಗಿರಲಿಲ್ಲ. ಹೀಗಾಗಿ ಬೈಕ್‌ ನಿಲ್ಲಿಸಿ ಪೆಟ್ರೋಲ್‌ ತರಲು ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಯುವಕನೊಬ್ಬ ಎಲ್ಲಿಗೆ ಹೋಗುತ್ತಿದ್ದೀರಾ ಅಂತಾ ಪ್ರಶ್ನಿಸಿದ್ದಾನೆ. 

ಯುವಕನ ಪ್ರಶ್ನೆಗೆ ಪೆಟ್ರೋಲ್‌ ತರಲು ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಆಗ ಯುವಕ ಸೂಳೆಬೈಲ್‌ನಲ್ಲಿ ಪೆಟ್ರೋಲ್‌ ಬಂಕ್‌ ತೆಗೆದಿರುತ್ತದೆ. ಬನ್ನಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾನೆ. ಆತನ ಮಾತನ್ನ ನಂಬಿದ ಕಲೆಕ್ಷನ್‌ ಎಕ್ಸಿಕ್ಯೂಟಿವ್‌, ಅವರ ಬೈಕ್‌ನಲ್ಲಿ ವಿದ್ಯಾನಗರದ ಕಂಟ್ರಿಕ್ಲಬ್ ಕಡೆಗೆ ಹೋಗುವ ರಸ್ತೆಯಲ್ಲಿ ಸಾಗಿದ್ದಾರೆ. 

ಅಷ್ಟೊತ್ತಿಗೆ ಅಲ್ಲಿ ಇನ್ನೂ ಮೂವರು ಅಪರಿಚಿತ ಯುವಕರು ಅಲ್ಲಿಗೆ ಬಂದು ಚಾಕು ತೋರಿಸಿ ಹೆದರಿಸಲು ಆರಂಭಿಸಿದ್ದಾರೆ. ಅಲ್ಲದೆ ಮಾಡಿ ಕಲೆಕ್ಷನ್‌ ಹಣ 20 ಸಾವಿರ ಹಾಗೂ ಮೊಬೈಲ್‌ ಫೋನ್‌ ಕಸಿದುಕೊಂಡು ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್‌ ಸ್ಟೇಷನ್‌ನಲ್ಲಿ ಕೇಸ್‌ ದಾಖಲಾಗಿದ್ದು, ಸದ್ಯ ಪೊಲೀಸರು ತನಿಖೆ ನಡೆಸ್ತಿದ್ದಾರೆ.