ಸೊರಬದಲ್ಲಿ ಬಿಜೆಪಿಗೆ ಸಾಮೂಹಿಕ ವಲಸೆ! ಚಂದ್ರಗುತ್ತಿಯಲ್ಲಿ ಸಂಸದ ರಾಘವೇಂದ್ರ ಏನಂದ್ರು ಓದಿ

ಹಂಚಿಕೊಳ್ಳಿ
WhatsApp Facebook X Telegram
Leaders From Various Parties Join BJP in Soraba at Chandragutti Meeting
Leaders From Various Parties Join BJP in Soraba at Chandragutti Meeting

ಸುದ್ದಿಯ ಸ್ಥಳ: Soraba, Shivamogga, Karnataka

ಮಲೆನಾಡು ಟುಡೆ ಸುದ್ದಿ / ಸೊರಬ / ಚುನಾವಣೆಗಳು ಎದುರಾಗುತ್ತಿರುವಾಗಲೇ ಜಿಲ್ಲೆಯಲ್ಲಿ ರಾಜಕಾರಣವೂ ಗಂಭೀರವಾಗುತ್ತಿದೆ. ಅದರಲ್ಲಿಯು ಬಿಜೆಪಿ ಸೊರಬ ತಾಲ್ಲೂಕಿನ ಮೇಲೆ ಹೆಚ್ಚಿನ ಗಮನ ಕೊಡುತ್ತಿದೆ. ಶಿಕ್ಷಣ ಸಚಿವರ ತವರು ಕ್ಷೇತ್ರದ ಪ್ರತಿ ಅಂಶಗಳನ್ನ ಗುರುತಿಸಿರುವ ಬಿಜೆಪಿ ಮೊನ್ನೆಯಷ್ಟೆ ದೊಡ್ಡ ಪ್ರತಿಭಟನೆ ಕೈಗೊಂಡಿತ್ತು. ಆನಂತರ ಇದೀಗ ವಿವಿಧ ಪಕ್ಷಗಳ ಮುಖಂಡರನ್ನ ತನ್ನತ್ತ ಸೆಳೆದುಕೊಂಡಿದೆ. ಇದಕ್ಕೆ ಪೂರಕವಾಗಿ ಚಂದ್ರಗುತ್ತಿಯಲ್ಲಿ ನಡೆದ ಬಿಜೆಪಿ ಮಹಾಶಕ್ತಿ ಕೇಂದ್ರದ ಸಂಘಟನಾತ್ಮಕ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಪ್ರಮುಖರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಅಂತಾ ಸ್ವತಃ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದರೆ. ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ಬಿಜೆಪಿ ಮುಖಂಡರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಹಲವರು ಬಿಜೆಪಿ ಸೇರ್ಪಡೆಯಾದರು.

ಹೀಗೆ ಸೇರ್ಪಡೆಯಾದವರ ಪೈಕಿ ರಾಘವೇಂದ್ರ ಸುಂಟ್ರಹಳ್ಳಿ, ನಿರಂಜನ್, ರಾಜು ಗದ್ದೆಮನೆ, ಪೂಜಾ ರಾಘವೇಂದ್ರ, ವೀಣಾ ರಾಜು, ಶ್ಯಾಮಲಾ, ದಿಗಂಬರ ಗುಡವಿ, ಮಣಿಕಂಠ, ನಾಗರಾಜ್ ಗುಡವಿ, ಸುಮಲತಾ, ಅನಿತಾ ನಾಯಕ್, ಉಮೇಶ್ ಹರೀಶಿ ಸೇರಿದಂತೆ ಹಲವರುರಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ಅಭಿವೃದ್ಧಿಯ ಹೊಸ ಪರ್ವ ಆರಂಭವಾಗಿದೆ. ಬಡತನ ರೇಖೆಗಿಂತ ಕೆಳಗಿರುವ 45 ಕೋಟಿ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ಇನ್ನೂ ಮಾಜಿ ಸಚಿವ ಹರತಾಳು ಹಾಲಪ್ಪ, ತುಂಗಾ ನದಿಯಿಂದ ಸಿಗಂದೂರಿಗೆ ಹಾಗೂ ಜೋಗ ಜಲಪಾತದ ಬಳಿಯ ವರದಾ ನದಿಯಿಂದ ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ವಿಚಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಕಾಣುತ್ತಿದೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಭಾರತಿ ಶೆಟ್ಟಿ, ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ಅಗಸನಗಹಳ್ಳಿ, ಜಿಲ್ಲಾಧ್ಯಕ್ಷ ಜಗದೀಶ್, ಮುಖಂಡರಾದ ಡಾ. ಜ್ಞಾನೇಶ್, ರಾಘವೇಂದ್ರ ಸುಂಟರಹಳ್ಳಿ, ರಾಜು ಮಾವಿನಬಳ್ಳಿಕೊಪ್ಪ, ಸುರೇಶ್ ಉದ್ರಿ, ರಾಜು ತಲ್ಲೂರು, ಪಾಣಿ ರಾಜಪ್ಪ, ಟಿ.ಡಿ. ಮೇಘರಾಜ್, ಬಿ.ಪಿ. ಶ್ರೀಧರ್ ಈಡೂರು, ಶಿವಕುಮಾರ್ ಕಡಸೂರು, ಈಶ್ವರ ಚನ್ನಪಟ್ಟಣ, ಪರಮೇಶ್ವರ ಮಣ್ಣತ್ತಿ, ರಾಜು ಕೆಂಚಿಕೊಪ್ಪ, ಮಾಕೊಪ್ಪದ ಸಣ್ಣಪ್ಪ, ಗುರುನಾಥಗೌಡ, ಪ್ರಸನ್ನಶೇಟ್, ರುದ್ರ ಪ್ರಕಡೇರ್, ವೆಂಕಟೇಶ್, ದಿನೇಶ್ ಚಂದ್ರಗುತ್ತಿ, ವಿನಾಯಕ ಕಾನಡೆ, ವಿಶ್ವನಾಥ ಹೆಜ್ಜೆ ಉಪಸ್ಥಿತರಿದ್ದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor