ಶಿವಮೊಗ್ಗ ಜಯನಗರ ಪೊಲೀಸ್ ಸ್ಟೇಷನ್​ನಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು! ಕಾರಣ ಇಲ್ಲಿದೆ

Complaint filed against Chakravarthy Sulibele at Jayanagar police station in Shivamogga Here's the reason

ಶಿವಮೊಗ್ಗ ಜಯನಗರ ಪೊಲೀಸ್ ಸ್ಟೇಷನ್​ನಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು! ಕಾರಣ ಇಲ್ಲಿದೆ
Chakravarthy Sulibele

Shivamogga | Feb 8, 2024 |  ಸಾಮಾಜಿಕ ಜಾಲತಾಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ ವಿಷಯವಾಗಿ ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸುತ್ತಿರುವ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಏರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಎನ್‌ಎಸ್‌ಯುಐ  ಶಿವಮೊಗ್ಗದ ಜಯನಗರ ಠಾಣೆಗೆ ದೂರು ಸಲ್ಲಿಸಿದೆ. 

ಜಯನಗರ ಪೊಲೀಸ್ ಸ್ಟೇಷನ್ 

ಎಸ್ ಎಸ್ಎಲ್‌ಸಿ  ಪೂರ್ವಸಿದ್ಧತಾ ಪರೀಕ್ಷಾ ವೇಳಾಪಟ್ಟಿಯಲ್ಲಿ ಇದೇ  ಮಾ.1ರಂದು ಶುಕ್ರವಾರ ವಿಜ್ಞಾನ ವಿಷಯದ ಪರೀಕ್ಷೆಯನ್ನು ಮಧ್ಯಾಹ್ನ 2ರಿಂದ 5.15ರವರೆಗೆ ನಿಗದಿ ಮಾಡಲಾಗಿದೆ. ಆ ದಿನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಆರಂಭವಾಗುತ್ತಿದ್ದು ಬೆಳಗಿನ ಸಮಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಇರುವ ಕಾರಣ ಸಮಯ ಬದಲಾವಣೆ ಮಾಡಲಾಗಿದೆ. 

ಉಳಿದ ಎಲ್ಲ ಪರೀಕ್ಷೆಗಳು ಸಹ ಬೆಳಗಿನ ಸಮಯಕ್ಕೆ ಸರ್ಕಾರ ನಿಗದಿಸಿದೆ.ಈ ಸಂಬಂಧ ಚಕ್ರವರ್ತಿಸೂಲಿಬೆಲೆ ಪರೀಕ್ಷಾ ವೇಳಾಪಟ್ಟಿಯಲ್ಲಿ ಮಾ.1ರಂದು ಶುಕ್ರವಾರ ಪರೀಕ್ಷಾ ದಿನಕ್ಕೆ ನೋಡಿದ ತಕ್ಷಣ ಎದ್ದು ಕಾಣುವಂತೆ ಮಾಡಿ ಪರೀಕ್ಷಾ ವೇಳಾಪಟ್ಟಿಯ ಮೇಲು ನೋಟಕ್ಕೆ ಅನ್ಯ ಧರ್ಮವನ್ನು ಹೀಯಾಳಿಸಿ ಬರೆದು ಸಾರ್ವಜನಿಕವಾಗಿ ಫೇಸ್ ಬುಕ್ ನಲ್ಲಿ ಹಾಕಿದ್ದಾರೆ ಎಂದು ಮನವಿಯಲ್ಲಿ ಎನ್​ಎಸ್​ಯುಐ ಆರೋಪಿಸಿದೆ. 

ಇದರಿಂದ ಸಮಾಜದಲ್ಲಿ ಆಶಾಂತಿವುಂಟುವಾಗ  ಸಾಧ್ಯತೆಗಳಿರುವುದರಿಂದ ಹಾಗೂ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಭೇದ-ಭಾವ ಉಂಟಾಗುವ ಸಾಧ್ಯತೆ ಇದ್ದು ತಕ್ಷಣವೇ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.