ತುಂಗಾ ನಗರ ಪೊಲೀಸ್ ಸ್ಟೇಷನ್​: ಮರಾಠಿ ಕ್ಯಾಂಪ್​ನ ನಿವಾಸಿಯ ಬಂಧನ! ವಿವರ ಇಲ್ಲಿದೆ

Tunga Nagar police station: Resident of Marathi camp arrested Here's the details

ತುಂಗಾ ನಗರ ಪೊಲೀಸ್ ಸ್ಟೇಷನ್​:  ಮರಾಠಿ ಕ್ಯಾಂಪ್​ನ ನಿವಾಸಿಯ ಬಂಧನ! ವಿವರ ಇಲ್ಲಿದೆ
Tunga Nagar Police Station,ತುಂಗಾ ನಗರ ಪೊಲೀಸ್ ಸ್ಟೇಷನ್,

SHIVAMOGGA  |  Dec 28, 2023  |  ಶಿವಮೊಗ್ಗ ತುಂಗಾ ನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಮಾದಕವಸ್ತು ಗಾಂಜಾ ಮಾರುತ್ತಿದ್ದ ಆರೋಪಿಯನ್ನು ಮಾಲು ಸಮೇತ ಬಂಧಿಸಲಾಗಿದೆ. 

ತುಂಗಾನಗರ ಪೊಲೀಸ್ ಸ್ಟೇಷನ್

ತುಂಗಾನಗರ ಪೊಲೀಸರು ಮಾದಕವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ  27-12-2023 ರಂದು  ಶಕ್ತಿದಾಮ ಲೇಔಟ್ ನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. 

ಈ ವೇಳೆ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ಬನು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ತುಂಗಾನಗರ ಪೊಲೀಸ್ ಠಾಣೆ   ಪೊಲೀಸ್ ಉಪನಿರೀಕ್ಷಕರು ಕುಮಾರ್ ಕೂರಗುಂದ ಹಾಗೂ ತುಂಗಾನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡ ರೇಡ್ ನಡೆಸಿದೆ. 

READ : ಲಾರಿಗೆ ಸಚಿವ ಮಧು ಬಂಗಾರಪ್ಪರವರ ಕಾರು ಡಿಕ್ಕಿ! ಸ್ವಲ್ಪದರಲ್ಲಿ ತಪ್ಪಿದ ಅಪಾಯ!

ಈ ವೇಳೆ ಆರೋಪಿ ನಾಗರಾಜ್ ನನ್ನ ಪೊಲೀಸರು ಬಂಧಿಸಿದ್ದಾರೆ.  38 ವರ್ಷ ನಾಗರಾಜ್​  ಮರಾಠಿ ಕ್ಯಾಂಪ್ ನವನಾಗಿದ್ದು, ಈತನ ಬಳಿಯಿಂದ  28,000/- ರೂಗಳ 680 ಗ್ರಾಂ ತೂಕದ ಒಣ ಗಾಂಜಾ ಮತ್ತು ರೂ 1050/- ನಗದು ಹಣವನ್ನು ಅಮಾನತುಪಡಿಸಿಕೊಳ್ಳಲಾಗಿದೆ. ಅಲ್ಲದೆ ಆತನ ವಿರುದ್ದ ತುಂಗಾನಗರ ಪೊಲೀಸ್ ಠಾಣೆಯಲ್ಲಿ  ಕಲಂ 20(ಬಿ) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.