ನಿನ್ನೆ ಶಿವಮೊಗ್ಗದಲ್ಲಿ ಸೃಷ್ಟಿಯಾಗಿತ್ತು ಬೆಂಗಳೂರು ಟ್ರಾಫಿಕ್! ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಏನೆಲ್ಲಾ ಮಾಡಿದ್ರು ಗೊತ್ತಾ

ಹಂಚಿಕೊಳ್ಳಿ
WhatsApp Facebook X Telegram
Shivamogga Traffic Police Deploy Extra Personnel Amid Deepavali Traffic Congestion
Shivamogga Traffic Police Deploy Extra Personnel Amid Deepavali Traffic Congestion
dasrara add shivamogga

ಸುದ್ದಿಯ ಸ್ಥಳ: Bengaluru, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಒಂದ್ಕಡೆ ದೀಪಾವಳಿ ಹಬ್ಬ, ವಿದ್ಯಾನಗರದಲ್ಲಿ ಗಣಪತಿ ವಿಸರ್ಜನೆ, ಈಚೆ ಬಂದರೆ, ಗಾಂಧಿ ಬಜಾರ್​ನಲ್ಲಿ ಪುಲ್ ವಹಿವಾಟಿನ ಅಬ್ಬರ! ಹಂಗಾಗಿ, ನಿನ್ನೆ ಮಧ್ಯಾಹ್ನದಿಂದಲೇ ಶಿವಮೊಗ್ಗ ಹೊಳೆಬಸ್​ಸ್ಟಾಪ್​ ನಿಂದ ಹಿಡಿದು ಬಸ್​ ನಿಲ್ದಾಣದವರೆಗೂ ಪುಲ್ ಜಾಮ್ ಆಗ್ತಿತ್ತು. ಅದರಲ್ಲಿಯು ಅಮಿರ್ ಅಹಮ್ ಸರ್ಕಲ್​ನಲ್ಲಿ ಕೇವಲ ಟುವೆ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ವೆಹಿಕಲ್ ಗಳು ಸಿಕ್ಕಸಿಕ್ಕಲ್ಲಿ ನುಗ್ಗಲು ಆರಂಭಿಸಿದ್ವು. ಪರಿಣಾಮ ಜಾಮ್ ಹೆಚ್ಚಾಯ್ತು.

shivamogga dasara add
dasrara add shivamogga
dasrara add shivamogga

ಸಂಜೆ ಹೊತ್ತಿಗೆ ಗಾಂಧಿ ಬಜಾರ್​ನ ರಶ್​ ಅಮಿರಾಮ ಸರ್ಕಲ್​ ದಾಟಿ ನಿಂತ್ತಿತ್ತು. ಈಚೆಗೆ ಚರ್ಚ್​​ ದಾಟಿ ಪಾಲಿಕೆವರೆಗೂ ಜನದಟ್ಟಣೆಯಿತ್ತು. ಇನ್ನೂ ಈ ಕಡೆ ವೀರಭದ್ರೇಶ್ವರ ಥಿಯೇಟರ್​ ವರೆಗೂ ಜನರ ಓಡಾಟ ಹೆಚ್ಚಿದ್ರೆ ಹಳೆದ ಶಿವಮೊಗ್ಗದ ಏರಿಯಾಗಳೆಲ್ಲಾ ಭರ್ಜರಿ ವಹಿವಾಟಿನ ಬೀದಿಗಳಗಾಗಿದ್ದವು. ಈಥರ ಜನರ ರಶ್​ ನಡುವೆ ದಾರಿಮಾಡಿಕೊಂಡು ವೆಹಿಕಲ್​ಗಳಲ್ಲಿ ಓಡಾಡುವಷ್ಟರಲ್ಲಿ ಸವಾರರು ಸುಸ್ತು ಹೊಡೆಯುತ್ತಿದ್ದರು. ಇನ್ನೂ ವೆಹಿಕಲ್​ಗಳು ಜಾಮ್​ ಆಗಿದ್ದನ್ನ ಬಿಡಿಸೋಕೆ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಎಷ್ಟು ಬೆವರು ಹರಿಸಿದ್ರೋ ಏನೋ?

ಸಂಜೆ ಕಥೆ ಹೀಗಾದರೆ, ಕತ್ತಲಾದ ಮೇಲೆ, ವಿದ್ಯಾನಗರದಲ್ಲಿ ಗಣಪತಿ ವಿಸರ್ಜನೆಯಿಂದಾಗಿ ತುಸು ಜಾಸ್ತಿನೇ ಟ್ರಾಫಿಕ್ ಜಾಮ್ ಆಯ್ತು. ಆ ಕಡೆ ಹೊಸ ಸೇತುವೆ ಕಡೆಗೆ ವೆಹಿಕಲ್​ಗಳನ್ನ ಮೂವ್ ಮಾಡಿದ್ರು. ಈ ಕಡೆ ಟ್ರಾಫಿಕ್ ಕಡಿಮೆಯಾಗಿರಲ್ಲ. ಇತ್ತ ಹಬ್ಬದ ಖರೀದಿಗೆ ಬರುವವರ ಸಂಖ್ಯೆ ಸಹ ಹೆಚ್ಚಾಯ್ತು. ಮನೆಗೆ ಹೋಗುವವರ ಮೂಮೆಂಟ್ ಸಹ ಶುರುವಾಗಿ ಶಿವಮೊಗ್ಗದ ಮೇನ್​ ಮೇನ್ ರಸ್ತೆಗಳೆಲ್ಲಾ ಥೇಟು ಬೆಂಗಳೂರಿನ ಗಲ್ಲಿ ಟ್ರಾಫಿಕ್​ನಂತೆ ಕಂಗೊಳಿಸಿತ್ತು.

shivamogga dasara add

ಹಾರ್ನ್​ಗಳ ಶಬ್ದ, ವೆಹಿಕಲ್​ಗಳ ಹೊಗೆ ನಡುವೆ ವೆಹಿಕಲ್ ಸವಾರರ ಹೋಗಪ್ಪ ಮುಂದೆ ಅನ್ನುವ ಆರ್ಭಟದ ನುಡಿಗಳ ನಡುವೆ, ಶಿವಮೊಗ್ಗ ಟ್ರಾಫಿಕ್ ಪೊಲೀಸರು ತಮ್ಮ ಮನೆ ಸಂಸಾರನೆಲ್ಲಾ ಮರೆತು ಡ್ಯೂಟಿ ಮಾಡಿದ್ರು. ಟ್ರಾಫಿಕ್ ಇನ್​ಸ್ಪೆಕ್ಟರ್​ ದೇವರಾಜ್ ಒಂದು ಹಂತದಲ್ಲಿ ಹೊಳೆಬಸ್​ಸ್ಟಾಪ್​ ಕಡೆಯಿಂದ ಸೇತುವೆ ಮೇಲೆ ಓಡುತ್ತಾರೆ. ಯಾವುದೋ ವೆಹಿಕಲ್​ನಿಂದ ಟ್ರಾಫಿಕ್ ಮೂವ್ ಆಗದನ್ನ ಗಮನಿಸಿದ ಅವರು ಓಡೋಡಿ ಅದನ್ನ ಸರಿಪಡಿಸುತ್ತಾರೆ. ಅವರ ಜೊತೆಗೆ ಎಸ್​ಐ ಮೇಡಂಗಳು ಸಹ ಒಂದೊಂದು ದಿಕ್ಕಿನಲ್ಲಿ ನಿಂತು, ಸರ್ಕಲ್​ಗಳ ಸಿಗ್ನಲ್​ಗಳಂತೆ ದಾರಿ ತೋರಿಸುತ್ತಾರೆ. ವಿಶೇಷ ಕಾರ್ಯಾಚರಣೆಯ ವೆಹಿಕಲ್ ಜೊತೆಗೆ ಹೆಚ್ಚುವರಿ ಸಿಬ್ಬಂದಿಗಳು ಸಹ ಸಂಚಾರ ದಟ್ಟಣೆಯನ್ನ ಕಂಟ್ರೋಲ್ ಮಾಡೋದಕ್ಕೆ ಹರಸಾಹಸ ಪಟ್ಟರು.

ಶಿವಮೊಗ್ಗ ಟ್ರಾಫಿಕ್ ಪೊಲೀಸ್

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರಕ್ಕೆ ವಿವಿಧ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಹಬ್ಬದ ಖರೀದಿ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ನಗರಕ್ಕೆ ಬರುವ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಅದೇ ರೀತಿ ಶಿವಮೊಗ್ಗದಿಂದ ವಿವಿಧ ಊರುಗಳಿಗೆ ತೆರಳುವ ವಾಹನಗಳ ಸಂಚಾರವೂ ಅಧಿಕವಾಗಿದೆ. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿದೆ.

ನಗರದ ಎಂ.ಆರ್.ಎಸ್. ವೃತ್ತ, ಹೊಳೆಹೊನ್ನೂರು ವೃತ್ತ, ಶಂಕರಮಠ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಶೋಕ ವೃತ್ತ, ಸಂದೇಶ್ ಮೋಟಾರ್ಸ್ ವೃತ್ತ ಹಾಗೂ ಬೈಪಾಸ್ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತಾದರೂ, ವಾಹನಗಳ ಸವಾರರು ಮಾತು ಕೇಳಬೇಕಲ್ಲ. ಎಲ್ಲಂದರಲ್ಲಿ ನುಗ್ಗಿಸಿ ಜಾಮ್ ಮಾಡಿಕೊಂಡು ನಡುರಸ್ತೆಯಲ್ಲಿ ನೀನ್ ಹೋಗು, ನೀನ್ ಹೋಗು ಅಂತಿದ್ದರೇ, ಪೊಲೀಸರಿಗೂ ಕೋಪ ನೆತ್ತಿಯ ತುದಿಗೆ ಏರಿರುತ್ತೆ. ಹಾಗಿದ್ರೂ ನಿನ್ನೆ ಮಾತ್ರ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಎಲ್ಲವನ್ನ ಕೂಲ್ ಕೂಲ್ ಹಾಗಿ ಹ್ಯಾಂಡಲ್ ಮಾಡಿಕೊಂಡ ಟೆನ್ಶನ್​ಗಳನ್ನ ತಮ್ಮೊಳಗೆ ಇಟ್ಟುಕೊಂಡರು.

ಸಂಚಾರಕ್ಕೆ ಉಂಟಾಗಿದ್ದ ಅಡಚಣೆ ತಪ್ಪಿಸುವ ಸಲುವಾಗಿ ಡೈವರ್ಷನ್ ಪಾಯಿಂಟ್‌ಗಳನ್ನ ಮಾಡಲಾಗಿತ್ತು. ಅಲ್ಲದೆ ಸಂಪರ್ಕ ರಸ್ತೆ ಹಾಗೂ ಮಾರ್ಗ ಬದಲಾವಣೆ ಸ್ಥಳಗಳಲ್ಲಿಯೂ ಸಿಬ್ಬಂದಿಯನ್ನ ನಿಯೋಜಿಸಲಾಗಿತ್ತು. ನಗರಕ್ಕೆ ಬರುವ ಮತ್ತು ನಗರದಿಂದ ಹೊರಹೋಗುವ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ನೋಡಿಕೊಂಡ ಪೊಲೀಸರು ಕೊನೆಗೂ ತಮ್ಮ ಕೆಲಸದಲ್ಲಿ ಸಕ್ಸಸ್ ಕಂಡರಾದರೂ, ಅವರಲ್ಲಿ ಹಬ್ಬದ ಉತ್ಸಾಹ ಉಳಿದಿರಲಿಲ್ಲ.

shivamogga dasara add
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor