ಪತ್ನಿ ಮಗುವಿಗೆ ವಿಷ ಕುಡಿಸಿದ್ನಾ ಪತಿರಾಯ! ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೇಂಟ್

Shivamogga  Feb 24, 2024  Shivamogga Rural Police Station  ಗಂಡನೇ ಪತ್ನಿ ಹಾಗೂ ಮಗುವಿಗೆ ವಿಷ ಕುಡಿಸಿದ ಆರೋಪವೊಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ಲಿಮಿಟ್ಸ್​ ನಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆಯು ಸಾವನ್ನಪ್ಪಿದ್ದು, ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. 

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್  ಲಿಮಿಟ್ಸ್​ನಲ್ಲಿ ವಾಸವಿರುವ ದಂಪತಿ ನಡುವೆ ಮೊದಲಿನಿಂದಲೂ ಕಲಹ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಗಂಡಿನ ಕಡೆಯವರು ವರದಕ್ಷಿಣೆ ಹಣಕ್ಕಾಗಿ ಹಲವು ಸಲ ಕಿರುಕುಳ ನೀಡಿದ್ದಾರೆ ಎಂದು ಕಂಪ್ಲೇಂಟ್​ ನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಹಿಂದೊಮ್ಮೆ ಮಹಿಳಾ ಪೊಲೀಸ್ ಸ್ಟೇಷನ್​ನಲ್ಲಿಯು ದೂರು ಕೊಡಲಾಗಿತ್ತು. ದೂರು ಕೊಟ್ಟ ಬಳಿಕವೂ ಮಹಿಳೆಯ ಮೇಲೆ ಹಲ್ಲೆ ನಡೆದಿದೆ. 

ಈ ನಡುವೆ ಮಹಿಳೆಗೆ ಹುಟ್ಟಿದ ಮಗುವೂ ಸೀಳುತುಟಿಯಿಂದ ಕೂಡಿದ್ದರಿಂದ ಗಂಡಿನ ಮನೆಯವರು ಇನ್ನಷ್ಟು ಹಿಂಸೆ ನೀಡಲು ಪ್ರಾರಂಭಿಸಿದರು ಎಂದು ಆರೋಪಿಸಲಾಗಿದೆ. ವಿಪರೀತ ಹಿಂಸೆಗಳ ನಡುವೆ ನಿನ್ನೆ ಇದ್ದಕ್ಕಿದ್ದ ಹಾಗೆ ಮಹಿಳೆಯನ್ನ ಹಾಗೂ ಮಗುವನ್ನ ಪತಿ ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಅಷ್ಟೊತ್ತಿಗೆ ಮಹಿಳೆ ಸಾವನ್ನಪ್ಪಿದ್ದಾಳೆ. ಮಗು ಸ್ಥಿತಿ ಚಿಂತಾಜನಕವಾಗಿದೆ. ಇನ್ನೊಂದು ಮಗುವಿನ ಕುರುಹು ಕೂಡ ಪತ್ತೆಯಾಗಿಲ್ಲ. ಈ ಸಂಬಂಧ ಫೋಷಕರು ದೂರು ನೀಡಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ. 

Leave a Comment