Mufti salman azhari ಅವರ ಬಂಧನ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ

ಹಂಚಿಕೊಳ್ಳಿ
WhatsApp Facebook X Telegram

Shivamogga | Feb 8, 2024 | ಗುಜರಾತ್ ನಲ್ಲಿ ವಿವಾದಾತ್ಮಕ ಭಾಷಣದ ಆರೋಪದಡಿ ಬಂಧಿಸಲಾದ ಮುಸ್ಲಿಂ ಗುರು mufti salman azhari ಅವರ ಬಂಧನ ಖಂಡಿಸಿ ಮರ್ಕಜಿ ಸುನ್ನಿ ಜಾಮಿಯಾ ಮಸಿದಿ ಜಿಲ್ಲಾ ಘಟಕ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳಿಗೆ ತಮ್ಮ ಮನವಿ ಸಲ್ಲಿಸಿದ್ದಾರೆ. 

ಮುಫ್ತಿ ಸಲ್ಮಾನ್​ ಅಝರಿಯವರು ಯಾವುದೇ ದ್ವೇಷ ಪೂರಿತ ವಿಚಾರಗಳ ಕುರಿತ ಮಾತನಾಡಿಲ್ಲ. ಆದಾಗ್ಯು ಅವರ ವಿರುದ್ಧ ದ್ವೇಷಭಾಷಣದ ಆರೋಪ ಹೊರಿಸಲಾಗಿದೆ. ಸುಳ್ಳು ಪ್ರಕರಣ ಹೂಡಿ ಅವರನ್ನ ಬಂಧಿಸಲಾಗಿದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಸದಸ್ಯರು ಆರೋಪಿಸಿದರು.  

ಇದೇ ವೇಳೆ ದೇಶದಲ್ಲಿ ಮುಸ್ಲಿಂಮರ ಬದುಕುವ ಹಕ್ಕು ಕಸಿದುಕೊಳ್ಳಲಾಗುತ್ತಿದೆ. ಇದು ಖಂಡನೀಯ ಎಂದು ದೂರಿದ ಪ್ರತಿಭಟನಾಕಾರರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಸುಳ್ಳು ಪ್ರಕರಣ ದಾಖಲಿಸುವ ಮೂಲಕ ವಾಕ್ ಮತ್ತು ಅಭಿವ್ಯಕ್ತಿ – ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ರು. ಅಲ್ಲದೆ ಬಂಧಿತ ಧರ್ಮಗುರುವನ್ನ ಬಿಡುಗಡೆ ಮಾಡಬೇಕು, ಅವರ ವಿರುದ್ದದ ಪ್ರಕರಣವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ರು. 

ಬಾಬರಿ ಮಸೀದಿ ಬಳಿ  ಜ್ಞಾನವ್ಯಾಪ್ತಿ ಮಸೀದಿಯ ಪ್ರಕರಣ ಮುನ್ನೆಲೆಗೆ ತರಲಾಗುತ್ತಿದೆ.ಜನರಲ್ಲಿ ಭಯ ಮತ್ತು ಅಭದ್ರತೆಯ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಧ್ಯೆ ಪ್ರವೇಶಿಸಿ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕೋಮುವಾದಿ ಶಕ್ತಿಗಳ ವಿರುದ್ಧ ಸಮರ ಸಾರಬೇಕು ಎಂದು ಆಗ್ರಹಿಸಿದರು. 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor