ಬಾಲಕಿಯ ಮದುವೆ ತಡೆದ ಶಿವಮೊಗ್ಗ ಪೊಲೀಸ್ ಸಿಬ್ಬಂದಿ! ವಿನೋಬನಗರದಲ್ಲಿ ಅಪ್ರಾಪ್ತನ ರಕ್ಷಣೆ!

Shimoga police personnel stop minor girl's marriage Minor rescued in Vinobanagar | Tunganagar Police Station, Vinobanagar Police Station, Shivamogga Police Personnel,

ಬಾಲಕಿಯ ಮದುವೆ ತಡೆದ ಶಿವಮೊಗ್ಗ ಪೊಲೀಸ್ ಸಿಬ್ಬಂದಿ! ವಿನೋಬನಗರದಲ್ಲಿ ಅಪ್ರಾಪ್ತನ ರಕ್ಷಣೆ!
Shimoga police personnel stop minor girl's marriage Minor rescued in Vinobanagar!

SHIVAMOGGA  |  Jan 26, 2024  |  ಶಿವಮೊಗ್ಗ ಪೊಲೀಸ್ ಇಲಾಖೆ ಸದ್ದಿಲ್ಲದೇ ನಡೆಯುತ್ತಿದ್ದ ಅಪ್ರಾಪ್ತೆಯೊಬ್ಬಳ ಮದುವೆಯನ್ನ ನಿಲ್ಲಿಸಿ ಬಾಲಕಿಯನ್ನು ರಕ್ಷಿಸಿದೆ. 

ಬಾಲ್ಯ ವಿವಾಹಕ್ಕೆ ಬ್ರೇಕ್

ಕಳೆದ 23 ನೇ ತಾರೀಖು ಶಿವಮೊಗ್ಗ ಜಿಲ್ಲೆ ತುಂಗಾನಗರ ಪೊಲೀಸ್ ಸ್ಟೇಷನ್  ವ್ಯಾಪ್ತಿಯಲ್ಲಿ ಅಪರಿಚಿತರು ಕರೆ ಮಾಡಿ ಹೀಗೊಂದು ಬಾಲ್ಯ ವಿವಾಹ ನಡೆಯುತ್ತಿದೆ ಎಂದು ದೂರಿದ್ದರು. ತಕ್ಷಣವೇ ಅಲರ್ಟ್ ಆದ ಪೊಲೀಸರು 112 ವಾಹನದ ಮೂಲಕ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲದೆ ಅಲ್ಲಿಯು ನಡೆಯಬೇಕಿದ್ದ ಮದುವೆಯ ವಿಚಾರದಲ್ಲಿ ಕುಟುಂಬಸ್ಥರನ್ನ ವಿಚಾರಿಸಿದ್ದಾರೆ. ಅಲ್ಲದೆ ಬಾಲಕಿಗೆ ಸಂಬಂಧಿಸಿದ ದಾಖಲೆಗಳನನ್ನ ಪಡೆದುಕೊಂಡು ಆ ಬಳಿಕ ಆಕೆಯನ್ನು  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಮುಂದಿನ ಹಂತದ ವಿಚಾರಣೆ ನಡೆಯುತ್ತಿದೆ. 

ಬಾಲಕಾರ್ಮಿಕನನ್ನ ರಕ್ಷಿಸಿದ ತಂಡ

ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಶಿವಮೊಗ್ಗ ನಗರ ಪ್ರದೇಶಗಳಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಇವರ  ಸಂಯುಕ್ತಾಶ್ರಯದಲ್ಲಿ ಜ.18 ರಂದು ಬಾಲಕಾರ್ಮಿಕ ತಪಾಸಣೆ ಹಮ್ಮಿಕೊಂಡಿತ್ತು. ಈ ವೇಳೆ ಬಾಲಕಾರ್ಮಿಕನನ್ನು ದುಡಿಸಿಕೊಳ್ತಿರುವ ಪ್ರಕರಣ ಪತ್ತೆಯಾಗಿದೆ. 

ವಿನೋಬನಗರ, ಬಿ.ಹೆಚ್.ರಸ್ತೆ 

ಶಿವಮೊಗ್ಗ ನಗರದ ವಿನೋಬನಗರ, ಆಟೋಕಾಂಪ್ಲೆಕ್ಸ್, ಬಿ.ಹೆಚ್ ರಸ್ತೆ ಹಾಗೂ ಎಪಿಎಂಸಿ ಮುಂತಾದ ಸ್ಥಳಗಳಲ್ಲಿ ಬಾಲಕಾರ್ಮಿಕ ತಪಾಸಣೆಯನ್ನು ನಡೆಸಿದ್ದ ತಂಡಕ್ಕೆ  ತಪಾಸಣೆಯಲ್ಲಿ ಓರ್ವ ಕಿಶೋರ ಕಾರ್ಮಿಕ ಪತ್ತೆಯಾಗಿದ್ದಾನೆ.

ವಿನೋಬನಗರ ಪೊಲೀಸ್ ಸ್ಟೇಷನ್ 

ಈ ಹಿನ್ನೆಲೆಯಲ್ಲಿ ಬಾಲಕಾರ್ಮಿಕನನ್ನ ದುಡಿಮೆಗೆ ಬಳಸಿಕೊಂಡ ಆರೋಪದಡಿಯಲ್ಲಿ ಮಾಲೀಕನ ವಿರುದ್ಧ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ರಡಿ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ

ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದ್ದು, ತಪಾಸಣೆಯಲ್ಲಿ ಇತರೆ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಬಾಲಕಾರ್ಮಿಕ ಕಾಯ್ದೆಯ ಕುರಿತು ಅರಿವು ಮೂಡಿಸಿದ್ದಾರೆ. ಈ ವೇಳೆ  ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ರಘುನಾಥ ಎ.ಎಸ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಲೋಚಕ ಪ್ರಮೋದ್, ಸಮಾಜ ಕಲ್ಯಾಣ ಇಲಾಖೆಯ ರಂಗನಗೌಡ, ಮಕ್ಕಳ ಸಹಾಯವಾಣಿ, ಪೊಲೀಸ್ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಸಿಬ್ಬಂದಿ ವರ್ಗದವರು ಹಾಜರಿದ್ದರೆಂದು ಪ್ರಕಟಣೆ ತಿಳಿಸಿದೆ.