ಮನೆಯಲ್ಲಿ ಟಿವಿ, ಪ್ರಿಡ್ಜು, ಮಿಕ್ಸಿ, ಬಂಗಾರ ಕಳ್ಳತನ ! ಮಗನ ವಿರುದ್ಧವೇ ತಾಯಿ ಕೊಟ್ಟಳು ಕಂಪ್ಲೆಂಟ್‌

ಹಂಚಿಕೊಳ್ಳಿ
WhatsApp Facebook X Telegram
ಮನೆಯಲ್ಲಿ ಟಿವಿ, ಪ್ರಿಡ್ಜು, ಮಿಕ್ಸಿ, ಬಂಗಾರ ಕಳ್ಳತನ ! ಮಗನ ವಿರುದ್ಧವೇ ತಾಯಿ ಕೊಟ್ಟಳು ಕಂಪ್ಲೆಂಟ್‌

Shivamogga Mar 19, 2024 Tunganagar Police Station ತಾಯಿಯೇ ತನ್ನ ಮಗನ ಮೇಲೆ ಕಳ್ಳತನದ ಆರೋಪ ಹೊರಿಸಿರುವ ಘಟನೆ ತುಂಗಾ ನಗರ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ ನಲ್ಲಿ ನಡೆದಿದೆ.  

ಏನಿದು ಪ್ರಕರಣ 

ಕಳೆದ ತಿಂಗಳು ನಡೆದ ಘಟನೆ ಸಂಬಂದ ತುಂಗಾನಗರ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ : IPC 1860 (U/s-380) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಮಹಿಳೆಯೊಬ್ಬರು ಈ ಬಗ್ಗೆ  ತಡವಾಗಿ ದೂರು ನೀಡಿದ್ದಾರೆ. ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿರುವ ತಂಗಿ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಘಟನೆಯು ನಡೆದಿದೆ ಎಂದು ಆರೋಪಿಸಿದ್ದಾರೆ. 

ವಾಪಸ್‌ ಮನೆಗೆ ಬಂದು ನೋಡಿದಾಗ ಮನೆ ಬೀಗ ಹಾಕಿರುವುದು ಕಂಡು ಇನ್ನೊಂದು ಕೀನಲ್ಲಿ ಬಾಗಿಲು ತೆಗೆದಾಗ ಮನೆಯಲ್ಲಿದ್ದ  ಬಂಗಾರ , ಪ್ರಿಡ್ಜು, ಟಿವಿ, ಟಿಪಾಯಿ, ಮಿಕ್ಸಿ ಸೇರಿದಂತೆ ಗೃಹೊಪಯೋಗಿ ವಸ್ತುಗಳು ಇಲ್ಲದಿರುವುದು ಗೊತ್ತಾಗಿದೆ. ಈ ಬಗ್ಗೆ ವಿಚಾರಿಸಿದ ನಂತರ ತಮ್ಮ ಮಗ ಅದನ್ನೆಲ್ಲಾ ವಾಪಸ್‌ ತಂದುಕೊಡುವ  ಸಾಧ್ಯತೆಯಿಂದ ಕಾದಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಇದೇ ವಿಚಾರದಲ್ಲಿ ಮಹಿಳೆ ತುಂಗಾನಗರ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾರೆ.  

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor