ಮಲೆನಾಡು ಟುಡೆ ಸುದ್ದಿ / ಸೊರಬ / ತಾಲ್ಲೂಕಿನ ಕುಂಬತ್ತಿ ದುರ್ಗಾಂಬಾ ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕೇಶ್ (28) ಎಂಬಾತನನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಮಲೆನಾಡು ಟುಡೆಗೆ ಲಭ್ಯವಾದ ಪೊಲೀಸ್ ಮಾಹಿತಿ ಪ್ರಕಾರ, ಕಳೆದ ಆಗಸ್ಟ್ 26, 2026ರಂದು ಕುಂಬತ್ತಿ ದುರ್ಗಾಂಬಾ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳ್ತನವಾಗಿತ್ತು. ಆನಂತರ ಈ ವಿಷಯದಲ್ಲಿ ಸೊರಬ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಲಂ 305 ಮತ್ತು 331(4)ರಂತೆ ಕೇಸ್ ಆಗಿತ್ತು.
ಪ್ರಕರಣದ ತನಿಖೆಗಾಗಿ ಸೊರಬ ಸಿಪಿಐ ಮಹಾಂತೇಶ್ ಕಂಬಿ ಅವರ ಮೇಲ್ವಿಚಾರಣೆಯಲ್ಲಿ ಸೊರಬ ಠಾಣೆಯ ಪಿಎಸ್ಐ ನವೀನ್ ಎಂ.ಎಚ್. ಅವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಘವೇಂದ್ರ ಮತ್ತು ವಿನಯ ಅವರನ್ನು ಒಳಗೊಂಡ ತಂಡ ರಚಿಸಿಲಾಗಿತ್ತು,
ಈ ಟೀಂ ಇದೀಗ ಪ್ರಕರಣದ ಆರೋಪಿ ಶಿಕಾರಿಪುರ ತಾಲ್ಲೂಕಿನ ಪುಣೆದಹಳ್ಳಿ ನಿವಾಸಿ ರಾಕೇಶ್ (28) ಎಂಬಾತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಈತ ನವೀನ್ @ ದುರ್ಗ ಎಂಬಾತನೊಂದಿಗೆ ಸೇರಿ ಸೊರಬದ ಕುಂಬತ್ತಿ ದುರ್ಗಾಂಬಾ ದೇವಸ್ಥಾನ, ಜಂಬಾನಿ ಮಾರಿಕಾಂಬ ದೇವಸ್ಥಾನ ಹಾಗೂ ಶಿರಾಳಕೊಪ್ಪದ ಬಸನಂದಿಹಳ್ಳಿ ಚನ್ನಬಸವ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿ ಕಳ್ಳತನ ಮಾಡಿದ್ದಾನೆ ಎನ್ನಲಾಗಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ.
